ನವದೆಹಲಿ: ಜಗತ್ತಿನಾದ್ಯಂತ 15 ವರ್ಷ ಮೇಲ್ಪಟ್ಟ ನೂರು ಕೋಟಿಗೂ ಹೆಚ್ಚಿನ ಜನರು ಬಾಲ್ಯದಲ್ಲೇ ಲೈಂಗಿಕ ಹಿಂಸೆಯನ್ನು ಅನುಭವಿಸಿದ್ದಾರೆ. 2023ರಲ್ಲಿ ಸುಮಾರು 60 ಕೋಟಿಗೂ ಹೆಚ್ಚಿನ ಮಹಿಳೆಯರು ತಮ್ಮ ಸಂಗಾತಿಯಿಂದಲೇ ಲೈಂಗಿಕ ದೌರ್ಜನಕ್ಕೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.

ಸಂಗಾತಿಯಿಂದ ಹಾಗೂ ಬಾಲ್ಯದಲ್ಲೇ ಲೈಂಗಿಕ ಹಿಂಸೆಗೆ ಒಳಗಾದ ಮಹಿಳೆಯರ ಪಟ್ಟಿಯಲ್ಲಿ ಉಪ– ಸಹಾರನ್ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಆಗ್ರಸ್ಥಾನದಲ್ಲಿದೆ. ಈ ಪ್ರದೇಶದಲ್ಲಿ ಎಚ್ಐವಿ, ಲೈಂಗಿಕ ಹಿಂಸಾಚಾರ ಪ್ರಮಾಣ ಹೆಚ್ಚು ಕಂಡುಬಂದಿದೆ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ, 15 ವರ್ಷ ಮೇಲ್ಪಟ್ಟ ಶೇ 23 ಮಹಿಳೆಯರು ತಮ್ಮ ಸಂಗಾತಿಯಿಂದ ಲೈಂಗಿಕ ಹಿಂಸೆಗೆ ಒಳಪಟ್ಟಿದ್ದರೆ, ಶೇ 13ರಷ್ಟು ಯುವತಿಯರು ಬಾಲ್ಯದಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ವರದಿ ಹೇಳಿದೆ.

ಲೈಂಗಿಕ ದೌರ್ಜನ್ಯಕ್ಕೆ ಕಾರಣಗಳು
ಆತಂಕ
ಖಿನ್ನತೆ
ಮಾನಸಿಕ ಆರೋಗ್ಯದ ಸ್ಥಿತಿ
ಮಾದಕವಸ್ತು ಬಳಕೆ

ಹಿಂಸಾಚಾರದಿಂದ ಕೊಲೆ, ಎಚ್ಐವಿಯಿಂದ ಆತ್ಮಹತ್ಯೆ ಮಹಿಳೆಯರ ಸಾವಿಗೆ ಕಾರಣವಾಗಿದೆ ಎಂದು ಸಂಶೋಧನೆ ಮಾಹಿತಿ ನೀಡಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಕಾನೂನು ಚೌಕಟ್ಟುಗಳನ್ನು ಬಲಪಡಿಸುವುದು, ಲಿಂಗ ಸಮಾನತೆಯನ್ನು ಉತ್ತೇಜಿಸುವುದು ಮತ್ತು ಹಿಂಸಾಚಾರದಿಂದ ಬದುಕುಳಿದವರಿಗೆ ಪರಿಹಾರ ಕ್ರಮ ಹಾಗೂ ರಕ್ಷಣೆ, ಲೈಂಗಿಕ ದೌರ್ಜನ್ಯ ತಡೆಗಟ್ಟುವ ಕ್ರಮಗಳನ್ನು ಜಾರಿಗೊಳಿಸಬೆಕು ಎಂದು ‘ದಿ ಲ್ಯಾನ್ಸೆಟ್ ಜರ್ನಲ್ನಲ್ಲಿ’ ಅಧ್ಯಯನದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.