ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಹೃದಯ

ಪ್ರಶ್ನೋತ್ತರ
Last Updated 28 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಜಿ.ಎಚ್.ಮೋಪಗಾರ್ ರೆಡ್ಡಿ,  ಬಾಗಲಕೋಟೆ
ಆ್ಯಂಜಿಯೋಗ್ರಾಂ ಅನ್ನು ಹೃದಯದ ಯಾವ ಕಾಯಿಲೆಗೆ ಸಂಬಂಧಿಸಿದಂತೆ ಮಾಡಲಾಗುತ್ತದೆ. ಇದನ್ನು ಮಾಡಿಸಿದ ನಂತರ ಯಾವ ಯಾವ ಬಗೆಯ ಔಷಧಗಳನ್ನು ತೆಗೆದುಕೊಳ್ಳಬೇಕಾತ್ತದೆ. ಅಲ್ಲದೆ ಆ್ಯಂಜಿಯೋಗ್ರಾಂ ಅನ್ನು ಯಾವ ರೀತಿ ಪತ್ತೆ ಮಾಡಬೇಕಾಗುತ್ತದೆ?

ಉತ್ತರ: ಕರೋನರಿ ಆಂಜಿಯೋಗ್ರಾಂ, ಅಂದರೆ ಹೃದಯದ ರಕ್ತನಾಳಗಳನ್ನು ಸಂಕ್ಷಿಪ್ತವಾಗಿ ನೋಡುವಂತಹ ಕಾರ್ಯ ವಿಧಾನ. ಸಾಮಾನ್ಯವಾಗಿ ಈ ಆಂಜಿಯೋಗ್ರಾಂ ಅನ್ನು ಹೃದಯಾಘಾತ ಆದಂತಹವರಿಗೆ ಮಾಡಲಾಗುತ್ತದೆ. ಇನ್ನು ಕೆಲವರಿಗೆ ಹೃದಯಕ್ಕೆ ಸಂಬಂಧಪಟ್ಟ ನೋವು ಬಂದಾಗ/ ಸ್ಟ್ರೆಸ್ ಇ.ಸಿ.ಜಿ.ಯಲ್ಲಿ ವ್ಯತ್ಯಾಸ ಕಂಡಾಗ ಮಾಡಲಾಗುತ್ತದೆ.

ಇದರಿಂದ ರಕ್ತನಾಳಗಳಲ್ಲಿ ಬ್ಲಾಕೇಜ್‌ಗಳು ಇವೆಯೋ ಇಲ್ಲವೋ ಎಂದು ತಿಳಿಯಬಹುದು.  ಬ್ಲಾಕೇಜ್‌ಗಳು ಇದ್ದಲ್ಲಿ ಆಂಜಿಯೋಪ್ಲಾಸ್ಟಿ ಮಾಡಬೇಕೋ, ಬೈಪಾಸ್ ಶಸ್ತ್ರಚಿಕಿತ್ಸೆ ಮಾಡಬೇಕೋ ಎಂಬುದನ್ನು ತಿಳಿಯಬಹುದು. ಆಂಜಿಯೋಗ್ರಾಂ ಪ್ರಕ್ರಿಯೆ ಮೂಲಕವೇ ಆಂಜಿಯೋಪ್ಲಾಸ್ಟಿಯನ್ನು ಮಾಡಲಾಗುತ್ತದೆ.

ಟಿ.ಜಿ.ವೆಂಕಟ ಕೃಷ್ಣ, 47 ವರ್ಷ
ನನಗೆ ಎರಡು ತಿಂಗಳಿನಿಂದ ಹೃದಯದ ಬಡಿತ ಜಾಸ್ತಿಯಾಗಿದೆ. ಏದುಸಿರು ಬಂದು, ಜೋರಾಗಿ ಉಸಿರಾಡುವಂತೆ ಆಗುತ್ತದೆ. ಮಾತನಾಡಿದಾಗ ಎದೆ ನೋವು ಬಂದು ಆಯಾಸ ಆಗುತ್ತದೆ. ಪರಿಹಾರ ತಿಳಿಸಿ.

ಉತ್ತರ: ಯಾವುದಕ್ಕೂ ನೀವು ಮೊದಲು ಸಂಬಂಧಪಟ್ಟ ಎಲ್ಲ ರಕ್ತಪರೀಕ್ಷೆಗಳು, ಇಸಿಜಿ, ಎಕೊ ಕಾರ್ಡಿಯೋಗ್ರಾಂ ಮತ್ತು ಥೈರಾಯಿಡ್ ಪರೀಕ್ಷೆಯನ್ನು ಮಾಡಿಸುವುದು ಸೂಕ್ತ. ಎಕೊ ತಪಾಸಣೆಯಲ್ಲಿ ಏನೂ ವ್ಯತ್ಯಾಸ ಕಂಡುಬರದಿದ್ದಲ್ಲಿ, ಸ್ಟ್ರೆಸ್ ಇ.ಸಿ.ಜಿ ಮಾಡಿಸಬೇಕು.

ಅದು ಕೂಡ ನಾರ್ಮಲ್ ಬಂದರೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಸಾಮಾನ್ಯವಾಗಿ ಇದ್ದಕ್ಕಿದ್ದ ಹಾಗೆ ಹೃದಯದ ಬಡಿತದ ಜೊತೆಗೆ ತಲೆಸುತ್ತು, ಮೈ ಬೆವರುವುದು, ಸುಸ್ತಾಗುವುದು ಕಂಡುಬಂದಲ್ಲಿ, ಅದಕ್ಕೆ ಸೂಕ್ತ ಸಲಹೆಯನ್ನು ಆದಷ್ಟು ಬೇಗನೇ ತೆಗೆದುಕೊಳ್ಳಬೇಕು.

ಹೃದಯದ ಆರೋಗ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಉತ್ತರಿಸುತ್ತಾರೆ.

ಪ್ರಶ್ನೆ ಕಳುಹಿಸುವ ವಿಳಾಸ: ಸಂಪಾದಕರು, ನಿಮ್ಮ ಹೃದಯ, ಭೂಮಿಕಾ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು- 560001
ಇ-ಮೇಲ್ ವಿಳಾಸ: bhoomika@prajavani.co.in
bhoomikapv@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT