ಬೆಂಗಳೂರು: ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದ ಕೊಲ್ಕತ್ತಾದ 160 ಕೆ.ಜಿ. ತೂಕದ 38 ವರ್ಷದ ವ್ಯಕ್ತಿಗೆ ನಗರದ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರು ಯಕೃತ್ತು ಕಸಿ ಮಾಡಿದ್ದಾರೆ.

ಯಕೃತ್ತಿಗಾಗಿ ಹೆಸರು ನೋಂದಾಯಿಸಿದ್ದ ರವೀಂದ್ರ ಅವರು, 3 ತಿಂಗಳಿನಿಂದ ಕಸಿಗಾಗಿ ಕಾಯುತ್ತಿದ್ದರು. ದಾನಿ ಸಿಗದ ಪರಿಣಾಮ ಅವರ ಆರೋಗ್ಯವು ಇನ್ನಷ್ಟು ಹದಗೆಟ್ಟಿತ್ತು. ಕಸಿ ಮಾಡದಿದ್ದಲ್ಲಿ ಅವರ ಜೀವಕ್ಕೆ ಅಪಾಯವಾಗುವ
ಸಾಧ್ಯತೆಗಳಿದ್ದವು. ಜ.8ರಂದು ದಾನಿಯು ದೊರೆತ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ, ಮೂರು ವಾರಗಳು ನಿಗಾದಲ್ಲಿ ಇರಿಸಿದ್ದರು. ಬಳಿಕ ಅವರು ಚೇತರಿಸಿಕೊಂಡ ಕಾರಣ ಮನೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆ
ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.