ಮಕ್ಕಳನ್ನು ಹೆರುವುದೇ ಹೆಣ್ಣಿನ ಹಣೆಬರಹ ಎನ್ನುವಂತಹದೊಂದು ಮಾತು ಇಂದಿಗೂ ಕೇಳಿಬರುತ್ತದೆ. ಆದರೂ ಬದಲಾಗುತ್ತಿರುವ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಬೆಳವಣಿಗೆಯತ್ತಲೂ ಮಹಿಳೆಯ ಮನಸ್ಸು ವಾಲುತ್ತಿದೆ. ನಗರ ಪ್ರದೇಶದಲ್ಲಂತೂ ಈ ಮಾತು ಸತ್ಯ. ಶಿಕ್ಷಣದ ಉದ್ದೇಶಗಳು ಮತ್ತು ವ್ಯಕ್ತಿ ಗುರಿಯನ್ನು ಸರಿದೂಗಿಸಿಕೊಳ್ಳುವಂತಹ ಲಕ್ಷಣ ಇಂದಿನ ಹೆಣ್ಣು ಮಕ್ಕಳಲ್ಲಿ ಕಾಣಬಹುದು. ಹಾಗೆಂದ ಮಾತ್ರಕ್ಕೆ ಆಚಾರ, ಸಂಪ್ರದಾಯಗಳ ಹಿಡಿತ ಸಡಿಲಗೊಂಡಿದೆ ಎಂದು ಹೇಳುವುದು ಕಷ್ಟ. ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವುದಕ್ಕೆ ಅವಕಾಶ ಕೊಡದಂತಹ ಕುಟುಂಬ, ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿಯೇ ಇದ್ದಾರೆ. ಎಷ್ಟೇ ಉತ್ತಮ ಶಿಕ್ಷಣ, ಸಾಧನೆಗಳಿದ್ದರೂ ಕುಟುಂಬದ ಗೌರವ ಕಾಪಾಡುವುದು ಅತ್ಯವಶ್ಯಕ ಎನ್ನುವಂತಹ ಹಿತವಚನಗಳು, ಆದೇಶ, ಕಟ್ಟಾಜ್ಞೆಗಳನ್ನು ಅದೆಷ್ಟು ಸಾವಿರ ಸುಶಿಕ್ಷಿತ ಹೆಣ್ಣುಮಕ್ಕಳು ನಿತ್ಯವೂ ಕೇಳಿಸಿಕೊಳ್ಳುತ್ತಾರೆ. ಇವೆಲ್ಲವು ಭವಿಷ್ಯದ ವ್ಯಕ್ತಿತ್ವ, ಕುಟುಂಬದ ಮೇಲೆ ಪರಿಣಾಮ ಬೀರದೆ ಇರದು. ಅದರಲ್ಲಿಯೂ ಸಂಸಾರದ ನಿರ್ವಹಣೆಯ ದೃಷ್ಟಿಯಿಂದ ಇಂತಹ ಕಟ್ಟುಪಾಡುಗಳೇ ಮಾನಸಿಕ ಅಸ್ಥಿರತೆಗೆ ಕಾರಣ. ಇಂತಹದೊಂದು ಬೆಳವಣಿಗೆಯನ್ನು ಎದುರಿಸುವ ಸಲುವಾಗಿಯೇ ಏನೋ ಮಕ್ಕಳನ್ನು ಹೆರುವುದು, ಪೋಷಿಸುವುದು ಒಂದು ದೊಡ್ಡ ಹೊಣೆಗಾರಿಕೆ ಎನ್ನುವ ಭಾವನೆ ಇಂದಿನ ವೃತ್ತಿಪರ ಹೆಣ್ಣುಮಕ್ಕಳಲ್ಲಿ ಕಂಡುಬರುತ್ತಿದೆ. ಜೊತೆಗೆ ತಾಯ್ತನದ ಬಯಕೆಯನ್ನು ಹತ್ತಿಕ್ಕುವಂತಹ ಸಾಮಾಜಿಕ, ಸಾಂಸ್ಕೃತಿಕ ಪರಿಸರವೂ ನಿರ್ಮಾಣವಾಗುತ್ತಿದೆ ಎನ್ನುವ ಆತಂಕವು ಅವರಲ್ಲಿರಬಹುದು.

ವೃತ್ತಿ ಮುಖ್ಯ, ಮಕ್ಕಳಲ್ಲ...
ಈ ಭಾವನೆ ಅಮೆರಿಕದ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವುದನ್ನು ಅಲ್ಲಿನ ಸಮಾಜವಿಜ್ಞಾನಿಗಳ ಅಧ್ಯಯನಗಳು ಸೂಚಿಸುತ್ತವೆ. ಇಂತಹದೊಂದು ಪರಿಸ್ಥಿತಿ ನಮ್ಮಲ್ಲಿಯೂ ಕಾಣಿಸಿಕೊಳ್ಳುತ್ತಿದೆ. ವಿಸ್ತಾರಗೊಳ್ಳುತ್ತಿರುವ ಆರ್ಥಿಕ ಮತ್ತು ಶೈಕ್ಷಣಿಕ ಅವಕಾಶಗಳು; ವೃತ್ತಿಪರತೆ ಮತ್ತು ವೃತ್ತಿ ಪೈಪೋಟಿಯಿಂದಾಗಿ ಪೋಷಕ/ ಪಾಲಕರಾಗಬೇಕೆಂಬ ಹಂಬಲ ಕಡಿಮೆಯಾಗಿರುವುದು; ಸಹಜ ಶಾರೀರಿಕ ಮತ್ತು ಮಾನಸಿಕ ಬಯಕೆಗಳನ್ನು ಕೃತಕವಾಗಿಯೋ, ತಾತ್ಕಾಲಿಕವಾಗಿಯೋ ಒದಗಿಸುವ ಅಥವಾ ಮುಂದೂಡುವುದಕ್ಕೆ ನೆರವಾಗುತ್ತಿರುವ ಆಧುನಿಕ ತಂತ್ರಜ್ಞಾನ; ದುಡಿಯುವ ದಂಪತಿಗಳ ಮಗುವಿನ ಪಾಲನೆ, ಪೋಷಣೆಯ ಹೊಣೆಗಾರಿಕೆ ಮತ್ತು ಸಮಸ್ಯೆಗಳು; ಮಗು ಹುಟ್ಟಿದ ನಂತರ ದಂಪತಿಗಳ ನಡುವೆ ಉಂಟಾಗುವ ಸಾಮರಸ್ಯದ ಸಮಸ್ಯೆಗಳು; ಮತ್ತು ವೃತ್ತಿ ಸನ್ನಿವೇಶದಿಂದ ಹುಟ್ಟಿಕೊಳ್ಳುವ ಹೊಸ ಸಂಬಂಧ ಮತ್ತು ಬಯಕೆಗಳೇ ತಾಯ್ತನದ ಬಯಕೆಯನ್ನು ಬದಿಗೆ ಸರಿಸುತ್ತಿರುವುದು.

ಈ ಸಮಸ್ಯೆಗಳೊಂದಿಗೆ ಮಗು ಹುಟ್ಟಿದ ನಂತರ ಕೆಲವು ದಂಪತಿಗಳಲ್ಲಿ ಹೊಸ ಕುಟುಂಬದ ಆದ್ಯತೆ ಮತ್ತು ಬದ್ಧತೆಗಳು ಒತ್ತಡವನ್ನು ಉಂಟುಮಾಡುವುದು ಸಹಜ. ಹೊಸ ದಾಂಪತ್ಯದ ಸವಿಯನ್ನು ಈ ಒತ್ತಡವು ಮೊಟಕುಗೊಳಿಸಿದೆ ಎನ್ನುವಂತಹ ಭಾವನೆಯು ದಾಂಪತ್ಯ ವಿರಸಕ್ಕೆ ಅಡಿಪಾಯವಾಗಿರುತ್ತದೆ. ನವಜಾತ ಶಿಶುವಿಗೆ ಬೇಕಾದ ಪಾಲನೆಯ ಸಮಯವು ದಂಪತಿಗಳ ಸರಸದ ಅವಕಾಶಗಳನ್ನು ಮಿತಿಗೊಳಿಸುತ್ತದೆ. ಇಂತಹದೊಂದು ಸನ್ನಿವೇಶವನ್ನು ಒಪ್ಪಿಕೊಳ್ಳಲಾಗದ ಸಂಗಾತಿಗಳಲ್ಲಿ ಅಸಹನೆ, ಅಸಹಕಾರದ ವರ್ತನೆಗಳು ಪ್ರಬಲವಾಗಿ ಕಂಡುಬರುತ್ತದೆ. ಇದರೊಂದಿಗೆ ಹಾಲುಣಿಸುವಾಗ ಬೇಸರ, ಆತಂಕ, ಮನಸ್ತಾಪ, ಹಾಗೂ ಮಗುವಿನ ಶಾರೀರಿಕ ಅಗತ್ಯಗಳತ್ತ ನಿರಾಸಕ್ತಿಯ ವರ್ತನೆಗಳು ಎಳೆಯ ಮಗುವಿನ ಮನಸ್ಸು ಮತ್ತು ದೇಹದ ಮೇಲೂ ಆಗಬಲ್ಲದು. ಎಳೆಯ ಮಕ್ಕಳ ಮನಸ್ಸು ಪೋಷಕರ ನೆರವಿನಿಂದಲೇ ಗಟ್ಟಿಯಾಗಬೇಕು. ಸದಾ ಜಗಳದ ವಾತಾವರಣ, ಬಿರುಸಿನ ಮಾತುಕತೆಗಳು, ಜಿಗುಪ್ಸೆ, ಉದಾಸೀನ ಭಾವನೆಗಳು ಮಕ್ಕಳ ಮಾನಸಿಕ ವಿಕಾಸಕ್ಕೆ ಅಡ್ಡಿಯಾಗಬಲ್ಲದು.

ಮಗುವಿಗೆ ಮುಜುಗರ...
ಈ ಸಮಯದಲ್ಲಿ ಕಾಣಿಸಿಕೊಳ್ಳುವ ದಂಪತಿಗಳ ನಡುವಿನ ಸಣ್ಣಪುಟ್ಟ ಜಗಳಗಳು ಬಲವಾದ ಮನಸ್ತಾಪಕ್ಕೆ ಕಾರಣವಾಗುವುದರೊಂದಿಗೆ, ಬೇರೆಯಾಗುವುದು ಹಾಗೂ ವಿಚ್ಛೇದನಕ್ಕೂ ಕಾರಣ. ಸಾಮಾನ್ಯವಾಗಿ ಇದು ಕಾಣಿಸಿಕೊಳ್ಳುವ ಸಮಯದಲ್ಲಿ ಮಕ್ಕಳು ಶಾಲೆಯನ್ನು ಪ್ರವೇಶಿಸಿರುತ್ತಾರೆ.

ಅಪ್ಪಅಮ್ಮಂದಿರ ಜಗಳದ ಪರಿಣಾಮ ಏನೆನ್ನುವುದರ ಮನವರಿಕೆ ಆಗುವಂತಹ ವಯಸ್ಸಿನಲ್ಲಿ ಇರದಿದ್ದರೂ ಪೋಷಕರ ಸೆಳೆತ, ಸೆಡತಕ್ಕೆ ಬಲಿಯಾಗುವುದರಲ್ಲಿ ಸಂದೇಹವಿಲ್ಲ. ಇದರ ಅಡ್ಡ ಪರಿಣಾಮಗಳು ಹತ್ತು ಹಲವಾರು ಸನ್ನಿವೇಶಗಳಲ್ಲಿ ವ್ಯಕ್ತಗೊಳ್ಳಬಲ್ಲದು. ದಿನನಿತ್ಯದ ವರ್ತನೆಗಳು ಸಹಿಸಲಾಗದಷ್ಟು ಒರಟಾಗಿರಬಹುದು; ಪ್ರತಿಯೊಂದಕ್ಕೂ ವಿರೋಧ, ಕೋಪ, ಉಪವಾಸ ಅಥವಾ ಸೋಮಾರಿತನ; ಶಾಲೆಯಲ್ಲಿ ಹೊಂದಾಣಿಕೆ ಇರದಿರುವುದು, ಸಹಪಾಠಿಗಳೊಂದಿಗೆ ಮನಃಸ್ತಾಪ, ಜಗಳ, ಶೈಕ್ಷಣಿಕವಾಗಿ ಹಿಂದುಳಿಯುವುದು, ವಯಸ್ಸಿಗೆ ಸಹಜವೆನ್ನುವಂತಹ ವರ್ತನೆಗಳು ಇರದಿರುವುದು ಮತ್ತು ಅಪನಂಬಿಕೆ, ನಿರಾಕರಣೆ ಅಥವಾ ಅಸಹಾಯಕತೆಯಿಂದ ಹುಟ್ಟಿಕೊಳ್ಳುವಂತಹ ಮೂಢನಂಬಿಕೆಗಳು. ಇದಲ್ಲದೆ ಅತಿಯಾದ ಕಟ್ಟುಪಾಡು ಮತ್ತು ಸಂಪ್ರದಾಯಗಳತ್ತಲೂ ಮನಸ್ಸು ನಾಟುವ ಸಾಧ್ಯತೆಗಳಿವೆ.

ಇತ್ತೀಚಿನ ವರ್ಷಗಳಲ್ಲಿ ಎಳೆಯ ಮಕ್ಕಳ ತಾಯಿತಂದೆಯರಲ್ಲಿ ದಾಂಪತ್ಯ ಸಮಸ್ಯೆಗಳು, ವಿರಸ, ವೈವಾಹಿಕ ಜೀವನದ ಒತ್ತಡ ಮತ್ತು ವಿಚ್ಛೇದನವು ಹೆಚ್ಚಾಗುತ್ತಿರುವುದು ಸಹಜವೆನ್ನುವಷ್ಟರ ಮಟ್ಟಕ್ಕೇರಿದೆ. ಇಂದು ಸಣ್ಣಪುಟ್ಟ ಮಕ್ಕಳಿಗೂ ಸಹ ಅಪ್ಪಅಮ್ಮಂದಿರ ನಡುವೆ ಸಾಮರಸ್ಯ ಇಲ್ಲವೆನ್ನುವುದು ಚೆನ್ನಾಗಿಯೇ ಗೊತ್ತಿರುತ್ತದೆ. ವಿಚ್ಛೇದನ ಪಡೆದ ತಾಯಿ ಅಥವಾ ತಂದೆಯೊಂದಿಗೆ ಮನಸನ್ನು ಗಟ್ಟಿಮಾಡಿಕೊಂಡು ಶಾಲೆಯ ಒತ್ತಡವನ್ನು ಎದುರಿಸುವ ಪರಿಸ್ಥತಿ ಇರುತ್ತದೆ. ನೊಂದ ಗಂಡಸರ ಸಂಘ, ಮಡದಿ ದೌರ್ಜನ್ಯ ತಡೆ ಸಂಘಟನೆಗಳು ವಯಸ್ಕರ ಹಿತರಕ್ಷಣೆಗೆ ನೆರವಾಗಬಹುದು, ಆದರೆ, ಬೆಳೆಯುತ್ತಿರುವ ಮಕ್ಕಳ ಮಾನಸಿಕ ಹಿತರಕ್ಷಣೆಯತ್ತ ಗಮನ ಹರಿಸುತ್ತಿರುವ ಸಂಘಟನೆಗಳು ಕಡಿಮೆ. ಇಂತಹ ಸಂಸ್ಥೆಗಳು ಶಾಲೆಯ ಆವರಣದಲ್ಲಿದ್ದರಂತೂ ತುಂಬಾ ಉಪಯುಕ್ತ.

ವೃತ್ತಿಪರತೆ ಮತ್ತು ಪೋಷಕರು
ಮೊದಲ ಮಗುವಾದ ನಂತರದಲ್ಲಿ ದಾಂಪತ್ಯದ ಒಡನಾಡಿತನ ಕಡಿಮೆಯಾಗುವುದು ಅಥವಾ ಒಡನಾಡಿತನದ ಬಗ್ಗೆ ಉದಾಸೀನವಿರುವುದು ಈಚೆಗೆ ಕಂಡಬರುತ್ತಿರುವ ಹೊಸ ಪ್ರವೃತ್ತಿ. ಹೊಸದಾಗಿ ತಾಯ್ತನವನ್ನು ಆರಂಭಿಸಿರುವ ವೃತ್ತಿನಿರತ ಮಹಿಳೆಗೆ ಎಳೆಯ ಕಂದನ ಬಗ್ಗೆ ಆಲೋಚನೆ ಕೆಲಸದ ಸಮಯದಲ್ಲಿಯೂ ಇದ್ದೇ ಇರುತ್ತದೆ. ಮನೆಗೆ ಬೇಗ ಹೋಗಬೇಕೆಂಬ ಕಾತುರ, ವೃತ್ತಿ ಹೊಣೆಗಾರಿಕೆಗೆ ಚ್ಯುತಿಯಾಗಬಾರದು ಎನ್ನುವ ನಿಷ್ಠೆ, ಹಾಗೆಯೇ ತಾಯ್ತನದ ಕಾರಣಕ್ಕಾಗಿ ವೃತ್ತಿಪರತೆಗೆ ಧಕ್ಕೆ ಬರಬಾರದೆಂಬ ಜಾಗೃತಿ, ಆತಂಕಗಳು ಕುಟುಂಬ ನಿರ್ವಹಣೆಯನ್ನು ಕಷ್ಟವಾಗಿಸುತ್ತದೆ. ಇದರ ಜೊತೆಗೆ ಸಂಗಾತಿಯ ನೆರವು, ನಿರೀಕ್ಷೆ, ಮತ್ತು ಸಹಕಾರಗಳು ಸಮರ್ಪಕವಾಗಿರದಿದ್ದಾಗ ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ದಾಂಪತ್ಯದ ವಿರಸಗಳಿರುವಂತಹ ಪೋಷಕರಲ್ಲಿ ತಮ್ಮ ನಡುವೆಯೇ ಇಲ್ಲಸಲ್ಲದ ಪೈಪೋಟಿ ಭಾವನೆ ಹೆಚ್ಚುವುದರೊಂದಿಗೆ ಪರಸ್ಪರ ಆದರ, ವಿಶ್ವಾಸವು ಕ್ಷೀಣಿಸಿರುತ್ತದೆ. ಇದರ ಪರಿಣಾಮವು ಮಕ್ಕಳಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ವರ್ತನಾತ್ಮಕ ಸಮಸ್ಯೆಗಳನ್ನು ಹೊರತರಬಲ್ಲದು. ನಿತ್ಯ ಕದನದಲ್ಲಿರುವ ಪೋಷಕರಿಂದ ಹೆಚ್ಚಿನದೇನನ್ನು ಅಪೇಕ್ಷಿಸಲಾಗದು ಎನ್ನುವ ಸೂಕ್ಷ್ಮತೆಯು ಮಗುವಿನಲ್ಲಿರುತ್ತದೆ. ದಾಂಪತ್ಯದ ಸಮಸ್ಯೆಗಳನ್ನು ಸಮರ್ಪಕವಾಗಿ ಎದುರಿಸುವ ಪೋಷಕರಲ್ಲಿ ಒಡನಾಡಿತನದಿಂದ ಸಿಗುವ ನೆಮ್ಮದಿ, ಸಾಮರಸ್ಯ ಮತ್ತು ಅನ್ಯೋನ್ಯತೆಯ ಭಾವಗಳು ಮಗುವಿನ ಹೊಂದಾಣಿಕೆಯ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಸದೃಢ ವ್ಯಕ್ತಿತ್ವಕ್ಕೆ ಕಾರಣವಾಗಿರುತ್ತದೆ. ಇಂತಹದೊಂದು ಅರಿವನ್ನು ನವದಂಪತಿಗಳು ಮೂಡಿಸಿಕೊಳ್ಳಲೇ ಬೇಕು. ದುಡಿಯುವ ಹೆಣ್ಣು ಮತ್ತು ಗಂಡುಗಳಿಬ್ಬರಿಗೂ ಕುಟುಂಬದ ಹೊಣೆಗಾರಿಕೆಯನ್ನು ಹಂಚಿಕೊಳ್ಳುವ ಮನಸ್ಸಿದ್ದರೆ ದಾಂಪತ್ಯದ ವಿರಸ ಕಡಿಮೆಯಾಗಬಲ್ಲದು.

ಹೊಸದಾಗಿ ಪೋಷಕರಾಗುವ ಯುವದಂಪತಿಗಳು ಮೊದಲನೆಯ ಮಗುವಿನ ಜನನದೊಂದಿಗೆ ಹೊಸತನವೊಂದನ್ನು ಎದುರಿಸಲೇ ಬೇಕಾಗುತ್ತದೆ. ಇಂತಹದೊಂದು ಸ್ಥಿತಿಗೆ ಸುಲಭವಾಗಿ ಹೊಂದಿಕೊಳ್ಳಲಾಗದ ಪೋಷಕರು ವೈವಾಹಿಕ ಸಮಸ್ಯೆಗಳಿಗೆ ಆಹ್ವಾನ ನೀಡುತ್ತಾರೆ. ಮಕ್ಕಳನ್ನು ಬಯಸುವ ಸಂಗಾತಿಗಳು ಹೊಸದೊಂದು ಜೀವದ ನಿರ್ವಹಣೆಗೆ ಸಿದ್ಧರಾಗಿರಬೇಕು. ತಾಯಿಯ ಕರ್ತವ್ಯ, ಹೊರಗಿನ ಕೆಲಸ ಮತ್ತು ಮಗುವಿನ ನಿರ್ವಹಣೆಯು ಸಂಗಾತಿಯಲ್ಲಿ ಬೇಸರ ತರಿಸುವ ಸಾಧ್ಯತೆಗಳಿವೆ. ಇವುಗಳನ್ನು ವ್ಯಕ್ತಪಡಿಸಲಾಗದೆ ದುರಾಲೋಚನೆ, ಪೂರ್ವಗ್ರಹಗಳಿಗೆ ಸಿಕ್ಕಿಕೊಳ್ಳುವುದು ಸಾಮಾನ್ಯ. ಈ ಸಮಯದಲ್ಲಿ ಒಬ್ಬರನ್ನೊಬ್ಬರು ತಪ್ಪಾಗಿ ವಿಶ್ಲೇಷಿಸಿ ಒರಟು, ಹಠಮಾರಿ, ಸ್ವಾರ್ಥಿ ಮುಂತಾದ ನಕಾರಾತ್ಮಕ ವ್ಯಕ್ತಿತ್ವದ ಲಕ್ಷಣಗಳ ಮೂಲಕ ನಿಂದಿಸುತ್ತಾರೆ.

ಸನ್ನಿವೇಶದ ಹೊಸತನವು ತರುವ ಹೊಂದಾಣಿಕೆಯ ಮಿತಿ ಮತ್ತು ಅದರಿಂದ ಹುಟ್ಟಿಕೊಳ್ಳುವ ಮನೋಗೊಂದಲದ ಪರಿಣಾಮವಿದು ಎಂದು ಒಪ್ಪಿಕೊಳ್ಳುವುದಿಲ್ಲ. ಹೀಗಾಗಿ ಪರಸ್ಪರ ಅವಹೇಳನ, ಉದಾಸೀನ ಮತ್ತು ಹೊಡೆದಾಟಗಳು ಸಾಧ್ಯ. ಆದುದರಿಂದ ಹೊಸತನವು ಸ್ಪಷ್ಟವಾಗಿ ಅರ್ಥವಾಗುವತನಕ ಆತುರದ ವಿಮರ್ಶೆಗಳತ್ತ ಮನಸ್ಸನ್ನು ಬಿಡಬಾರದು. ಪರಸ್ಪರ ವಿಚಾರ ವಿನಿಮಯ ಮತ್ತು ಆತಾವಲೋಕನದ ಮೂಲಕ ಮನೋಗೊಂದಲಗಳ ನಿಯಂತ್ರಣ ಮತ್ತು ನಿವಾರಣೆಗೆ ಅವಕಾಶವಿದೆ. ದುಡಿಯುವ ಮಹಿಳೆಯ ಚೊಚ್ಚಲ ತಾಯ್ತನದ ನಿರ್ವಹಣೆಯಲ್ಲಿ ಗಂಡಸಿನ ಸಂಯಮ, ಸಹಕಾರಗಳು ಕುಟುಂಬದ ಮಾನಸಿಕ ಆರೋಗ್ಯವನ್ನು ಕಾಪಾಡಬಲ್ಲದು.
(ಲೇಖಕರು ಮನೋವಿಜ್ಞಾನಿ - 8095609725)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.