‘ನಾನು ಲೈಂಗಿಕಕ್ರಿಯೆಯಲ್ಲಿ ತೊಡಗಿದಾಗೆಲ್ಲಾ ಬಹುಬೇಗನೆ ವೀರ್ಯಸ್ಖಲನವಾಗುತ್ತದೆ. ಇದಕ್ಕೇನಾದರೂ ಪರಿಹಾರವಿದೆಯೇ? ಈ ರೀತಿಯ ಸ್ಖಲನವನ್ನು ನಿಯಂತ್ರಿಸಲು ಸಾಧ್ಯವಿದೆಯೇ?’

ಲೈಂಗಿಕತಜ್ಞರ ಬಳಿ ಬರುವ ಬಹುಪಾಲು ಪುರುಷರ ಪ್ರಶ್ನೆ ಇದಾಗಿರುತ್ತದೆ.

ಲೈಂಗಿಕಕ್ರಿಯೆಯ ಸಮಯದಲ್ಲಿ ಅತಿ ಬೇಗನೆ ವೀರ್ಯಸ್ಖಲನವಾಗುವುದನ್ನು ‘ಅಕಾಲಿಕ ಸ್ಖಲನ’ ಎನ್ನಲಾಗುತ್ತದೆ. ಇದು ಸ್ಖಲನದ ಸಾಮಾನ್ಯ ಸಮಸ್ಯೆ. ಇದಕ್ಕೆ ಕೆಲವರು ‘ಶೀಘ್ರಸ್ಖಲನ’ ಎನ್ನುತ್ತಾರೆ.

ಹೀಗೆ ಅತಿ ಬೇಗನೆ ಸ್ಖಲನವಾಗುವುದು ಎಷ್ಟೋ ಪುರುಷರಿಗೆ ಅವಮಾನ ಅಥವಾ ಕಿರಿಕಿರಿಯ ವಿಷಯವಾಗಿರುತ್ತದೆ. ಇದೇ ಅಂಶ ಲೈಂಗಿಕ ಜೀವನದಲ್ಲಿ ಆತಂಕಕ್ಕೂ ಕಾರಣವಾಗುತ್ತದೆ. ಇದಕ್ಕೆ ನಿಖರ ಕಾರಣವನ್ನು ಅಂದಾಜಿಸಲೂ ಸಾಧ್ಯವಿಲ್ಲ. ಈ ಹಿಂದೆ ಕೆಲವು ಮಾನಸಿಕ ಸ್ಥಿತಿ ಈ ಸಮಸ್ಯೆಗೆ ಕಾರಣ ಎನ್ನಲಾಗಿತ್ತು. ಆದರೆ ಈಗ ವೈದ್ಯರು ಇದೊಂದು ಸಂಕೀರ್ಣ ಸಮಸ್ಯೆ; ಹಾಗೆಯೇ ಮಾನಸಿಕ, ದೈಹಿಕ ಪರಸ್ಪರ ಸ್ಥಿತಿ ಇದಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಅಕಾಲಿಕ ಎಂದರೇನು?

500 ದಂಪತಿಗಳಲ್ಲಿ ನಡೆಸಿದ ಒಂದು ಅಧ್ಯಯನದ ಪ್ರಕಾರ, ಲೈಂಗಿಕಕ್ರಿಯೆ ಆರಂಭಗೊಳಿಸಿದ ನಂತರ ಐದರಿಂದ ಐದೂವರೆ ನಿಮಿಷದಲ್ಲಿ ಸ್ಖಲನವಾಗುವುದು ಸಾಮಾನ್ಯ ಸ್ಖಲನದ ಸಮಯವಾಗಿರುತ್ತದೆ ಎಂಬುದು ತಿಳಿದುಬಂದಿದೆ.

ಲೈಂಗಿಕಕ್ರಿಯೆ ಆರಂಭಗೊಂಡು ಒಂದು ನಿಮಿಷದ ಒಳಗೇ ಸ್ಖಲನಗೊಳ್ಳುವುದನ್ನು, ಪ್ರತಿ ಬಾರಿಯ ಲೈಂಗಿಕಕ್ರಿಯೆಯಲ್ಲೂ ಇದು ಮುಂದುವರೆಯುವುದನ್ನು ‘ಅಕಾಲಿಕ ಸ್ಖಲನ’ ಎಂದು ವ್ಯಾಖ್ಯಾನಿಸುತ್ತದೆ ಅಂತರರಾಷ್ಟ್ರೀಯ ಮಾರ್ಗಸೂಚಿ.

ನಿಮಗೆ ಹಾಗೂ ನಿಮ್ಮ ಸಂಗಾತಿಯ ಲೈಂಗಿಕ ಸುಖಕ್ಕೆ ಇದು ಅಡ್ಡಿ ಎನಿಸಿಲ್ಲ ಎಂದಾದರೆ ಸಮಸ್ಯೆ ಎಂದು ಪರಿಗಣಿಸುವ ಅವಶ್ಯಕತೆ ಇಲ್ಲ. ಆದರೆ ಇದು ನಿರಂತರ ಅಥವಾ ದೀರ್ಘ ಯಾತನೆ ಎನಿಸಿದರೆ ಸಮಸ್ಯೆ ಎಂದು ಪರಿಗಣಿಸಿ ಚಿಕಿತ್ಸೆಯ ಸಹಾಯವನ್ನು ಪಡೆದುಕೊಳ್ಳುವುದು ಸೂಕ್ತ.

ಅಕಾಲಿಕ ಸ್ಖಲನದ ವಿಧಗಳು

ಇದರಲ್ಲಿ ಎರಡು ರೀತಿಯ ಅಕಾಲಿಕ ಸ್ಖಲನ ಇದೆ

* ಪ್ರಾಥಮಿಕ ಅಕಾಲಿಕ ಸ್ಖಲನ (ಪ್ರೈಮರಿ ಪ್ರಿಮೆಚ್ಯೂರ್ ಎಜಾಕ್ಯುಲೇಷನ್): ಪ್ರತಿ ಬಾರಿಯೂ ಶೀಘ್ರಸ್ಖಲನಗೊಳ್ಳುವುದು

* ಸೆಕೆಂಡರಿ ಪ್ರಿಮೆಚ್ಯೂರ್ ಎಜಾಕ್ಯುಲೇಷನ್: ಇತ್ತೀಚೆಗೆ ಅಥವಾ ಇದ್ದಕ್ಕಿದ್ದಂತೆ ಸಮಸ್ಯೆ ಕಾಣಿಸಿಕೊಂಡಿರುವುದು.

ಮಾನಸಿಕ ಕಾರಣಗಳು

ವೈದ್ಯರ ಪ್ರಕಾರ, ಮೊದಲ ಲೈಂಗಿಕ ಅನುಭವಗಳು ಹಾಗೇ ಮುಂದುವರೆದಲ್ಲಿ, ಅದನ್ನು ನಂತರ ಬದಲಿಸಿಕೊಳ್ಳುವುದು ಕಷ್ಟವೆನಿಸುತ್ತದೆ. ಉದಾಹರಣೆಗೆ ಲೈಂಗಿಕಕ್ರಿಯೆ ಆರಂಭಿಸಿದ ಸ್ವಲ್ಪ ಸಮಯದಲ್ಲೇ ಪರಾಕಾಷ್ಠೆಗೆ ಹಾತೊರೆಯುವುದು.

ನಿಮಿರುವಿಕೆ ಸಮಸ್ಯೆ: ಲೈಂಗಿಕಕ್ರಿಯೆ ನಡೆಸುವ ಸಮಯದಲ್ಲಿ ನಿಮಿರುವಿಕೆ ಕುರಿತು ಆತಂಕಗೊಂಡ ಪುರುಷರಿಗೆ ಶೀಘ್ರಸ್ಖಲನವಾಗುತ್ತದೆ.

ಆತಂಕ: ಎಷ್ಟೋ ಮಂದಿಯಲ್ಲಿ ಅಕಾಲಿಕ ಸ್ಖಲನ ಸಮಸ್ಯೆಯ ಮೂಲ ಆತಂಕ ಆಗಿರುತ್ತದೆ. ಅದು ಲೈಂಗಿಕತೆ ವಿಷಯದಲ್ಲಿರಬಹುದು ಇಲ್ಲವೇ ಇನ್ನಿತರ ವಿಷಯಗಳಲ್ಲಿಯೂ ಇರಬಹುದು.

ಸಂಬಂಧದ ನಡುವಿನ ಹೊಂದಾಣಿಕೆ: ಸಂಗಾತಿಯೊಂದಿಗೆ ತೃಪ್ತ ಲೈಂಗಿಕ ಜೀವನ ನಡೆಸಲು ಸಾಧ್ಯವಾಗಿಲ್ಲ ಎಂದರೆ, ಅಕಾಲಿಕ ಸ್ಖಲನ ಸಮಸ್ಯೆ ಆಗಾಗ್ಗೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಹಾಗೂ ನಿಮ್ಮ ಸಂಗಾತಿ ನಡುವಿನ ಸಂಬಂಧದಲ್ಲಿನ ತೊಡಕೂ ಸಮಸ್ಯೆಗೆ ಕಾರಣವಾಗಬಲ್ಲದು.

ದೈಹಿಕ ಕಾರಣಗಳು

* ಅಕಾಲಿಕ ಸ್ಖಲನಕ್ಕೆ ಎಡೆಮಾಡಿಕೊಡುವ ಹಲವು ದೈಹಿಕ ಅಂಶಗಳು ಇವೆ

* ಅಸಮತೋಲಿತ ಹಾರ್ಮೋನಿನ ಮಟ್ಟ

* ಮೆದುಳಿನ ರಾಸಾಯನಿಕ-ನ್ಯೂರೊಟ್ರಾನ್ಸ್ಮಿಟರ್ಗಳ ಅಸಮತೋಲಿತ ಮಟ್ಟ

* ಕೆಲವು ರೀತಿಯ ಥೈರಾಯ್ಡ್ ಸಮಸ್ಯೆ

* ವೃಷಣದಲ್ಲಿ ಉರಿ ಅಥವಾ ಸೋಂಕು

* ಶಸ್ತ್ರಚಿಕಿತ್ಸೆಯಿಂದ ಆಗಿರುವ ಹಾನಿ (ಇದು ಅಪರೂಪದ ಪ್ರಕರಣ)

ಸ್ವ–ಸಹಾಯ ಹೇಗೆ

* ಚಿಕಿತ್ಸೆ ಪಡೆದುಕೊಳ್ಳಲು ತೀರ್ಮಾನಿಸುವ ಮುನ್ನ ಸಮಸ್ಯೆಯ ನಿವಾರಣೆಗೆ ತಾವೇ ಕೆಲವು ಮಾರ್ಗಗಳನ್ನು ಅನುಸರಿಸಬಹುದು.

* ಲೈಂಗಿಕಕ್ರಿಯೆ ಆರಂಭಿಸುವ ಒಂದು ಅಥವಾ ಎರಡು ಗಂಟೆ ಮುನ್ನ ಹಸ್ತಮೈಥುನ ಮಾಡಿಕೊಳ್ಳುವುದು.

* ಉದ್ರೇಕದ ಮಟ್ಟವನ್ನು ಕಡಿಮೆಗೊಳಿಸಲು ದಪ್ಪನಾದ ಕಾಂಡೋಮ್ ಬಳಸುವುದು.

* ಇದ್ದಕ್ಕಿದ್ದಂತೆ ತಂತಾನೇ ಸ್ಖಲನಗೊಳ್ಳುವುದನ್ನು ತಡೆಯಲು, ಲೈಂಗಿಕಕ್ರಿಯೆ ಸಮಯದಲ್ಲಿ ದೀರ್ಘ ಉಸಿರನ್ನು ತೆಗೆದುಕೊಳ್ಳುವುದು.

* ಲೈಂಗಿಕಕ್ರಿಯೆ ನಡೆಸುವಾಗ ಭಂಗಿಯನ್ನು ಬದಲಾಯಿಸುವುದು.

* ಲೈಂಗಿಕಕ್ರಿಯೆಯ ಮಧ್ಯೆ ಸ್ವಲ್ಪ ಬಿಡುವು ತೆಗೆದುಕೊಳ್ಳುವುದು. ಬೇರೆ ಬೇರೆ ವಿಧಗಳನ್ನು ಪ್ರಯತ್ನಿಸುವುದು.

ಔಷಧಗಳು

ಈ ತಂತ್ರಗಳು ಫಲಿಸಲಿಲ್ಲ ಎಂದರೆ, ಕೆಲವು ಔಷಧಗಳೂ ಸಹಾಯಕ್ಕೆ ಲಭ್ಯವಿವೆ. ಸೆಲೆಕ್ಟಿವ್ ಸೆರೊಟೊನಿನ್ ರ್ಯೂಪ್ಟೇಕ್ ಇನ್ಹಿಬಿಟರ್ಸ್ (ಎಸ್ಎಸ್ಆರ್ಐಎಸ್) ಎಂದು ಕರೆಯಲಾಗುವ ಒತ್ತಡ ನಿವಾರಣೆಯ ಕೆಲವು ಔಷಧಗಳು ಈ ಸಮಸ್ಯೆಗೆ ಉಪಯೋಗಕ್ಕೆ ಬರುತ್ತವೆ. ಈ ಔಷಧದ ಅಡ್ಡ ಪರಿಣಾಮ ಎಂದರೆ, ಸ್ಖಲನದ ಸಮಯವನ್ನು ವಿಳಂಬ ಮಾಡುವುದು. ಈ ಅಂಶ ಅಕಾಲಿಕ ಸ್ಖಲನ ಸಮಸ್ಯೆಗೆ ನೆರವಾಗಬಹುದು.

ಎಸ್ಎಸ್ಆರ್ಐನಲ್ಲಿ ಡಾಪೊಕ್ಸೆಟೈನ್ ಅನ್ನು ಅಕಾಲಿಕ ಸ್ಖಲನಸಮಸ್ಯೆ ನಿವಾರಣೆಗೆಂದೇ ವಿಶೇಷವಾಗಿ ರೂಪಿಸಲಾಗಿದೆ. ಲೈಂಗಿಕಕ್ರಿಯೆ ಆರಂಭಿಸುವ ಒಂದು ಅಥವಾ ಮೂರು ಗಂಟೆ ಮುನ್ನ ಇದನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಆದರೆ ದಿನಕ್ಕೆ ಒಂದು ಬಾರಿಗಿಂತ ಹೆಚ್ಚಿಗೆ ತೆಗೆದುಕೊಳ್ಳುವಂತಿಲ್ಲ.

ಈ ಔಷಧಗಳು ಸಮಸ್ಯೆನಿವಾರಣೆಯಲ್ಲಿ ಫಲ ನೀಡಲಿಲ್ಲ ಎಂದರೆ ಲೈಂಗಿಕತಜ್ಞರು, ಪ್ಯಾರೊಕ್ಸೆಟೀನ್, ಸರ್ಟ್ರಲೈನ್ ಅಥವಾ ಫ್ಲೂಕ್ಸೊಟೈನ್ ಪ್ರಯತ್ನಿಸಲು ಶಿಫಾರಸು ಮಾಡಬಹುದು.

ಈ ಔಷಧಗಳ ಸಂಪೂರ್ಣ ಪರಿಣಾಮ ಸಿಗಬೇಕೆಂದರೆ ಒಂದು ಅಥವಾ ಎರಡು ವಾರ ಸೇವಿಸಬೇಕು. ಅದೂ ವೈದ್ಯರ ಸಲಹೆ ಮೇರೆಗೆ.

ಕೆಲವು ಕ್ರೀಂ ಹಾಗೂ ಸ್ಪ್ರೇಗಳೂ ಇದಕ್ಕೆಂದು ಲಭ್ಯವಿವೆ. ಲಿಡೊಕೇನ್ ಅಥವಾ ಪ್ರೈಲೊಕೇನ್ನಂಥ ಕೆಲವು ಕ್ರೀಂಗಳು ಜನನಾಂಗದ ಉದ್ರೇಕವನ್ನು ತಗ್ಗಿಸಿ, ಅಕಾಲಿಕ ಸ್ಖಲನವನ್ನು ತಡೆಯುತ್ತವೆ. ಕಾಂಡೋಮ್ನೊಂದಿಗೆ ಕ್ರೀಂ ಬಳಸುವುದು ಕೂಡ ಪರಿಣಾಮಕಾರಿ ಪರಿಹಾರ ಎನ್ನಲಾಗಿದೆ.

ಅಕಾಲಿಕ ಸ್ಖಲನ ತಡೆಯುವ ಮಾರ್ಗ

ಪುರುಷನು ಲೈಂಗಿಕಕ್ರಿಯೆ ಸಮಯದಲ್ಲಿ ಅತಿ ಶೀಘ್ರವಾಗಿ ಸ್ಖಲನಗೊಳ್ಳುವುದನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದ ಅನುಭವವೇ ಅಕಾಲಿಕ ಸ್ಖಲನ. ಇದು ದೈಹಿಕವಾಗಿ ಸಮಸ್ಯೆ ಎನಿಸದೇ ಇದ್ದರೂ ದಂಪತಿಗೆ ಇದರಿಂದ ಕಿರಿಕಿರಿ ಅಥವಾ ಅತೃಪ್ತ ಲೈಂಗಿಕ ಜೀವನ ಎನ್ನಿಸಬಹುದು. ಪುರುಷರಲ್ಲಿ ಕೀಳರಿಮೆ ಹುಟ್ಟಲೂ ಕಾರಣವಾಗಬಹುದು. ಅತಿಯಾದ ಆತಂಕ, ಒತ್ತಡ, ಹಾರ್ಮೋನಿನ ಅಸಮತೋಲನದಿಂದ ಸಮಸ್ಯೆ ಅನುಭವಕ್ಕೆ ಬರಬಹುದು.

ಪ್ರತಿ ಮೂರರಲ್ಲಿ ಒಬ್ಬ ಪುರುಷನಿಗೆ ತನ್ನ ಜೀವನದ ಒಂದು ಹಂತದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ಬಹುಪಾಲು ಪುರುಷರು ಈ ವಿಷಯವಾಗಿ ಲೈಂಗಿಕತಜ್ಞರನ್ನು ಭೇಟಿ ಮಾಡುವುದಿಲ್ಲ. ಈ ಸಮಸ್ಯೆಯ ನಿವಾರಣೆಯಲ್ಲಿ ಚಿಕಿತ್ಸೆ, ಔಷಧಗಳು, ಕೆಲವು ನೈಸರ್ಗಿಕ ಪರಿಹಾರೋಪಾಯಗಳು ಕೆಲಸ ಮಾಡಬಲ್ಲವು.

ಮುಂದಿನ ವಾರ: ಅಕಾಲಿಕ ಸ್ಖಲನ ತಡೆಗೆ ಮನೆಮದ್ದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.