ರಾಗಿ.. ಪೌಷ್ಟಿಕ ಆಹಾರದ ಅಧಿಪತಿ. ನಮ್ಮ ಸಾಂಪ್ರದಾಯಿಕ ಆಹಾರದ ಪಟ್ಟಿಯಲ್ಲಿ ಪ್ರಧಾನ ಸ್ಥಾನದಲ್ಲಿದೆ. ಗಾತ್ರದಲ್ಲಿ ಕಿರಿದಾದರೂ ಗುಣದಲ್ಲಿ ಹಿರಿದಾದ ಈ ಧಾನ್ಯದಲ್ಲಿ ಅಧಿಕ ಪೋಷಕಾಂಶಗಳಿವೆ. ನಾರಿನಂಶ, ಪ್ರೋಟಿನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶಗಳಿವೆ. ಅಷ್ಟೇ ಅಲ್ಲದೆ, ವಿಟಮಿನ್ ಬಿ, ವಿಟಮಿನ್ ಡಿ, ಮೆಗ್ನೀಶಿಯಂ, ಬಿ ಜೀವಸತ್ವಗಳಿವೆ. ದೇಶದಾದ್ಯಂತ ವೈವಿಧ್ಯಮಯ ರಾಗಿ ತಳಿಗಳಿವೆ. ಒಂದೊಂದು ಪ್ರದೇಶದಲ್ಲಿ ಒಂದು ವಿಶಿಷ್ಟ ತಳಿಗಳು ಕಾಣಸಿಗುತ್ತವೆ.ಅವುಗಳಿಂದ ವಿಭಿನ್ನ ಖಾದ್ಯ ತಯಾರಿಸಬಹುದು.

ಮಕ್ಕಳಿಗೆ ರಾಗಿ ಅಭ್ಯಾಸ ಮಾಡಿಸಿ:ರಾಗಿಯಿಂದ ಮಾಡಿದ ಖಾದ್ಯಗಳನ್ನು ಸೇವಿಸುವ ಅಭ್ಯಾಸ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಅದರಲ್ಲೂ ರಾಗಿಯಿಂದ ಮುದ್ದೆ, ಮಾಲ್ಟ್‌ನಂತಹ ಖಾದ್ಯಗಳನ್ನಷ್ಟೇ ತಯಾರಿಸಲಾಗುತ್ತಿದೆ.

ಹೀಗಾಗಿ ಮಕ್ಕಳು ರಾಗಿ ಉತ್ಪನ್ನಗಳನ್ನು ತಿನ್ನಲು ಆಸಕ್ತಿ ತೋರದಿರಬಹುದು ಆದರೆ, ರಾಗಿ ಸೇವನೆಯು ಮಕ್ಕಳ ಆರೋಗ್ಯದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವ ಅತ್ಯುತ್ತಮ ಧಾನ್ಯ. ಸುಲಭವಾಗಿ ಜೀರ್ಣವಾಗುವ, ಅಲರ್ಜಿರಹಿತ ಆಹಾರವಾಗಿದೆ. ಮಕ್ಕಳಲ್ಲಿ ರಾಗಿ ಸೇವನೆ ಬಗ್ಗೆ ಆಸಕ್ತಿ ಉಂಟು ಮಾಡಲು, ರಾಗಿಯಲ್ಲಿ ಸಿದ್ಧಪಡಿಸಬಹುದಾದ ವಿವಿಧ ಬಗೆಯ ಆಹಾರ ಪದಾರ್ಥಗಳಿವೆ.

ರಾಗಿ ಮಾಲ್ಟ್:ಆರು ತಿಂಗಳು ತುಂಬಿದ ಮಗುವಿಗೆ ರಾಗಿಯಿಂದ ತಯಾರಿಸುವ ಮಾಲ್ಟ್ ನೀಡಲು ವೈದ್ಯರು ಸಲಹೆ ನೀಡುತ್ತಾರೆ. ಈಗಿನ ಕಾಲದವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಇನ್‌ಸ್ಟಂಟ್ ಫುಡ್‌ಗಳಿಂದ ಮಾಡಿದ ಮಾಲ್ಟ್‌ಗಳನ್ನು ಮಕ್ಕಳಿಗೆ ನೀಡುತ್ತಾರೆ. ಇದರ ಬದಲಿಗೆ ರಾಗಿ ಮಾಲ್ಟ್ ಮಾಡಿ ಮಗುವಿಗೆ ತಿನ್ನಿಸುವುದರಿಂದ ಮಗುವಿನ ಆರೋಗ್ಯ ಹೆಚ್ಚಲಿದೆ. ಈ ಮಾಲ್ಟ್‌ನಿಂದ ಸ್ನಾಯುಗಳ ಬೆಳವಣಿಗೆ, ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆ ಬಲಗೊಳ್ಳುತ್ತದೆ ಮತ್ತು ಅಗತ್ಯ ಪೋಷಕಾಂಶ ದೊರೆಯಲಿದೆ.

ರಾಗಿ ಮಾಲ್ಟ್ ತಯಾರಿಕೆ:ನುಣ್ಣಗೆ ಸೋಸಿದ ರಾಗಿ ಹಿಟ್ಟನ್ನು ತೆಗೆದುಕೊಳ್ಳಿ, ಸಣ್ಣ ಕಪ್‍ನಲ್ಲಿ ರಾಗಿ ಹಿಟ್ಟು ನೀರನ್ನು ಹಾಕಿ ಯಾವುದೇ ಗಂಟು ಕಟ್ಟದಂತೆ ಉಂಡೆಗಳಾಗದಂತೆ ಮಿಶ್ರ ಮಾಡಿಟ್ಟಿರಿ. ಪಾತ್ರೆಗೆ ನೀರನ್ನು ಹಾಕಿ, ನೀರು ಕುದಿಯಲು ಬಂದ ನಂತರ ಕರಗಿದ ರಾಗಿ ಹಿಟ್ಟಿನಲ್ಲಿ ಸೇರಿಸಿ, ಈ ಮಿಶ್ರಣವು 5 ನಿಮಿಷಗಳ ನಂತರ ಗಟ್ಟಿಯಾಗುತ್ತಾ ಹೋಗುತ್ತದೆ. ಆ ವೇಳೆ ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಹಾಲು, ಏಲಕ್ಕಿ ಪುಡಿಯನ್ನು ಸೇರಿಸಬೇಕು. ಕನಿಷ್ಠ 5 ರಿಂದ 10 ನಿಮಿಷಗಳ ಕಾಲ ಕುದಿಸಬೇಕು. ಮಕ್ಕಳಿಗೆ ಸ್ವಲ್ಪ ಗಟ್ಟಿಯಾದ ಮಾಲ್ಟ್ ತಯಾರಿಸಬಹುದು. ವಯಸ್ಕರಿಗೆ ಅಥವಾ ಹಿರಿಯರಿಗೆ ತೆಳ್ಳಗಿನ ಮಾಲ್ಟ್ ಸಿದ್ಧಪಡಿಸಬೇಕು. ಹೀಗೆ ಸೇವಿಸುವುದರಿಂದ ದೇಹವು ತಂಪಾಗುವುದರ ಜೊತೆಗೆ, ಹೆಚ್ಚು ಆರೋಗ್ಯಕರವಾಗಿರಲಿದೆ. ಮಕ್ಕಳ ಬೆಳವಣಿಗೆಗೆ ಇದು ಪೂರಕ.

ಕರುಳಿನ ಆರೋಗ್ಯಕ್ಕೆ ರಾಗಿ ಸಂಜೀವಿನಿ:ರಾಗಿಯ ಖಾದ್ಯಗಳು ಮಕ್ಕಳಲ್ಲಿ ಜೀರ್ಣಕ್ರಿಯೆಗೆ ಉತ್ತಮ ಆಹಾರವಾಗುತ್ತದೆ. ರಾಗಿಯು ಶೇ 20ರಷ್ಟು ಪ್ರಮಾಣ ಫೈಬರ್ ಹೊಂದಿದ್ದು, ಸುಲಭವಾಗಿ ಜೀರ್ಣಕ್ರಿಯೆಗೆ ಸಹಕರಿಸಲಿದೆ. ಮಕ್ಕಳಲ್ಲಿ ಸರ್ವೇಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾದ ಬೆಳವಣಿಗೆಗೂ ಸಹಕಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಸೇವಿಸಬಹುದಾದ ಆಹಾರಧಾನ್ಯ ರಾಗಿ.

ಅಪೌಷ್ಟಿಕತೆ ನಿವಾರಣೆ

ಅರೆ-ಶುಷ್ಕ ಉಷ್ಣವಲಯದ ಅಂತರರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ, ಪೌಷ್ಟಿಕಾಂಶ ತಜ್ಞೆ ಡಾ. ಎಸ್. ಅನಿತಾ ನೇತೃತ್ವದಲ್ಲಿ, ನಾಲ್ಕು ದೇಶಗಳಲ್ಲಿ ಏಳು ಸಂಸ್ಥೆಗಳು ನಡೆಸಿದ ಇತ್ತೀಚಿನ ಅಧ್ಯಯನ ವರದಿಯ ಪ್ರಕಾರ, ರಾಗಿ ಧಾನ್ಯ ಮಕ್ಕಳು ಮತ್ತು ಹದಿಹರೆಯದವರಲ್ಲಿ ಶೇ 26 ರಿಂದ 39ರಷ್ಟು ಬೆಳವಣಿಗೆಯನ್ನು ಹೆಚ್ಚಿಸಬಹುದು. ರಾಗಿಯ ಸೇವನೆಯು ಅಪೌಷ್ಟಿಕತೆಯನ್ನು ಹೋಗಲಾಡಿಸುತ್ತದೆ.

(ಲೇಖಕರು: ಹೆಡ್, ನ್ಯೂಟ್ರಿಷನ್ ಸೈನ್ಸಸ್, ಐಟಿಸಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.