ಶನಿವಾರ, ಅಕ್ಟೋಬರ್ 24, 2020
18 °C

ಕೋವಿಡ್-19 ಸೋಂಕಿತರು ಗುಣಮುಖರಾದ ಮೇಲೆ ಮರುಸೋಂಕಿನ ಬಗ್ಗೆ ಎಚ್ಚರಿಕೆ ಇರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

covid19

ಕೋವಿಡ್-19 ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತಲಿದ್ದು ನಮ್ಮ ಸುತ್ತಮುತ್ತಲಿನ ಜನರು ಅನೇಕರು ಸೋಂಕಿನಿಂದ ಗುಣಮುಖರಾಗಿರುವುದನ್ನು ಸಹ ನಾವು ಕಂಡಿದ್ದೇವೆ. ಅನೇಕ ಗುಣಮುಖ ಹೊಂದಿರುವ ವ್ಯಕ್ತಿಗಳಲ್ಲಿ ಮರುಸೋಂಕು ಅಥವಾ ರೋಗ ಮರುಕಳಿಸುವಿಕೆ (Relapse) ಆಗುವ ಭಯ ಕಾಡುತ್ತಿದೆ. 

ಏನಿದು ಮರುಸೋಂಕು ಅಥವಾ ರೋಗ ಮರುಕಳಿಸುವಿಕೆ (Relapse) ?

ಕೆಲವೊಂದು ವೈರಾಣುವಿನ ಸೋಂಕಿನಲ್ಲಿ ಅಂದರೆ ಮೀಸಲ್ಸ್, ಚಿಕನ್ ಪಾಕ್ಸ್ ಮುಂತಾದ ವೈರಾಣುವಿನ ಸೋಂಕಿನಲ್ಲಿ ಆ ವ್ಯಕ್ತಿಗೆ ಜೀವಿತಾವಧಿ ಆ ರೋಗದ ವಿರುದ್ಧ ಆಂತರಿಕ ಶಕ್ತಿಯು ವೃದ್ಧಿಸುತ್ತದೆ. ಆದರೆ ಕೋವಿಡ್-19 ಸೋಂಕು ಇಂತಹ ಜೀವಿತಾವಧಿ ಆ ರೋಗದ ವಿರುದ್ಧ ಆಂತರಿಕ ಶಕ್ತಿಯನ್ನು ವೃದ್ಧಿಸಬಲ್ಲದು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಏಕೆಂದರೆ ಆಂತರಿಕ ಶಕ್ತಿಯ ವೃದ್ಧಿಯ ಪ್ರಕ್ರಿಯೆಯು ಬಹಳ ಸಂಕೀಣವಾಗಿದ್ದು ಹೆಚ್ಚಿನ ಅಧ್ಯಯನಗಳ ಅವಶ್ಯಕತೆ ಇರುತ್ತದೆ. ಆದುದರಿಂದ ಕೋವಿಡ್ ಸೋಂಕಿತ ವ್ಯಕ್ತಿಯು ಮರುಸೋಂಕು ಹೊಂದಬಹುದಾಗಿರುತ್ತದೆ. ಇದು ಅವನಲ್ಲಿ ಉತ್ಪತ್ತಿಯಾದ ಆಂಟಿಬಾಡಿಸ್ ನ ಪ್ರಮಾಣವನ್ನು ಆಧರಿಸಿರುತ್ತದೆ.
ವೈರಾಣುವು ಕಾಯಿಲೆಯ ರೋಗಲಕ್ಷಣಗಳು ಗುಣಮುಖವಾದ ಮೇಲೂ ಸಹ ಶರೀರದಲ್ಲಿ ಹಲವು ದಿನಗಳು ನೆಲೆಯಾಗಿರುತ್ತದೆ. ಆದರೆ ಆವ್ಯಕ್ತಿ ಇನ್ನೊಬ್ಬರಿಗೆ ರೋಗವನ್ನು ಹರಡುವ ಸಾಂಕ್ರಾಮಿಕ ಲಕ್ಷಣಗಳು ಕಡಿಮೆಯಿರುತ್ತದೆ.

ರೋಗಲಕ್ಷಣಗಳು ಕಡಿಮೆಯಾದ ನಂತರವೂ ವೈರಾಣುವು ವ್ಯಕ್ತಿಯ ಮಲದಲ್ಲಿ, ಗಂಟಲಿನಲ್ಲಿ 2-3 ತಿಂಗಳವರೆಗೂ ನೆಲೆಯಾಗಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.

ಸಂಪೂರ್ಣ ಚಿಕಿತ್ಸೆಯ ನಂತರವೂ ಸಹ ವೈರಾಣು ದೇಹದಲ್ಲಿ ಕಾಣಬಹುದಾಗಿದ್ದು RT – PCR ಟೆಸ್ಟ್ ಪಾಸಿಟಿವ್ ಬರುವ  ಸಂಭವ ಹೆಚ್ಚಿರುತ್ತದೆ. ಆದರೆ ಅಂತಹ ವೈರಾಣುವು ಚಿಕಿತ್ಸೆಯ ಬಳಿಕ ದುರ್ಬಲವಾಗಿದ್ದು ರೋಗ ಉಲ್ಭಣಿಸುವ ಅಥವಾ ಹರಡುವ ಗುಣವನ್ನು ಕಳೆದುಕೊಂಡಿರುತ್ತದೆ.

ವೈರಾಣು ಹತ್ತು ದಿನಗಳ ನಂತರ 88% ತನ್ನ ಸಾಮಥ್ಯವನ್ನು ಕಳೆದುಕೊಂಡಿದ್ದು 15 ದಿನಗಳ ನಂತರ 95% ಸಾಮಥ್ಯವನ್ನು ಕಳೆದುಕೊಳ್ಳುತ್ತದೆ ಎಂದು ಅಧ್ಯಯನಗಳು ತಿಳಿಸಿವೆ.    

ಕೋವಿಡ್-19 ಸೋಂಕಿನಿಂದ ಗುಣಮುಖರಾದ ಮೇಲೆ ಹಾಗೂ ತನಗೆ ಸಂಬಂಧಪಟ್ಟ ಹತ್ತಿರದ ವ್ಯಕ್ತಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕೋವಿಡ್-19 ರಿಂದ ಗುಣಮುಖರಾದ ವ್ಯಕ್ತಿಗಳು ಆಂತರಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿರುವುದರಿಂದ ತನ್ನ ಹತ್ತಿರದ ಬಂಧುಗಳು, ತಾನು ಕೆಲಸ ಮಾಡುವ ಸ್ಥಳಗಳಲ್ಲಿನ ವ್ಯಕ್ತಿಗಳು ಅವರಿಗೆ ಮನೋಸ್ಥೈರ್ಯವನ್ನು ತುಂಬುವುದು ಅತಿ ಮುಖ್ಯವಾಗುತ್ತದೆ.
ಪೌಷ್ಠಿಕ ಆಹಾರ, ನಿಯಮಿತ ವ್ಯಾಯಾಮ ಆಂತರಿಕ ಶಕ್ತಿಯ ವೃದ್ಧಿಗೆ ಅವಶ್ಯಕ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು 3-6 ಅಡಿ, ಮುಖಗವಸು, ಕೈಗಳ ಸ್ವಚ್ಛತೆ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಗಳ ಬಳಕೆ ಮುಖ್ಯ.

ಜನಜಂಗುಳಿ ಇರುವ ಸ್ಥಳಗಳು, ಸಾಮಾಜಿಕ ಸ್ಥಳಗಳಿಂದ, ಸಮಾರಂಭಗಳಿಂದ ದೂರ ಉಳಿಯುವುದು ಒಳಿತು.

ನಿಮ್ಮ ಸುತ್ತಮುತ್ತಿಲಿನ ಜನ ಉಸಿರಾಟದ ನೈಮಲ್ಯತೆಯನ್ನು ಕಾಪಾಡಿಕೊಳ್ಳುವುದನ್ನು ಖಾತ್ರಿ ಮಾಡಿಕೊಳ್ಳಿ.

ಕೆಮ್ಮು, ಶೀತ, ಜ್ವರ ಅಥವಾ ಉಸಿರಾಟದ ಸಮಸ್ಯೆ ಮರುಕಳಿಸಿದರೆ ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ.

ಆಂತರಿಕ ಶಕ್ತಿ ಸೋಂಕಿನಿಂದ ಕುಗ್ಗಿರುವುದರಿಂದ ವೈಯಕ್ತಿಕ ಸ್ವಚ್ಛತೆಯ ಕಡೆಗೆ ಗಮನಹರಿಸುವುದು ಬಹಳ ಮುಖ್ಯ ಪಾತ್ರ ವಹಿಸುತ್ತದೆ.

ಆತ್ಮಸ್ಥೈರ್ಯ, ಮನೋಬಲ, ಸಕಾರಾತ್ಮಕ ಚಿಂತನೆಯಿಂದ ಯಾವುದೇ ಸೋಂಕಿನಿಂದ ಹೊರಬರಲು ಸಾಧ್ಯ ಎಂಬುದನ್ನು ಮನಗೊಳ್ಳಬೇಕಿದೆ.

ಲೇಖಕರು-  ಡಾ.ಜೆ.ಡಿ.ಸ್ಮಿತಾ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು