ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಳಿತುಕೊಂಡು ಮಾಡಿ ವ್ಯಾಯಾಮ!

Last Updated 23 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಕೆಲಸದ ಒತ್ತಡದ ನಡುವೆ ವ್ಯಾಯಾಮ ಹೆಚ್ಚುವರಿ ಕೆಲಸದಂತೆ ಉಳಿದು ಬಿಡುತ್ತದೆ. ಹೀಗಾಗಿಯೇ, ಮಾರುಕಟ್ಟೆಯಲ್ಲಿ ಮಲ್ಟಿಟಾಸ್ಕ್‌ ಮಾಡಬಹುದಾದ (ಒಂದು ಬಾರಿ ಎರಡು ಕೆಲಸ) ಸಾಧನಗಳಿವೆ. ಅವುಗಳಲ್ಲಿ ಯುವ ಪೀಳಿಗೆಯ ಅವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳ ಬಹುದಾದ ಸಾಧನ (mini cycle pedal) ಮಿನಿ ಸೈಕಲ್‌ ಪೆಡಲ್‌.

ಈ ಸಾಧನವನ್ನು ಬಳಸಿ ವ್ಯಾಯಾಮ ಮಾಡುವುದರ ಜೊತೆಗೆ ಓದುವುದು, ಬರೆಯುವುದು, ಮತ್ತಿತ್ತರ ಕೆಲಸಗಳನ್ನೂ ಮಾಡಬಹುದು.

ಹೇಗೆಲ್ಲ ಬಳಸಬಹುದು: ಈ ಸಾಧನ ಚಿಕ್ಕದಾಗಿರುವುದರಿಂದ ಎಲ್ಲ ಜಾಗದಲ್ಲಿಯೂ ಬಳಸಬಹುದು. ಈ ಸಾಧನದ ಪೆಡಲ್‌ನ ಜೊತೆ ಹಿಡಿಕೆಯೂ ಇರುತ್ತದೆ. ಕುಳಿತು ಸೈಕಲ್‌ ಪೆಡಲ್‌ ತುಳಿಯುವುದು, ಟೇಬಲ್‌ ಮೇಲಿಟ್ಟು ಕೊಂಡು ಕೈಗಳಿಂದ ಸಹ (ಪೆಡಲ್‌ನ ಹಿಡಿಕೆಯನ್ನು ಹಿಡಿದುಕೊಂಡು ಹಿಂದಕ್ಕೆ ಮತ್ತು ಮುಂದಕ್ಕೆ ಸುತ್ತುವುದರ ಮೂಲಕ) ಪೆಡಲ್‌ ವ್ಯಾಯಾಮ ಪ್ರಯತ್ನಿಸಬಹುದು. ಕುಳಿತು ವ್ಯಾಯಾಮ ಮಾಡುವುದು ನಿಮಗೆ ಸರಿಯಾಗಿ ಕಾಣಿಸದಿದ್ದರೆ, ನಿಮ್ಮ ಕೈಗಳನ್ನು ಗೋಡೆಗೆ ಒರಗಿಸಿಕೊಂಡು ಪೆಡ್‌ ಮಾಡಬಹುದು.

ಉಪಯೋಗಗಳೇನು?: ಹೆಸರೇ ಸೂಚಿಸುವಂತೆ ಇದು ಸೈಕಲ್‌ನ ತಮ್ಮನಂತೆ. ಸೈಕಲ್‌ ಬಳಸುವಾಗ ಆಗುವ ಹಲವು ಉಪಯೋಗಗಳು ಈ ಮಿನಿ ಸೈಕಲ್‌ ಬಳಸುವಾಗ ಆಗುತ್ತದೆ. ಇದನ್ನು ಕೈ ಮತ್ತು ಕಾಲು ಎರಡು ಭಾಗಗಳಲ್ಲಿ ಬಳಸುವುದರಿಂದ ತೋಳು, ಭುಜ, ಬೆರಳುಗಳು ಮತ್ತು ಮಾಂಸಖಂಡಗಳ ರಕ್ತ ಸಂಚಾರಕ್ಕೂ ಸಹಾಯವಾಗುತ್ತದೆ. ಈ ಸಾಧನವನ್ನು ನಿರಂತರವಾಗಿ ಬಳಸುವ ಮೂಲಕ ಹಂತ ಹಂತವಾಗಿ ತೂಕವನ್ನೂ ಕಡಿಮೆಮಾಡಿಕೊಳ್ಳಬಹುದು. ಒಂದು ದಿನಕ್ಕೆಮಿನಿ ಸೈಕಲ್‌ ಪೆಡಲ್‌ ಮಾಡುವುದರಿಂದ 100 ರಿಂದ 150 ಕ್ಯಾಲೋರಿಸ್‌ ಬರ್ನ್‌ ಆಗುತ್ತದೆ.

ಸುಧಾರಿತ ಸಾಧನ: ಈ ಸಾಧನ ಹೆಚ್ಚು ಸುಧಾರಿತ ತಂತ್ರಜ್ಞಾನ ದಿಂದ ಕೂಡಿದೆ. ನೀವು ಎಷ್ಟು ಕಿ.ಮೀ ಓಡಿದ್ದೀರ, ಎಷ್ಟು ಕ್ಯಾಲೋರಿಸ್‌ ಬರ್ನ್‌ ಆಗಿದೆ ಎನ್ನುವುದನ್ನು ಇದರಲ್ಲಿ ನೋಡಬಹುದು. ಪ್ರತಿ ದಿನ ನೀವು ಈ ಸಾಧನದಲ್ಲಿ ಒಂದು ಗುರಿ ನಿಗದಿಪಡಿಸಿಕೊಂಡು ವ್ಯಾಯಾಮ ಮಾಡಬಹುದು.

ಅನಾರೋಗ್ಯದಿಂದ ಬಳಲುತ್ತಿರುವವರಿಗೂ ಉಪಯೋಗ: ಈ ಸಾಧನವನ್ನು ಅನಾರೋಗ್ಯ ವಿರುವವರೂ ಬಳಸಬಹುದು (ವೈದ್ಯರ ಸಲಹೆ ಪಡೆದು) ಹೆಚ್ಚು ತೂಕ ಎತ್ತಲು ಆಗದಿರುವವರು, ಕೈಗೆ ಪಟ್ಟಾಗಿ ಸಮಸ್ಯೆ ಎದುರಿಸುತ್ತಿರುವವರು, ಹಗುರಾದ ಸಾಧನವನ್ನು ಬಳಸಿ ವ್ಯಾಯಾಮ ಮಾಡಲು ಇಚ್ಛಿಸುವವರು ಈ ಸಾಧನವನ್ನು ಬಳಸಿ ವ್ಯಾಯಾಮ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT