ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿಯಿರಿ ಬೆಳ್ಳುಳ್ಳಿ ಸತ್ವ

Last Updated 30 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ದಿನಸಿ ಖರ್ಚಿಗಿಂತ  ಔಷಧಿಗೇ  ಹೆಚ್ಚು ಹಣ ಹೋಗ್ತಾ  ಇದೆ ಎಂಬ ಚಿಂತೆಯಲ್ಲಿದ್ದೀರಾ ?  ನಿತ್ಯ ಬೆಳ್ಳುಳ್ಳಿ  ಸೇವನೆಯೊಂದೇ  ಇದಕ್ಕಿರುವ ಪರಿಹಾರ  ಎನ್ನುತ್ತದೆ ಆಯುರ್ವೇದ. ರಷ್ಯಾ ದೇಶದಲ್ಲಿ  ಪೆನ್ಸಿಲಿನ್ ,  ಅರಬ್ ರಾಷ್ಟ್ರಗಳಲ್ಲಿ ಬಡವರ ಔಷಧಿ   ಎಂಬ ಬಿರುದಿನಿಂದ ಕರೆಯಲ್ಪಡುವ  ಬೆಳ್ಳುಳ್ಳಿಯಲ್ಲಿ ಅಡಗಿರುವ ಔಷಧೀಯ ಗುಣಗಳು ಒಂದೆರಡಲ್ಲ!

ಇತಿಹಾಸಕಾರ  ಹೆರಾಟನ್ ಪ್ರಕಾರ  ಪ್ರಾಚೀನ ಈಜಿಪ್ಟ್ ನಲ್ಲಿ ಬೆಳ್ಳುಳ್ಳಿ ನ್ನು ಯಥೇಚ್ಛವಾಗಿ  ಬಳಸಲಾಗುತ್ತಿತ್ತು.  ಸಸಾರಜನಕ,   ರಂಜಕ,  ಪೊಟ್ಯಾಶಿಯಂ, ಸುಣ್ಣ,  ಮೆಗ್ನಿಶಿಯಂ, ಶರ್ಕರಪಿಷ್ಟಗಳನ್ನು   ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಇದರ ಬಳಕೆಯಿಂದ ಕ್ಯಾನ್ಸರ್ ಕಣಗಳನ್ನು ನಿಷ್ಕ್ರಿಯಗೊಳಿಸಬಹುದು ಎಂಬುದನ್ನು ಅನೇಕ ಸಂಶೋಧನೆಗಳು ಸಾಬೀತುಪಡಿಸಿವೆ.

ಅಮೃತದ ಬಿಂದು
ಗರುಡನು ತಾಯಿ ವಿನತೆಯ ದಾಸ್ಯ  ವಿಮೋಚನೆಗಾಗಿ  ಇಂದ್ರನಲ್ಲಿದ್ದ ಅಮೃತದ ಕಲಶವನ್ನು ಹೊತ್ತು ತರುತ್ತಾನಂತೆ. ಆಗ  ಒಂದು ಹನಿ ಕಲಶದಿಂದ ತುಳುಕಿ ಭೂಮಿಯ ಮೇಲೆ ಬಿದ್ದುದರ ಪರಿಣಾಮವಾಗಿ ಬೆಳ್ಳುಳ್ಳಿಯ ಉತ್ಪತ್ತಿಯಾಯಿತು ಎಂದು ಪುರಾಣದ ಕಥೆಯೊಂದು  ಹೇಳುತ್ತದೆ.

ಸಸ್ಯಶಾಸ್ತ್ರದಲ್ಲಿ ಇದರ ಹೆಸರು  ಅಲಿಯಂ ಸಟೈವಮ್  ಎಂದಿದ್ದರೆ, ಕುರಾನ್‌ನಲ್ಲಿ ಫೂಮ್ ಎಂಬ ಹೆಸರಿನಿಂದ ಕರೆಯಲಾಗಿದೆ. ಷಡ್ರಸಗಳಲ್ಲಿ ಒಂದು ರಸ ಊನವಾಗಿರುವುದರಿಂದ ರಸೋನ, ಲಸೂಣ ಎಂದು ಸಂಸ್ಕೃತದಲ್ಲಿ ಕರೆಯಲಾಗುತ್ತಿದೆ.

ಶೀತದಿಂದಾಗಿ ಬರುವ ಕಿವಿನೋವಿಗೆ ಇದರ ಎಣ್ಣೆ ಅತ್ಯುತ್ತಮ.  ತಲೆನೋವು, ಮೊಡವೆ, ಅನೇಕ ದಿನಗಳಿಂದ ಕಾಡುವ ಕಫದಿಂದ ಕೂಡಿದ ಕೆಮ್ಮಿಗೆ ಬೆಳ್ಳುಳ್ಳಿ ಕಷಾಯವು ರಾಮಬಾಣ.

ಇದರ ಸೇವನೆಯು ಚರ್ಮವನ್ನು ಕಾಂತಿಯುಕ್ತಗೊಳಿಸುವುದಲ್ಲದೆ ನೆರಿಗೆಯನ್ನು ಇಲ್ಲವಾಗಿಸುತ್ತದೆ. ಅಧಿಕ ರಕ್ತದೊತ್ತಡ ಹಾಗೂ ಹೃದ್ರೋಗ ನಿಯಂತ್ರಣಕ್ಕೆ ಬೆಳ್ಳುಳ್ಳಿಯು ಮಿತ್ರನಂತೆ ಕೆಲಸಮಾಡುತ್ತದೆ. ಮಧುಮೇಹಿಗಳೂ ಕೂಡ ಇದನ್ನು ಸೇವಿಸಲು ಅಡ್ಡಿಯಿಲ್ಲ.
ಬೆಳ್ಳುಳ್ಳಿ ಎಸಳುಗಳನ್ನು ಸಕ್ಕರೆಯೊಂದಿಗೆ  ಹಾಲಿನಲ್ಲಿ ಬೇಯಿಸಿ ಹಲ್ವ ಮಾಡಿ ದಿನಕ್ಕೆರಡು ಬಾರಿ ಸೇವಿಸಿದಲ್ಲಿ ಸೊಂಟನೋವು ಮಾಯವಾಗುವುದು.

ಋತುಚಕ್ರದ ಸಮಯದಲ್ಲಿ ಹೊಟ್ಟೆನೋವು ಬರುತ್ತಿದ್ದರೆ ಒಂದು ವಾರಕ್ಕೆ ಮುಂಚೆ ಎರಡು ಎಸಳುಗಳನ್ನು ಬೆಲ್ಲದೊಂದಿಗೆ ಸೇರಿಸಿ ದಿನಾ ರಾತ್ರಿ ಮಲಗುವಾಗ ಸೇವಿಸತಕ್ಕದ್ದು.
ನೀರಿಗೆ ಹಾಕಿ ಕಷಾಯ ಮಾಡಿ ಕುಡಿಯುವುದರಿಂದ ಸಂಧಿವಾತ, ನರದೌರ್ಬಲ್ಯಗಳಿಂದ ಚೇತರಿಕೆ ಪಡೆಯಬಹುದು. ಬೆಳ್ಳುಳ್ಳಿ ಗಡ್ಡೆಯನ್ನು ಸುಟ್ಟು ಪುಡಿಯನ್ನು ಅರಶಿನ  ಮತ್ತು ಬೆಣ್ಣೆಯೊಂದಿಗೆ  ಕಲಸಿ ಹಚ್ಚಿದರೆ  ಚರ್ಮದ ಮೇಲೇಳುವ  ಕುರವು ವಾಸಿಯಾಗುತ್ತದೆ.

ಚೇಳು, ಅಥವಾ ಇನ್ಯಾವುದೇ ಕೀಟಗಳು ಕಡಿದಲ್ಲಿ ಲಸೂಣವನ್ನು ಅರೆದು ಉಪ್ಪನ್ನು  ಸೇರಿಸಿ ಗಾಯವಾದ ಜಾಗದಲ್ಲಿ ಹಚ್ಚಿದರೆ ವಿಷ  ಇಳಿದುಹೋಗುವುದು. ಹಲ್ಲು ನೋಯುತ್ತಿದ್ದರೆ, ಬೆಳ್ಳುಳ್ಳಿಯ ಚಿಕ್ಕ ತುಂಡುಗಳನ್ನು ಹಲ್ಲಿನ ಬಳಿ ಇಟ್ಟುಕೊಳ್ಳಿ. ಸಿಡಿತ ಕಡಿಮೆಯಾಗುವುದು
ಬೆಳ್ಳುಳ್ಳಿ ಎಣ್ಣೆಯನ್ನು ಮೂಳೆಗಳು ಮುರಿದಿರುವ ಜಾಗದಲ್ಲಿ ಹಚ್ಚುತ್ತ್ದ್ದಿದರೆ ಮೂಳೆಗಳ ಜೋಡಣೆಯಾಗುತ್ತದೆ.

ಒಂದು ಲೋಟ  ಬಿಸಿ ನೀರಿಗೆ  ಲಿಂಬೆ ರಸ ಮತ್ತು ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿ ಕುಡಿದಲ್ಲಿ ಕ್ಯಾನ್ಸರ್ ನಿಯಂತ್ರಣಕ್ಕೆ ಒಳ್ಳೆಯದು. ಕ್ಯಾನ್ಸರ್ ರೋಗಿಗಳು ದಿನಕ್ಕೆರಡು ಬಾರಿ ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು  ಕೊಂಚ ಜಜ್ಜಿ ಜೇನುತುಪ್ಪದಲ್ಲಿ ಹಾಕಿಟ್ಟರೆ ಕೆಲವುದಿನಗಳ ನಂತರ ಲೇಹ್ಯದಂತಾಗುವುದು. ಅದನ್ನು ಸ್ವಲ್ಪ ಸ್ವಲ್ಪವೇ ಸೇವಿಸುತ್ತಾ ಬಂದಲ್ಲಿ ಇಲ್ಲವೇ ಹಾಲಿಗೆ ಎರಡು ಎಸಳು ಬೆಳ್ಳುಳ್ಳಿ ಹಾಕಿ ಸ್ವಲ್ಪವೇ ಕುದಿಸಿ ದಿನಾ ರಾತ್ರಿ ಕುಡಿಯುವುದರಿಂದ ಸರ್ವವ್ಯಾಧಿಗಳು ನಿಯಂತ್ರಣಕ್ಕೆ ಬರುವುದರಲ್ಲಿ ಸಂಶಯವೇ ಇಲ್ಲ.ಆದರೆ ಹಸಿ ಬೆಳ್ಳುಳ್ಳಿಯಲ್ಲಿ ರಕ್ತವನ್ನು ತೆಳುಗೊಳಿಸುವ  ಗುಣಗಳಿರುವುದರಿಂದ ದಿನಕ್ಕೆರಡು ಎಸಳುಗಳಿಗಿಂತ ಹೆಚ್ಚು ಸೇವಿಸಕೂಡದು. ಉಷ್ಣಕಾರಕವೂ ಆಗಿರುವುದರಿಂದ ಬಿಸಿಲಿನಲ್ಲಿ ಕೆಲಸಮಾಡುವವರು ಹೆಚ್ಚಾಗಿ ಬಳಸುವಂತಿಲ್ಲ.

ಅಂದಹಾಗೆ ಮಡಿ ಹಾಗೂ ಮೂಗಿಗೆ ಹಿತಕರವಾದ ವಾಸನೆ ಇಲ್ಲ ಎಂಬ ಕಾರಣಕ್ಕೆ ಹಲವರು ನೈಸರ್ಗಿಕವಾಗಿ ದೊರಕುವ  ಇದನ್ನು ಬಳಸದೇ ಮಾರುಕಟ್ಟೆಗಳಲ್ಲಿ ಸಿಗುವ ಗುಳಿಗೆಗಳಿಗೆ ಮೊರೆಹೋಗುತ್ತಿದ್ದಾರೆ. ಔಷಧೀಯ ಗುಣಗಳು ಅಡಗಿಕೊಂಡಿರುವ ವಾಸನೆ ಮತ್ತು ತೈಲಯುಕ್ತ ಅಂಶಗಳ ಪ್ರಮಾಣ ಮಾತ್ರೆಗಳಲ್ಲಿ ಕಡಿಮೆಯಾಗುವುದರಿಂದ ಪ್ರಾಕೃತಿಕವಾಗಿ ದೊರಕುವ ಬೆಳ್ಳುಳ್ಳಿ ಸೇವನೆಯೇ  ಹೆಚ್ಚು ಸೂಕ್ತ ಎಂಬುದು ಆಯುರ್ವೇದ ವೈದ್ಯ ಡಾ.ಶರತ್‌ಚಂದ್ರ ಅವರ  ಸಲಹೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT