ಗಂಟಲು ನೋವು ಎಲ್ಲಾ ಋತುಗಳಲ್ಲಿಯೂ ಕಾಡುವಂತಹ ಸಮಸ್ಯೆಯಾಗಿದೆ. ಶೀತ ಹಾಗೂ ಜ್ವರದ ಸಂದರ್ಭದಲ್ಲಿ ತುಸು ಹೆಚ್ಚೆ ಭಾದಿಸುತ್ತದೆ. ಗಂಟಲು ನೋವಿಗೆ ಸಾಕಷ್ಟು ಔಷಧಿಗಳು ಲಭ್ಯವಿವೆ. ಆದರೆ ಮನೆಯಲ್ಲಿಯೇ ಗಂಟಲು ನೋವಿನಿಂದ ಪರಿಹಾರ ಪಡೆಯಬಹುದು. ಹಾಗದರೆ ಗಂಟಲು ನೋವನ್ನು ಶಮನಗೊಳಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದು

ಬೆಚ್ಚಗಿನ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಗಂಟಲಿನ ನೋವು ಕಡಿಮೆಯಾಗುತ್ತದೆ. ಅಲ್ಲದೇ ಉಪ್ಪಿನಲ್ಲಿರುವ ಸೋಡಿಯಂ ಅಂಶ ಗಂಟಲಿನಲ್ಲಿರುವ ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ. ಅರ್ಧ ಟೀ ಚಮಚದಷ್ಟು ಉಪ್ಪನ್ನು ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಬೆರೆಸಿ ದಿನಕ್ಕೆ ಮುರ್ನಾಲ್ಕು ಬಾರಿ ಮುಕ್ಕಳಿಸಿದರೆ ತ್ವರಿತವಾಗಿ ಗಂಟಲು ನೋವು ಕಡಿಮೆಯಾಗಬಹುದು.

ಜೇನುತುಪ್ಪ ಮತ್ತು ನಿಂಬೆ ರಸ

ಜೇನುತುಪ್ಪ ನೈಸರ್ಗಿಕವಾಗಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿರುತ್ತದೆ. ನಿಂಬೆಹಣ್ಣು ವಿಟಮಿನ್ ಸಿ ಯಿಂದ ಸಮೃದ್ಧವಾಗಿರುತ್ತದೆ. ಈ ಎರಡರ ಮಿಶ್ರಣ ಬ್ಯಾಕ್ಟೀರಿಯಾಗಳಿಗೆ ರಾಮಬಾಣವಾಗಿವೆ. ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆ ರಸ ಹಾಗೂ ಒಂದು ಟೀ ಚಮಚ ಜೇನುತುಪ್ಪವನ್ನು ಬೆರೆಸಿ ಸೇವಿಸಿ. ಇದು ಗಂಟಲ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಶುಂಠಿ ಚಹಾ

ಶುಂಠಿ ಉರಿಯೂತ ನಿವಾರಕ ಹಾಗೂ ಆಂಟಿಮೈಕ್ರೊಬಿಯಲ್ಗಳಿಂದ ಸಮೃದ್ದವಾಗಿರುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಶುಂಠಿ ಚಹಾ ಸೇವನೆಯಿಂದ ಗಂಟಲು ನೋವು ಕಡಿಮೆ ಮಾಡಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು

ಶೀತದ ವೇಳೆನ ಗಂಟಲು ಒಣಗಿರುತ್ತದೆ. ಬಿಸಿ ನೀರಿನ ಆವಿ ತೆಗೆದುಕೊಳ್ಳುವುದರಿಂದ ಗಂಟಲು ತೇವಗೊಳ್ಳುತ್ತದೆ. ಗಂಟಲು ಕಡಿತ ಹಾಗೂ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.

ಹೆಚ್ಚು ನೀರು ಕುಡಿಯುವುದು

ದೇಹವನ್ನು ನಿರ್ಜಲೀಕರಣದಿಂದ ತಪ್ಪಿಸಲು ಆಗಾಗ ನೀರು ಅಥವಾ ಗಿಡಮೂಲಿಕೆಗಳ ಪಾನೀಯಗಳನ್ನು ಸೇವಿಸಬೇಕು. ದ್ರವ ರೂಪದ ಪದಾರ್ಥಗಳು ಗಂಟಲು ನೋವಿನಿಂದ ಉಪಶಮನ ನೀಡುತ್ತವೆ ಎಂದು ವೈದ್ಯರು ಸಲಹೆ ನೀಡುತ್ತಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.