ಅರ್ಥರೈಟಿಸ್ (ಸಂಧಿವಾತ)ನಿಂದ ಬಳಲುತ್ತಿರುವ ಸಾಕಷ್ಟು ಜನರು ಚಳಿಗಾಲದ ಸಮಯದಲ್ಲಿ ಅಧಿಕ ನೋವು ಅನುಭವಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಚಳಿಗಾಲದ ತಂಪಾದ ಮತ್ತು ತೇವಾಂಶಯುಕ್ತ ವಾತಾವರಣ. ಈ ರೀತಿಯ ವಾತಾವರಣ ಗಂಟು ಬಿಗಿತ, ಉರಿಯೂತ ಹಾಗೂ ಹಾನಿಗೊಳಗಾದ ಕೀಲುಗಳಲ್ಲಿ ನೋವಿನ ಅನುಭವವನ್ನು ಹೆಚ್ಚಿಸುತ್ತದೆ. ಸಂಧಿವಾತ ಹೊಂದಿರುವ ಎಲ್ಲರಲ್ಲೂ ಚಳಿಗಾಲದಲ್ಲಿ ನೋವು ಹೆಚ್ಚುತ್ತದೆ ಎಂದಲ್ಲ ಆದರೆ ಬಹುತೇಕರಲ್ಲಿ ತಾಪಮಾನ ಇಳಿಕೆಯಾದಾಗ ಈ ರೀತಿಯ ಲಕ್ಷಣಗಳು ಕಂಡುಬರುತ್ತದೆ.

ಚಳಿಗಾಲದಲ್ಲಿ ನೋವು ಅಧಿಕವಾಗಲು ಕಾರಣಗಳೇನು?

ಶೀತ ಗಾಳಿಯು ರಕ್ತನಾಳಗಳ ಮೇಲೆ ಒತ್ತಡ ಬೀರುತ್ತವೆ. ಇದರಿಂದ ಸ್ನಾಯುಗಳು ಹಾಗೂ ಕೀಲುಗಳಲ್ಲಿ ರಕ್ತ ಸಂಚಾರ ಕಡಿಮೆಯಾಗುತ್ತದೆ. ಹೀಗಾಗಿ ಸಂಧಿವಾತ ಹೊಂದಿದವರಲ್ಲಿ ಕೀಲುಗಳಲ್ಲಿ ಸೆಳೆತ, ನೋವು ಅಧಿಕವಾಗುತ್ತದೆ. ದ್ರವ ದಪ್ಪವಾಗಿ ಕೀಲುಗಳ ಸುಲಭ ಮತ್ತು ಸಹಜ ಚಲನೆಯನ್ನು ತಡೆಯುತ್ತದೆ.

ಸ್ನಾಯುಗಳು ಚಳಿಗಾಲದಲ್ಲಿ ಬಿಗಿಯಾಗುತ್ತವೆ. ಜೊತೆಗೆ ಸೂರ್ಯನ ಕಿರಣ ಮತ್ತು ಚಟುವಟಿಕೆ ಕಡಿಮೆಯಾಗುವ ಕಾರಣ ಉರಿಯೂತ ಮತ್ತು ನೋವು ಅಧಿಕವಾಗುತ್ತವೆ. ಚಳಿಗಾಲದಲ್ಲಿ ಹೆಚ್ಚು ಮನೆಯೊಳಗೆ ಇರುವ ಕಾರಣ ಸ್ನಾಯುಗಳ ಚಲನೆ ಕಡಿಮೆಯಾಗಿ ಅಶಕ್ತಗೊಳ್ಳುತ್ತದೆ. ಇದರಿಂದ ಸಂಧು (ಕೀಲು) ಮೇಲೆ ಪರಿಣಾಮ ಬೀರುತ್ತವೆ. ಇದರ ಜೊತೆಗೆ ವಿಟಮಿನ್ ಡಿ ಕೊರತೆ ಮತ್ತು ತೂಕ ಹೆಚ್ಚಳವೂ ಗಂಟು ನೋವು ಹೆಚ್ಚಲು ಕಾರಣವಾಗುತ್ತವೆ.

ನೋವಿನ ನಿರ್ವಹಣೆ ಹೇಗೆ?

ಚಳಿಗಾಲದಲ್ಲಿ ಬೆಚ್ಚಗಿರುವುದೇ ಸರಳವಾದ ಹಾಗೂ ಉತ್ತಮವಾದ ಚಿಕಿತ್ಸೆ. ಬೆಚ್ಚಗಿರುವ ಬಟ್ಟೆಗಳು, ಕೈ ಗವಸು, ಸಾಕ್ಸ್, ಮೊಣಕಾಲಿಗೆ ಕ್ಯಾಪ್ (Knee warmers) ಹಾಗೂ ನೋವಿರುವ ಗಂಟುಗಳಿಗೆ ಬಿಸಿ ಶಾಖ, ಬಿಸಿ ನೀರಿನ ಸ್ನಾನ ಸ್ನಾಯುಗಳು ಆರಾಮದಾಯಕವಾಗಿರಲು ಮತ್ತು ರಕ್ತಸಂಚಾರ ಸುಗಮವಾಗಿರಲು ನೆರವಾಗುತ್ತವೆ. ಜೊತೆಗೆ ಬಿಗಿ ಸೆಳೆತವನ್ನೂ ನಿವಾರಿಸುತ್ತವೆ. ಬಲ ಮತ್ತು ಚಲನಾಶಕ್ತಿಯನ್ನು ಹೆಚ್ಚಿಸಲು ನಿರಂತರ ವಾಕಿಂಗ್, ಹಿತವಾದ ಯೋಗ ಕೂಡ ಉತ್ತಮ ಮಾರ್ಗ. ಆರೋಗ್ಯಕರ ತೂಕ ನಿರ್ವಹಣೆ, ಉರಿಯೂತ ನಿವಾರಕ ಆಹಾರ ಸೇವನೆ, ವಿಟಮಿನ್ ಡಿ ನಿರ್ವಹಣೆ ಚಳಿಗಾಲದಲ್ಲಿ ಕೀಲುಗಳ ಆರೋಗ್ಯಕ್ಕೆ ನೆರವಾಗುತ್ತವೆ.

ವೈದ್ಯಕೀಯ ನೆರವು ಮತ್ತು ಮುನ್ನೆಚ್ಚರಿಕೆ ಕ್ರಮಗಳು

ಔಷಧಾಲಯಗಳಲ್ಲಿ ಸಿಗುವ ನೋವು ನಿವಾರಕಗಳು, ಟಾಫಿಕಲ್ ಜೆಲ್ಗಳು ಅಥವಾ ವೈದ್ಯರು ಸೂಚಿಸಿರುವ ಉರಿಯೂತ ನಿವಾರಕ ಔಷಧಗಳುನ್ನು ವೈದ್ಯರ ಸಲಹೆ ಮೇರೆಗೆ ಬಳಸಬಹುದಾಗಿದೆ. ಫಿಸಿಯೋಥೆರಪಿ, ಸ್ಟ್ರೆಚಿಂಗ್, ಅಥವಾ ಸಹಾಯಕ ಸಾಧನಗಳು ನೋವಿಗೆ ಒಳಗಾದ ಕೀಲುಗಳನ್ನು ರಕ್ಷಿಸಿ ಚಲನೆಗೆ ನೆರವಾಗುತ್ತವೆ. ಚಳಿಗಾಲದಲ್ಲಿ ನೋವು ಅಸಹನೀಯವಾದರೆ, ಯಾವುದೇ ಸೂಚನೆ ಇಲ್ಲದೆ ಆರಂಭವಾದಲ್ಲಿ, ಕೆಂಪಾಗುವುದು, ಊತ ಕಂಡುಬರುವುದು ಅಥವಾ ನಿತ್ಯದ ಚಟುವಟಿಕೆಗೆ ಅಡ್ಡಿಯಾದರೆ ತಕ್ಷಣ ವೈದ್ಯಕೀಯ ನೆರವು ಪಡೆಯಿರಿ. ಚಳಿಗಾಲದ ಆರಂಭದಿಂದಲೇ ಕೀಲುಗಳ ರಕ್ಷಣೆ ಬಗ್ಗೆ ಕ್ರಮ ವಹಿಸಿದ್ದಲ್ಲಿ ನೋವು ನಿರ್ವಹಣೆ ಸುಲಭವಾಗುತ್ತದೆ.

(ಲೇಖಕರು: ಡಾ. ಲೋಕೇಶ್ ಎ ವಿ, ಕನ್ಸಲ್ಟೆಂಟ್ - ಆರ್ಥೋಪೆಡಿಕ್ಸ್, ಜಾಯಿಂಟ್ ರಿಪ್ಲೇಸ್ಮೆಂಟ್ ಮತ್ತು ರೊಬೊಟಿಕ್ ಸರ್ಜರಿ ಮಣಿಪಾಲ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.