ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಕಾಲದಲ್ಲಿ ಅನಾರೋಗ್ಯ ಕಾಡಿದಾಗ ಏನು ಮಾಡಬೇಕು?

ಅಕ್ಷರ ಗಾತ್ರ

ಭಾರತದಲ್ಲಿ ಕೋವಿಡ್‌–19 ಎರಡನೇ ಅಲೆ ತೀವ್ರವಾಗಿದೆ. ಈ ನಡುವೆ ಆರೋಗ್ಯದಲ್ಲಿ ಏರು–ಪೇರು ಕಂಡು ಬಂದರೆ, ಏನು ಮಾಡಬೇಕು? ಇಲ್ಲಿದೆ ಒಂದಷ್ಟು ಮಾಹಿತಿ–

* ಆಸ್ಪತ್ರೆಗೆ ದಾಖಲಾಗದೆಯೇ ಬಹಳಷ್ಟು ಜನ ಕೋವಿಡ್‌ ಪೀಡಿತರು ಗುಣಮುಖರಾಗುತ್ತಿದ್ದಾರೆ ಎಂಬುದನ್ನು ಮರೆಯಬೇಡಿ. ತಾಳ್ಮೆವಹಿಸಿ, ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ.

* ಸೋಂಕು ಲಕ್ಷಣಗಳು ಕಂಡು ಬಂದರೆ ಪ್ರತ್ಯೇಕವಾಗಿರಿ. ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳುವವರೆಗೂ ಅಥವಾ ಪರೀಕ್ಷೆಯ ಫಲಿತಾಂಶ ಬರುವವರೆಗೂ ಕಾಯುವುದು ಬೇಡ, ನೀವಾಗಿಯೇ ಅಂತರ ಕಾಯ್ದುಕೊಂಡು ಪ್ರತ್ಯೇಕ ವಾಸ ಮಾಡಿ.

* ಉಸಿರಾಟದಲ್ಲಿ ವ್ಯತ್ಯಾಸ ಕಂಡು ಬಂದರೆ, ದೇಹದಲ್ಲಿರುವ ಆಮ್ಲಜನಕದ ಪ್ರಮಾಣವನ್ನು 'ಆಕ್ಸಿಮೀಟರ್‌' ಬಳಸಿ ಪರೀಕ್ಷಿಸಿ. 6 ಗಂಟೆಗಳಿಗೆ ಒಮ್ಮೆ ಆಮ್ಲಜನಕದ ಪ್ರಮಾಣ ಪರೀಕ್ಷಿಸಿ. ಉಸಿರಾಟ ತೀವ್ರವಾಗಿದ್ದರೆ, ಆರು ನಿಮಿಷ ನಡೆದಾಡಿ, ಅನಂತರ ಪರೀಕ್ಷೆ ಮಾಡಿಕೊಳ್ಳಿ.

* ದೇಹದಲ್ಲಿರುವ ಆಮ್ಲಜನಕ ಪ್ರಮಾಣವು ಆಕ್ಸಿಮೀಟರ್‌ನಲ್ಲಿ ಶೇ 94ಕ್ಕಿಂತಲೂ ಕಡಿಮೆ ತೋರಿಸುತ್ತಿದ್ದರೆ, ತುರ್ತು ಸಹಾಯದ ಮೂಲಕ ಆರೈಕೆ ಪಡೆಯಿರಿ.

* ಪ್ರತಿ 6 ಗಂಟೆಗಳಿಗೆ ಒಮ್ಮೆ ದೇಹದ ತಾಪಮಾನ ಪರೀಕ್ಷಿಸಿಕೊಳ್ಳಿ. ಜ್ವರ ಇದ್ದರೆ, ಆಗಾಗ್ಗೆ ಪರೀಕ್ಷೆ ಮಾಡಿ. ಅಕಸ್ಮಾತ್‌ ಜ್ವರದ ಪ್ರಮಾಣ ಮೂರು ದಿನಗಳ ವರೆಗೂ 101 ಫ್ಯಾರನ್‌ಹೀಟ್‌ (38 ಡಿಗ್ರಿ ಸೆನ್ಸಿಯಸ್‌) ಇದ್ದರೆ, ಆದಷ್ಟು ಬೇಗ ತುರ್ತು ಚಿಕಿತ್ಸೆ ಪಡೆಯಿರಿ.

* ಈ ಕೆಳಕಂಡ ಪರಿಸ್ಥಿತಿಗಳಲ್ಲಿ ತುರ್ತು ವೈದ್ಯಕೀಯ ನೆರವು ಪಡೆಯಿರಿ–

– ಉಸಿರಾಟದಲ್ಲಿ ವ್ಯತ್ಯಾಸವಾದರೆ
– ತುಟಿಗಳು ಅಥವಾ ಮುಖ ನೀಲಿ ಬಣ್ಣಕ್ಕೆ ತಿರುಗಿದರೆ
– ದಿಕ್ಕು ತೋಚದಂತೆ ಆಗುವುದು/ ಆತಂಕದ ಭಾವನೆ ಹೆಚ್ಚಿದರೆ
– ಎದೆಯ ಭಾಗದಲ್ಲಿ ನೋವು ಅಥವಾ ಒತ್ತಡ ಉಂಟಾದರೆ
– ಸರಿಯಾಗಿ ಮಾತನಾಡಲು ಆಗದ ಸ್ಥಿತಿ ಅಥವಾ ಪ್ರಜ್ಞೆ ತಪ್ಪಿದರೆ
– ಎಚ್ಚರದಿಂದ ಇರಲು ಆಗದ ಸ್ಥಿತಿ ಅಥವಾ ಎದ್ದೇಳಲು ಸಾಧ್ಯವಾಗದಿದ್ದರೆ

ಯುನಿಸೆಫ್ ಪ್ರಕಟಿಸಿರುವ ಎಚ್ಚರಿಕೆ ಕ್ರಮಗಳು
ಯುನಿಸೆಫ್ ಪ್ರಕಟಿಸಿರುವ ಎಚ್ಚರಿಕೆ ಕ್ರಮಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT