ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಿನ್ನತೆ ನಿವಾರಣೆಗೂ ಬಾಳೆಹಣ್ಣು

Last Updated 20 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ವಿಶ್ವದಾದ್ಯಂತ  ಸುಮಾರು ಮುನ್ನೂರು ವಿಧದ  ಬಾಳೆ ತಳಿಗಳಿದ್ದು,  ಸತ್ವಗಳಲ್ಲಿ ಅಲ್ಪಸ್ವಲ್ಪ ಬದಲಾವಣೆಗಳು ಕಂಡುಬರುತ್ತದೆ.  ಇನ್ನು ಇದರ ಮೂಲಸ್ಥಳ ಭಾರತ ಹೌದೊ ಅಲ್ಲವೊ ಎನ್ನುವುದರ ಬಗೆಗೆ ಚರ್ಚೆ, ಸಂಶೋಧನೆಗಳು ನಡೆಯುತ್ತಲೇ ಇವೆ.

ಅದೇನೇ ಇರಲಿ, ನಮ್ಮ ದೇಶದಲ್ಲಿ ಮಾವಿನ ನಂತರ ಎರಡನೆಯ ಮುಖ್ಯ ಬೆಳೆ ಎಂಬ ಹೆಗ್ಗಳಿಕೆಗೆ ಈ ಹಣ್ಣು ಪಾತ್ರವಾಗಿರುವುದಂತೂ ನಿಜ. ಧಾರ್ಮಿಕ ವಿಧಿವಿಧಾನಗಳಲ್ಲಿ ಅತಿಥಿ ಸತ್ಕಾರಗಳಲ್ಲಂತೂ ಬಾಳೆ ಇಲ್ಲದಿರುವುದೇ ಇಲ್ಲ.

ಹೇರಳವಾದ ವಿಟಮಿನ್‌ಗಳು,  ಕಾರ್ಬೋಹೈಡ್ರೇಟ್ಸ್. ನಾರಿನಾಂಶ, ಕ್ಯಾಲ್ಸಿಯಂ, ಪ್ರೋಟೀನ್,  ಎಲ್ಲದಕ್ಕಿಂತಲೂ ಮುಖ್ಯವಾಗಿ ಪೊಟ್ಯಾಶಿಯಂನ್ನು ಹೊಂದಿರುವುದರಿಂದ ಇದು ಹೃದ್ರೋಗ ಹಾಗೂ ರಕ್ತದೊತ್ತಡದ ತೊಂದರೆಯುಳ್ಳವರಿಗೆ ಉಪಕಾರಿಯೆನಿಸಿದೆ. 

ರಕ್ತಹೀನತೆಯಿಂದ ಬಳಲುತ್ತಿರುವವರು ಈ ಹಣ್ಣನ್ನು ಕಿತ್ತಳೆ ಹಣ್ಣಿನ ಜತೆಗೆ ಸೇರಿಸಿ ತಿಂದರೆ ಗುಣಮುಖರಾಗಬಹುದು.   ನರಗಳಿಗೆ ಬೇಕಾದ ರಂಜಕಾಂಶವನ್ನು ಬಾಳೆಹಣ್ಣು ಒದಗಿಸಿಕೊಡುವುದರಿಂದ ಸ್ನಾಯುಗಳು ಬಲಯುತವಾಗುತ್ತದೆ.

ಹೆಚ್ಚಿನ ಪೊಟ್ಯಾಶಿಯಂನ್ನು ಈ ಹಣ್ಣು ಹೊಂದಿರುವುದರಿಂದ ಮೂಳೆಗಳಿಗೆ ಅತ್ಯುತ್ತಮವಂತೆ.   ಹಾಗಾಗಿ ವ್ಯಾಯಾಮ ಮಾಡುವವರು, ಆಟಗಾರರು, ಬಾಳೆಹಣ್ಣನ್ನು ಸೇವಿಸಲೇಬೇಕು  ಎನ್ನುವುದು  ಡಯಟಿಶಿಯನ್‌ರ  ಸಲಹೆ.

 ಇದರಲ್ಲಿನ  ಟ್ರಿಪ್ರೋಪ್ಯಾನ್ ಎಂಬ ಪ್ರೊಟೀನ್  ಖಿನ್ನತೆಯಿಂದ ಹೊರಬರಲು ಸಹಾಯ ಮಾಡುತ್ತದೆ. ಅಲ್ಲದೆ ಮನಸ್ಸನ್ನು ಉಲ್ಲಸಿತವಾಗಿಡುತ್ತದೆ. ಹಿಮೋಗ್ಲೋಬಿನ್ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಮಿದುಳಿಗೆ ಆಮ್ಲಜನಕದ ಪೂರೈಕೆಯನ್ನು ಮಾಡುವುದರಿಂದ ಮಿದುಳು ಚುರುಕುಗೊಳ್ಳುತ್ತದೆ.
 
ಏಕಾಗ್ರತೆಯನ್ನು ಕೂಡಾ ಹೆಚ್ಚಿಸುತ್ತದೆ. ಮಾತ್ರವಲ್ಲ  ವಿಟಮಿನ್ ಎ ಹೊಂದಿರುವುದರಿಂದ ಕಣ್ಣಿನ ಆರೋಗ್ಯ ಜತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಸಿಗರೇಟ್ ಚಟಕ್ಕೆ ಬಿದ್ದವರು ಸಿಗರೇಟ್ ಸೇದಬೆಕೆನಿಸಿದಾಗೆಲ್ಲಾ ಬಾಳೆಹಣ್ಣನ್ನು ತಿಂದರೆ ಅದರಲ್ಲಿನ ಬಿ-6, ಬಿ-12, ಮ್ಯೋಂಗನೀಸ್ ಅಂಶವು ಮನಸ್ಸನ್ನು ನಿಯಂತ್ರಿಸುವುದಕ್ಕೆ ಸಹಾಯಕವಾಗುವುದಂತೆ. ಆ ಮೂಲಕ ಚಟಮುಕ್ತರಾಗಿ ಹೆಚ್ಚು ಕಾಲ ಬದುಕಬಹುದು.

ಮಾತ್ರವಲ್ಲ, ಇಂಗ್ಲೆಂಡ್ ಜನರಲ್ ಆಫ್ ಮೆಡಿಸಿನ್ ರವರ ಸಂಶೋಧನೆಯು ಬಾಳೆಹಣ್ಣಿನ ಸೇವನೆಯಿಂದ ಸ್ಟ್ರೋಕ್‌ನಿಂದ ಸಾಯುವವರ ಸಂಖ್ಯೆಯನ್ನು ಕಡಿಮೆಗೊಳಿಸಬಹುದು ಎಂಬ  ವಿಷಯವನ್ನು ಹೊರತಂದಿದೆ.  

ಪ್ರಯೋಜನ
* ಬಾಳೆಹಣ್ಣನ್ನು ಮೊಸರಿನೊಂದಿಗೆ ತಿಂದರೆ ಕಣ್ಣುರಿ, ಅಂಗಾಲಿನ ಉರಿ ಕಡಿಮೆಯಾಗುತ್ತದೆ. ಮೂಲವ್ಯಾಧಿಯು ಇನ್ನಿಲ್ಲವಾಗುವುದು.  ಮಾತ್ರವಲ್ಲ ಈ ಹಣ್ಣನ್ನು ತುಪ್ಪದೊಂದಿಗೆ ತಿನ್ನುವುದು  ಅಥವಾ ರಸಬಾಳೆಯನ್ನು ಹಾಗೆಯೇ ತಿನ್ನುವುದು ಕೂಡಾ ಮೂಲವ್ಯಾಧಿಗೆ ಅತ್ಯುತ್ತಮ.

* ಬಾಳೆಹೂವಿನ ಪಲ್ಯವನ್ನು ತಿನ್ನುತ್ತಿದ್ದರೆ ಸುಸ್ತು ನಿವಾರಣೆಯಾಗುತ್ತದೆ.

* ದಿಂಡಿನ ರಸವು ಕಿಡ್ನಿಯಲ್ಲಿನ( ಚಿಕ)್ಕ ಕಲ್ಲನ್ನು ಕರಗಿಸುತ್ತದೆ. ಬಾಳೆಹಣ್ಣನ್ನು ಒಂದು ಏಲಕ್ಕಿಯೊಂದಿಗೆ ತಿನ್ನುತ್ತಿದ್ದರೆ ಮಲಬದ್ದತೆ ದೂರವಾಗುವುದು.

* ಬಾಳೆ ಹೂವನ್ನು ಮೊಸರಿನೊಂದಿಗೆ ಸೇವಿಸುತ್ತಿದ್ದರೆ ಸ್ತ್ರೀಯರಲ್ಲಿನ ಅತಿರಕ್ತ ಸ್ರಾವದ ತೊಂದರೆಯು ನಿವಾರಣೆಯಾಗುವುದು.

* ಸುಟ್ಟ ಗಾಯಕ್ಕೆ ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು ಕಿವುಚಿ ಹಚ್ಚಿದರೆ ಉರಿ ಕಡಿಮೆಯಾಗುವುದು.
 
* ಮುಖಕ್ಕೆ ಸಿಪ್ಪೆಯನ್ನು ಉಜ್ಜುವ ಅಭ್ಯಾಸವನ್ನು ರೂಢಿಸಿಕೊಂಡರೆ ಚರ್ಮವು ನಯ, ಹಾಗೂ ಕಾಂತಿಯುಕ್ತವಾಗುವುದು.

* ಸೊಳ್ಳೆ ಕಚ್ಚಿದ ಜಾಗಕ್ಕೆ ಸಿಪ್ಪೆಯನ್ನು ಸವರಿದರೆ ಕೆರೆತ ಕಡಿಮೆಯಾಗುತ್ತದೆ.

* ಒಣ ಚರ್ಮದ ತೊಂದರೆಯಿರುವವರು ರೋಸ್ ವಾಟರ್‌ನ ಕೆಲವು ಹನಿಗಳನ್ನು ಬಾಳೆ ಹಣ್ಣಿನ ಜತೆ ಸೇರಿಸಿ ಹಚ್ಚಬೇಕು.

* ಬಾಳೆಹಣ್ಣು, ಮೊಟ್ಟೆಯ ಹಳದಿ ಭಾಗ, ಸ್ವಲ್ಪ ಜೇನು ಇಷ್ಟನ್ನು ಚೆನ್ನಾಗಿ ಕಲಸಿ ಕೂದಲಿಗೆ ಹಚ್ಚಿದರೆ ಕೂದಲು ನಳನಳಿಸುವುದು.

ಒಟ್ಟಿನಲ್ಲಿ ಬಾಳೆಯ ಎಲೆ, ಕಾಂಡ, ಹೂವು ಹಣ್ಣು ಔಷಧೀಯ ಗುಣಗಳನ್ನು ಹೊಂದಿದ್ದು ಉಪಯೋಗಕ್ಕೆ ಬರುವಂತದ್ದೇ ಆಗಿದೆ. ಅಲ್ಲದೆ ಸರ್ವ ಋತುಗಳಲ್ಲೂ ದೊರಕುವುದರಿಂದ  ಸೇವಿಸುವದಕ್ಕೆ ಋತುಮಾನದ ಮಿತಿಯೂ ಇಲ್ಲ. ಕಾರ್ಮಿಕರಿಗೆ, ಶ್ರಮದ ಕೆಲಸ ಮಾಡುವವರಿಗೆ ಇದು ಹೆಚ್ಚಿನ ಶಕ್ತಿಯನ್ನು ಒದಗಿಸಿಕೊಡುತ್ತದೆ.

ಹಾಗಾಗಿ ಬಾಳೆಹಣ್ಣು ಆರೋಗ್ಯವರ್ಧಕ ಹಣ್ಣಂತೂ ಹೌದು. ಆದರೆ ಕಫಪ್ರಕೃತಿ ಇರುವವರು, ಮಂಡಿ ಊದಿಕೊಂಡಿರುವವರು, ದೇಹದಲ್ಲಿ ನೀರು ತುಂಬಿರುವವರು, ಕಿಡ್ನಿ ವೈಫಲ್ಯದಿಂದ ಬಳಲುವವರು ಹಾಗೂ ತೀವ್ರವಾದ ಅಸ್ತಮಾ ತೊಂದರೆಯಿರುವವರು ಬಾಳೆಹಣ್ಣನ್ನು ಸೇವಿಸಬಾರದು  ಎಂಬುದು ಆಯುರ್ವೇದ ವೈದ್ಯ ಎಮ್. ಹೆಚ್ .  ಭಾಸ್ಕರ್ ಅವರ ಎಚ್ಚರಿಕೆಯ ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT