ವಾಷಿಂಗ್ಟನ್: ಪೆನ್ಸಿಲ್ ಲೆಡ್ನಲ್ಲಿ ಕಂಡುಬರುವ ಗ್ರಾಫೈಟ್ನಿಂದ ತಯಾರಿಸಿದ ಎಲೆಕ್ಟ್ರೋಡ್ಗಳನ್ನು ಬಳಸಿ ಹೊಸ, ಅಗ್ಗದ, ವೇಗ ಮತ್ತು ಹೆಚ್ಚು ನಿಖರವಾದ ಕೋವಿಡ್ -19 ಪರೀಕ್ಷೆಯ ಕಿಟ್ ಅನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಪ್ರಸ್ತುತ ಲಭ್ಯವಿರುವ ಕೋವಿಡ್ -19 ಪರೀಕ್ಷಾ ವಿಧಾನವು ನಿಖರತೆ ಮತ್ತು ಪ್ರಯೋಗಾಲಯದ ಮಾದರಿಯನ್ನು ವಿಶ್ಲೇಷಿಸಲು ತೆಗೆದುಕೊಳ್ಳುವ ಸಮಯದಲ್ಲಿ ಸೀಮಿತವಾಗಿದೆ ಎಂದು ಗಮನಿಸಿರುವ ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ತಂಡವು ಈ ಹೊಸ ವಿಧಾನವನ್ನು ಕಂಡುಹಿಡಿದಿದೆ.

ಅಲ್ಲದೆ, ಪ್ರಸ್ತುತ ಕೋವಿಡ್ -19 ಪರೀಕ್ಷೆಗಳ ಇನ್ನೊಂದು ಸವಾಲೆಂದರೆ, ಪರೀಕ್ಷೆಗಳು ಮಾಡಿಸಲು ತೆರಬೇಕಾದ ದುಬಾರಿ ವೆಚ್ಚ ಮತ್ತು ಅವುಗಳನ್ನು ನಿರ್ವಹಿಸಲು ಹಾಗೂ ವಿಶ್ಲೇಷಿಸಲು ತರಬೇತಿ ಪಡೆದ ಸಿಬ್ಬಂದಿ ಅಗತ್ಯವಿರುತ್ತದೆ ಎಂದು ಅವರು ಹೇಳಿದ್ದಾರೆ.

ಪಿಎಎನ್ಎಸ್ ಜರ್ನಲ್ನಲ್ಲಿ ಪ್ರಕಟವಾದ ಸಂಶೋಧನೆಯ ವರದಿ ಪ್ರಕಾರ, ಈ ಹೊಸ ಗ್ರ್ಯಾಫೈಟ್ ಎಲೆಕ್ಟ್ರೋಡ್ ಪರೀಕ್ಷಾ ವಿಧಾನದಲ್ಲಿ ಪ್ರತಿ ಪರೀಕ್ಷೆಯ ವೆಚ್ಚ ಕೇವಲ 1.50(₹112.48) ಡಾಲರ್ ಆಗುತ್ತದೆ. ಫಲಿತಾಂಶ ಪಡೆಯಲು ಕೇವಲ 6.5 ನಿಮಿಷ ಸಾಕು.

ಕಡಿಮೆ ಬೆಲೆಯ ಎಲೆಕ್ಟ್ರೋಕೆಮಿಕಲ್ ಅಡ್ವಾನ್ಸ್ಡ್ ಡಯಾಗ್ನೋಸ್ಟಿಕ್ (ಎಲ್ಇಎಡಿ) ಪರೀಕ್ಷೆಯು ಲಾಲಾರಸದ ಮಾದರಿಗಳಿಂದ ಶೇಕಡಾ 100 ರಷ್ಟು ನಿಖರವಾದ ಫಲಿತಾಂಶಗಳನ್ನು ನೀಡುತ್ತದೆ. ಮೂಗಿನ ಮಾದರಿಗಳಲ್ಲಿ ಶೇಕಡಾ 88 ರಷ್ಟು ನಿಖರತೆಯನ್ನು ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.