ಬುಧವಾರ, ಮೇ 25, 2022
30 °C

ವಿಶ್ವ ಹಿಮೋಫಿಲಿಯಾ ದಿನ: ಬದುಕು ಹಿಂಡುವ ರೋಗದ ಬಗ್ಗೆ ಜಾಗೃತರಾಗಿರಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಶ್ವದಾದ್ಯಂತ ಪ್ರತಿ ವರ್ಷ ಏಪ್ರಿಲ್‌ 17ರಂದು ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಮಾನ್ಯತೆ ನೀಡಿದೆ. 

ವಿಶ್ವ ಹಿಮೋಫಿಲಿಯಾ ಸಂಸ್ಥೆ(ಡಬ್ಲ್ಯುಎಫ್‌ಎಚ್‌)ಯನ್ನು ಸ್ಥಾಪನೆ ಮಾಡಿದ ಫ್ರ್ಯಾಂಕ್‌ ಸ್ಕಾನ್ಬೆಲ್‌ ಅವರ ಸ್ಮರಣೆಯೊಂದಿಗೆ ವಿಶ್ವ ಹಿಮೋಫಿಲಿಯಾ ದಿನವನ್ನು ಆಚರಿಸಲಾಗುತ್ತದೆ. ಇದನ್ನು 1989ರಿಂದ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಈ ಆಚರಣೆ ಮಾಡುತ್ತವೆ. 

ರಕ್ತದ ವಿವಿಧ ಘಟಕಗಳಲ್ಲಿನ ಯಾವುದಾದರೊಂದು ಒಂದು ಅಂಶ ಸರಿಯಾಗಿ ಕೆಲಸ ಮಾಡದೇ ಇರುವಾಗ ಅಥವಾ ಅದರಲ್ಲಿ ಏನಾದರೂ ಕೊರತೆ ಇದ್ದಾಗ ರಕ್ತ ಹೆಪ್ಪುಗಟ್ಟುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಹೀಗೆ ರಕ್ತ ಹೆಪ್ಪುಗಟ್ಟದೆ ಇರುವುದನ್ನು ಹಿಮೋಫಿಲಿಯಾ ಎನ್ನುತ್ತಾರೆ. 

ಗಂಟಲು, ಕೀಲು, ಮೂಗು, ವಸಡು, ಮಲ, ಮೂತ್ರ, ಮಿದುಳು, ಸ್ನಾಯು ಮತ್ತು ಮಾಂಸಖಂಡಗಳಲ್ಲಿ ರಕ್ತಸ್ರಾವವಾಗುವುದು ಪ್ರಮುಖ ಲಕ್ಷಣಗಳು. ಇವುಗಳಲ್ಲಿ ಮಿದುಳಿನ ರಕ್ತಸ್ರಾವ ಮಾರಣಾಂತಿಕವಾಗಿದೆ. ಈ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. 

ಹಿಮೋಫಿಲಿಯಾದಲ್ಲಿ ಎ,ಬಿ, ಸಿ ಎಂಬ ಮೂರು ವಿಧಗಳಿವೆ. ಇದು ಅನುವಂಶಿಕವಾಗಿಯೂ ಕಾಣಿಸಿಕೊಳ್ಳುತ್ತದೆ. ತಾಯಿಯಿಂದ ಮಗನಿಗೂ ಇದು ಬಳುವಳಿಯಾಗಿಯೂ ಬರುತ್ತದೆ. ಸಾಮಾನ್ಯವಾಗಿ ಪುರುಷರಲ್ಲಿ ಈ ರೋಗ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ವೈದ್ಯರು ಹೇಳುತ್ತಾರೆ

ಜನರಲ್ಲಿ ಹಿಮೋಫಿಲಿಯಾ ಕುರಿತು ಜಾಗೃತಿ ಮೂಡಿಸಿ ಅವರಿಗೆ ಉತ್ತಮ ಚಿಕಿತ್ಸೆ ದೊರಕುವಂತೆ ಮಾಡಿ, ಅವರ ಬದುಕನ್ನು ಉತ್ತಮಗೊಳಿಸುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತದೆ.

ಈ ದಿನದಂದು ಆರೋಗ್ಯ ಇಲಾಖೆ, ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ವಿಚಾರ ಸಂಕಿರಣಗಳು, ಚರ್ಚೆಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಹಿಮೋಫಿಲಿಯಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು