ಶ್ರವಣ ದೋಷವಿರುವವರಿಗೆ ಪರಿಣಾಮಕಾರಿ ಸಾಧನ ನೀಡಬೇಕು, ಶ್ರವಣ ದೋಷದ ಬಗ್ಗೆ ಜಾಗೃತಿ ಮೂಡಿಸಬೇಕು, ಚಿಕಿತ್ಸೆ ಮೂಲಕ ಶ್ರವಣ ದೋಷಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಾರ್ವಜನಿಕರನ್ನು ಉತ್ತೇಜಿಸಬೇಕು .. ಇಂಥ ಹಲವು ಉತ್ತಮ ಆಶಯಗಳೊಂದಿಗೆ ಆರಂಭವಾದ ಬೆಂಗಳೂರಿನ ಶ್ರೇಯಾ ಹಿಯರಿಂಗ್ ಕ್ಲಿನಿಕ್, ಈಗ 25 ವಸಂತಗಳನ್ನು ಪೂರೈಸಿದೆ !
ಕ್ಲಿನಿಕ್‌ನ ನಿರ್ದೇಶಕಿ ಡಾ. ಸತ್ಯಾ ರನ್ನ ಅವರು ಶ್ರವಣ ದೋಷವಿರುವವರಿಗೆ ನೆರವಾಗುವುದಕ್ಕಾಗಿಯೇ 25 ವರ್ಷಗಳ ಹಿಂದೆ ಬೆಂಗಳೂರಿನ ಇಂದಿರಾನಗರದಲ್ಲಿ ಶ್ರೇಯಾ ಹಿಯರಿಂಗ್ ಕ್ಲಿನಿಕ್‌ನ ಮೊದಲ ಕೇಂದ್ರವನ್ನು ಆರಂಭಿಸಿದರು. ಎಂಟು ಸಾವಿರ ಚದರ ಅಡಿ ವಿಸ್ತೀರ್ಣದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೇಂದ್ರದಲ್ಲಿ ಅತ್ಯಾಧುನಿಕ ಕಂಪ್ಯೂಟರೀಕೃತ ಸೌಲಭ್ಯಗಳಿವೆ.
ವ್ಯಕ್ತಿಯ ಶ್ರವಣ ದೋಷಕ್ಕೆ ಅಗತ್ಯುವುಳ್ಳಂತಹ ಶ್ರವಣ ಸಾಧನ ತಯಾರಿಸುವುದು ಈ ಸಂಸ್ಥೆಯ ವೈಶಿಷ್ಟ್ಯ. ಈ ಕ್ಲಿನಿಕ್, ಕೇವಲ ಶ್ರವಣ ಸಾಧನ ತಯಾರಿಕೆಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಅಗತ್ಯವಿರುವ ವ್ಯಕ್ತಿಗಳಿಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಂದ ಬಳಲುವವರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಲಾಗುತ್ತಿದೆ.
ತುಂಬಾ ಸ್ಮಾರ್ಟ್ ಮತ್ತು ಪರಿಣಾಮಕಾರಿಯಾದ ನ್ಯಾನೊ ತಂತ್ರಜ್ಞಾನ ಆಧಾರಿತ ಶ್ರವಣ ಸಾಧನವನ್ನು ಶ್ರೇಯಾ ಕ್ಲಿನಿಕ್‌ನಲ್ಲಿ ತಯಾರಿಸಲಾಗುತ್ತದೆ. ಇದು ಸಂಸ್ಥೆಯ ಹೆಗ್ಗಳಿಕೆ. ಈ ಶ್ರವಣ ಸಾಧನವನ್ನು ಅಳವಡಿಸಿ ಕೊಂಡರೆ, ವ್ಯಕ್ತಿಯ ಹತ್ತಿರ ಬರುವವರೆಗೂ ಅವರು ಈ ಸಾಧನ ಧರಿಸಿರುವುದು ಕಾಣುವುದಿಲ್ಲ. ಅಷ್ಟು ಸೂಕ್ಷ್ಮವಾಗಿರುತ್ತದೆ. ಮೊಬೈಲ್‌ನಲ್ಲಿ ಮಾತು ಕೇಳಿಸಿ ಕೊಳ್ಳಲು, ಟಿವಿ ಕಾರ್ಯಕ್ರಮಗಳನ್ನು ಆಲಿಸಲು, ಸೂಕ್ಷ್ಮ ಧ್ವನಿ ತರಂಗಗಳನ್ನು ಹಿಡಿದಿಡಲು ಈ ಸಾಧನ ನೆರವಾಗುತ್ತದೆ. ಶ್ರವಣಕ್ಕೆ ಯಾವುದೇ ಸಮಸ್ಯೆಯಾಗದಂತೆ ಬ್ಲ್ಯೂಟೂತ್ ತಂತ್ರಜ್ಞಾನವನ್ನು ಈ ಸಾಧನದಲ್ಲಿ ಅಳವಡಿಸಲಾಗಿದೆ. ಶ್ರೇಯಾ ಕ್ಲಿನಿಕ್‌ನ ವಿವಿಧ ಶಾಖೆಗಳಲ್ಲಿ ಈ ಸಾಧನವನ್ನು ಪ್ರಯೋಗ ಮಾಡಿ ಎಲ್ಲ ಗುಣ ವಿಶೇಷಣಗಳನ್ನು ಖಚಿತಪಡಿಸಿಕೊಳ್ಳಬಹುದು ಎನ್ನುವುದು ಸಂಸ್ಥೆಯ ಅಭಿಪ್ರಾಯವಾಗಿದೆ.
ಡಾ. ಸತ್ಯಾ ರನ್ನ ಪರಿಚಯ:
ಇಂಥ ಅತ್ಯಾಧುನಿಕ ಶ್ರವಣ ಸಾಧನಗಳ ತಯಾರಿಕೆಗೆ ಕಾರಣವಾ ಗಿರುವ ಡಾ. ಸತ್ಯಾ ರನ್ನ ಅವರು ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಇವರ ವಾಕ್ ಶ್ರವಣ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಸೀಮೆನ್ ವಾರ್ಷಿಕ ಶ್ರೇಷ್ಠ ಪ್ರಶಸ್ತಿ, ಭಾರತೀಯ ವಾಕ್ ಮತ್ತು ಶ್ರವಣ ಸಂಘದಿಂದ ’ಶ್ರವಣಶಾಸ್ತ್ರದ ಅತ್ಯುತ್ತಮ ಉದ್ಯಮಿ ಪ್ರಶಸ್ತಿ’ ಸೇರಿದಂತೆ ಹಲವು ಪ್ರಶಸ್ತಿಗಳು ಇವರ ಮುಡಿಗೇರಿವೆ.
‘ಶ್ರವಣ ದೋಷವಿರುವವರನ್ನು ಗೌರವಿಸಿ. ಮೌಢ್ಯಗಳಿಗೆ ಮೊರೆ ಹೋಗದೇ, ಅವರಿಗೆ ಚಿಕಿತ್ಸೆಕೊಡಿಸಬೇಕು. ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ..’– ಎಂಬುದು ಶ್ರೇಯಾ ಹಿಯರಿಂಗ್ ಕ್ಲಿನಿಕ್‌ನ ನಿರ್ದೇಶಕಿ ಡಾ. ಸತ್ಯಾ ರನ್ನ ಅವರ ಮಾತು.
ಡಾ. ಸತ್ಯಾ ರನ್ನಾ ಅವರು, ಶ್ರವಣ ಸಾಧನಗಳ ತಯಾರಿಕೆ ಜೊತೆಗೆ, ಶ್ರವಣ ದೋಷದ ಕುರಿತು ಜಾಗೃತಿ ಮೂಡಿಸುವ ಬರಹಗಳನ್ನು ಪತ್ರಿಕೆಗಳಿಗೆ ಬರೆದಿದ್ದಾರೆ. ಟಿ.ವಿ. ಕಾರ್ಯಕ್ರಮಗಳ ಮೂಲಕವೂ ಶ್ರವಣ ದೋಷದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ವಿವಿಧ ರಾಷ್ಟಮಟ್ಟದ ವೈದ್ಯಕೀಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಸಂಶೋಧನೆ ಮತ್ತು ಅಧ್ಯಯನ ಪ್ರಬಂಧಗಳನ್ನು ಮಂಡಿಸಿದ್ದಾರೆ.
ಶ್ರವಣ ದೋಷ ಸಾಧನಗಳು ಮತ್ತಿತರ ಮಾಹಿತಿಗಾಗಿ ಶ್ರೇಯಾ ಹಿಯರಿಂಗ್ ಕ್ಲಿನಿಕ್ ಸಂಖ್ಯೆ: 1800 425 3435ಕ್ಕೆ ಸಂಪರ್ಕಸಬಹುದು. ದೂರವಾಣಿ: 080– 25012100, ಇಮೇಲ್: info@shreyahearingclinic.com v
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.