ಹೀರೆಕಾಯಿ ಸುಲಭವಾಗಿ ಎಲ್ಲಾ ಸ್ಥಳಗಳಲ್ಲಿ ದೊರೆಯುವ ತರಕಾರಿ. ಇದರ ಪ್ರತಿಯೊಂದು ಭಾಗವನ್ನು ಅಡುಗೆಗೆ ಉಪಯೋಗಿಸಬಹುದು. ಇದು ಉತ್ತಮ ಪೋಷಕಾಂಶಗಳನ್ನು ಒಳಗೊಂಡಿದೆ. ಎಲ್ಲರೂ ಇಷ್ಟಪಡುವ ಹಾಗೂ ಸುಲಭವಾಗಿ ಪಚನವಾಗುವ ಹೀರೆಕಾಯಿಯ ವ್ಯೆವಿಧ್ಯ ಅಡುಗೆಗಳು ಇಲ್ಲಿವೆ.

ಹೀರೆಕಾಯಿ ಬೋಂಡ

ಬೇಕಾಗುವ ಸಾಮಗ್ರಿ: ಒಂದು ಕಪ್ ಕಡಲೆ ಹಿಟ್ಟು, ಹೀರೆಕಾಯಿ ಒಂದು, ಎಣ್ಣೆ, ಉಪ್ಪು, ಅಚ್ಚಖಾರದ ಪುಡಿ, ಓಮ್ ಕಾಳು.

ಮಾಡುವ ವಿಧಾನ: ಮೊದಲಿಗೆ ಹೀರೆಕಾಯಿ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಬಿಲ್ಲೆಗಳಾಗಿ ಮಾಡಿಕೊಳ್ಳಿ. ನಂತರ ಕಡಲೆ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಖಾರದ ಪುಡಿ, ಚಿಟಿಕೆ ಓಮ್ ಕಾಳು ಸೇರಿಸಿ ನೀರಿನಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ಅದಕ್ಕೆ ಸ್ವಲ್ಪ ಕಾದ ಎಣ್ಣೆಯನ್ನು ಸೇರಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟು ಹೆಚ್ಚಿದ ಹೀರೆ ಕಾಯಿಯನ್ನು ಹಿಟ್ಟಿನಲ್ಲಿ ಮುಳುಗಿಸಿ ಕರಿಯಿರಿ. ಬಿಸಿ ಬಿಸಿ ಬೋಂಡ ಚಟ್ನಿಯೊಂದಿಗೆ ಸವಿಯಿರಿ. ಹೆಚ್ಚು ಎಣ್ಣೆ ತಿನ್ನಲು ಇಚ್ಛಿಸದವರು ಹಿಟ್ಟಿನಲ್ಲಿ ಮುಳುಗಿಸಿದ ಹೀರೆಕಾಯಿಯನ್ನು ದೋಸೆ ಕಾವಲಿ ಮೇಲಿರಿಸಿ ಸ್ವಲ್ಪ ಎಣ್ಣೆ ಹಾಕಿ ಎರಡು ನಿಮಿಷ ಮುಚ್ಚಿ ಎರಡೂ ಕಡೆ ಬೇಯಿಸಿ ತಿನ್ನಬಹುದು.

ಹೀರೆಕಾಯಿ ಪಾಯಸ

ಬೇಕಾಗುವ ಸಾಮಗ್ರಿ: ಎರಡು ಉಂಡೆ ಬೆಲ್ಲ, ಅರ್ಧ ಕಪ್ ಸಿಪ್ಪೆ ತೆಗೆದ ಹೀರೆಕಾಯಿಯ ಚಿಕ್ಕ ಚಿಕ್ಕ ಹೋಳು , ಅರ್ಧ ಕಪ್ ತೆಂಗಿನಕಾಯಿ ತುರಿ, ಒಂದು ಚಮಚ ಅಕ್ಕಿ ಮತ್ತು ಗಸಗಸೆ, ಎರಡು ಏಲಕ್ಕಿ, ತುಪ್ಪ, ದ್ರಾಕ್ಷಿ, ಗೋಡಂಬಿ, ಬಾದಾಮಿ.

ಮಾಡುವ ವಿಧಾನ: ಮೊದಲು ಬೆಲ್ಲವನ್ನು ನೀರಿಗೆ ಸೇರಿಸಿ ಕುದಿಸಿ ಶೋಧಿಸಿಕೊಳ್ಳಿ. ನಂತರ ಅಕ್ಕಿ, ಗಸಗಸೆ, ತೆಂಗಿನತುರಿ, ಏಲಕ್ಕಿ ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಕುದಿಯುತ್ತಿರುವ ಬೆಲ್ಲದ ನೀರಿಗೆ ಹೀರೆಕಾಯಿಯ ಹೋಳುಗಳನ್ನು ಸೇರಿಸಿ ಎರಡು ನಿಮಿಷ ಆದ ನಂತರ ರುಬ್ಬಿದ ಮಿಶ್ರಣವನ್ನು ಸೇರಿಸಿ ಕುದಿಸಿ. ನಂತರ ತುಪ್ಪದಲ್ಲಿ ದ್ರಾಕ್ಷಿ, ಗೋಡಂಬಿ, ಬಾದಾಮಿಯನ್ನು ಹುರಿದು ಪಾಯಸಕ್ಕೆ ಸೇರಿಸಿ ಸವಿಯಿರಿ.

ಹೀರೆ ಸಿಪ್ಪೆಯ ಚಟ್ನಿ

ಬೇಕಾಗುವ ಸಾಮಗ್ರಿ: ಹೀರೆಕಾಯಿಯ ಸಿಪ್ಪೆ ಒಂದು ಕಪ್, ತೆಂಗಿನ ತುರಿ ಒಂದು ಕಪ್, ಕರಿಬೇವಿನಸೊಪ್ಪು ಅರ್ಧ ಕಪ್, ಉದ್ದಿನ ಬೇಳೆ ಒಂದು ಚಮಚ, 7 ಅಥವಾ 8 ಒಣಮೆಣಸಿನ ಕಾಯಿ, ಉಪ್ಪು, ಹುಣಸೇ ಹಣ್ಣು ಸ್ವಲ್ಪ, ಒಗ್ಗರಣೆಗೆ ಎಣ್ಣೆ, ಸಾಸಿವೆ ಮತ್ತು ಇಂಗು.

ಮಾಡುವ ವಿಧಾನ: ಮೊದಲಿಗೆ ಹೀರೆಕಾಯಿ ಸಿಪ್ಪೆಯನ್ನು ಒಂದು ಬಾಣಲೆಗೆ ಹಾಕಿ ಸ್ವಲ್ಪ ಎಣ್ಣೆ ಸೇರಿಸಿ 2 ರಿಂದ 3 ನಿಮಿಷ ಹುರಿಯಿರಿ . ನಂತರ ಒಣಮೆಣಸು ಮತ್ತು ಕರಿಬೇವಿನ ಸೊಪ್ಪನ್ನು ಹುರಿಯಿರಿ. ನಂತರ ಒಂದು ಕಪ್ ಉದ್ದಿನ ಬೇಳೆಯನ್ನು ಕೆಂಪಗೆ ಹುರಿಯಿರಿ. ಈ ಎಲ್ಲಾ ಹುರಿದ ವಸ್ತುಗಳ ಜೊತೆ ಉಪ್ಪು, ಹುಣಸೆಹಣ್ಣನ್ನು ಸೇರಿಸಿ ರುಬ್ಬಿಕೊಳ್ಳಿ. ಹೀಗೆ ತಯಾರಾದ ಚಟ್ನಿಗೆ ಸಾಸಿವೆ, ಇಂಗು ಸೇರಿಸಿದ ಒಗ್ಗರಣೆಯನ್ನು ಕೊಡಿ. ಇದು ಅನ್ನ, ಚಪಾತಿ, ದೋಸೆ ಜೊತೆ ಚನ್ನಾಗಿರುತ್ತದೆ. ಸಿಪ್ಪೆಯನ್ನು ಬಿಸಾಡದೇ ಬಳಸಿದರೆ ಹೆಚ್ಚಿನ ಪೋಷಕಾಂಶ ದೊರೆಯುತ್ತದೆ.

ಹೀರೆಕಾಯಿ ತೊವ್ವೆ

ಬೇಕಾಗುವ ಸಾಮಗ್ರಿ: ಸಿಪ್ಪೆ ತೆಗೆದು ಹೆಚ್ಚಿದ ಹೀರೆಕಾಯಿ ಒಂದು ಕಪ್, ಅರ್ಧ ಕಪ್ ಹೆಸರುಬೇಳೆ, ಸಣ್ಣಗೆ ಹೆಚ್ಚಿದ ಟೊಮೆಟೊ ಒಂದು, ಉದ್ದಕ್ಕೆ ಸೀಳಿದ ಮೂರು ಹಸಿಮೆಣಸು, ಕತ್ತರಿಸಿದ ಒಂದು ಇಂಚು ಶುಂಠಿ, ಅರ್ಧ ಲಿಂಬೆಹಣ್ಣು, ಚಿಟಿಕೆ ಅರಿಶಿನ, ಒಗ್ಗರಣೆಗೆ ಎಣ್ಣೆ , ಸಾಸಿವೆ, ಕೊತ್ತೊಂಬರಿ, ಕರಿಬೇವು, ಉಪ್ಪು.

ಮಾಡುವ ವಿಧಾನ: ಹೆಸರುಬೇಳೆ ತೊಳೆದು, ಅರಿಸಿನ, ಒಂದು ಚಮಚ ಎಣ್ಣೆ ಸೇರಿಸಿ ಬೇಯಿಸಿ. ಇದು ಬೆಂದ ನಂತರ ಹೆಚ್ಚಿದ ಹೀರೆಕಾಯಿ ಹೋಳು, ಟೊಮೆಟೊ ಸೇರಿಸಿ ಕುದಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿಕೊಂಡು ಸಾಸಿವೆ, ಹಸಿಮೆಣಸು, ಶುಂಠಿಯ ಚೂರು, ಕರಿಬೇವಿನ ಸೊಪ್ಪು ಹಾಕಿ ಹುರಿಯಿರಿ. ಇದನ್ನು ಕುದಿಸಿಟ್ಟ ಹೆಸರುಬೇಳೆ ಮತ್ತು ಹೀರೆಕಾಯಿ ಮಿಶ್ರಣಕ್ಕೆ ಸೇರಿಸಿ. ನಂತರ ಇದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಲಿಂಬೆರಸವನ್ನು ಸೇರಿಸಿ ಬಡಿಸಿ.

ಹೀರೆಕಾಯಿ ರಾಯತ
ಬೇಕಾಗುವ ಸಾಮಗ್ರಿ: ಒಂದು ಕಪ್ ಸಿಪ್ಪೆ ತೆಗೆದು ತುರಿದ ಹೀರೆಕಾಯಿ, ಅರ್ಧ ಚಮಚ ಉಪ್ಪು, ಒಂದು ಕಪ್ ಮೊಸರು, ಒಗ್ಗರಣೆಗೆ ಒಂದು ಚಮಚ ತುಪ್ಪ, ಸಾಸಿವೆ, ಉದ್ದಿನಬೇಳೆ, ಒಂದು ಒಣ ಮೆಣಸಿನಕಾಯಿ. ಕೊತ್ತಂಬರಿಸೊಪ್ಪು, ಕರಿಬೇವು.

ಮಾಡುವ ವಿಧಾನ: ಒಂದು ಚಿಕ್ಕ ಬಾಣಲೆಗೆ ಮೊಸರು, ತುರಿದ ಹೀರೆಕಾಯಿ, ಉಪ್ಪು, ಕತ್ತರಿಸಿದ ಕೊತ್ತಂಬರಿ ಸೇರಿಸಿಕೊಳ್ಳಿ. ನಂತರ ತುಪ್ಪದ ಒಗ್ಗರಣೆ ಹಾಕಿಕೊಂಡು ಸವಿಯಿರಿ. ಹಸಿ ಹೀರೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಪುಳಿಯೋಗರೆ, ಪಲಾವ್ ಜೊತೆ ಚೆನ್ನಾಗಿರುತ್ತದೆ.

ಹೀರೆಕಾಯಿ ಸಿಹಿ ಪಲ್ಯ
ಬೇಕಾಗುವ ಸಾಮಗ್ರಿ: ಒಂದು ಹೀರೆಕಾಯಿ, ತುಪ್ಪ, ಒಂದುಒಣಮೆಣಸು, ಚಿಟಿಕೆ ಸಕ್ಕರೆ, ಒಂದು ಚಮಚ ಕಾಯಿತುರಿ. ಉಪ್ಪು, ಸಾಸಿವೆ, ಉದ್ದಿನಬೇಳೆ.

ಮಾಡುವ ವಿಧಾನ: ಹೀರೆಕಾಯಿಯ ಸಿಪ್ಪೆ ತೆಗೆದು ಸಣ್ಣ ಹೋಳು ಮಾಡಿಕೊಳ್ಳಿ. ನಂತರ ಒಂದು ಬಾಣಲೆಯಲ್ಲಿ ತುಪ್ಪದ ಒಗ್ಗರಣೆಗೆ ಒಣಮೆಣಸನ್ನು ಸೇರಿಸಿ. ಆನಂತರ ಹೆಚ್ಚಿದ ಹೋಳು, ಉಪ್ಪು, ಸಕ್ಕರೆ ಮತ್ತು ನೀರನ್ನು ಚಿಮುಕಿಸಿ ಬೇಯಿಸಿ ಕಾಯಿತುರಿ ಸೇರಿಸಿ ಸವಿಯಿರಿ. ಇದು ಚಪಾತಿ ಅಥವಾ ಅನ್ನದ ಜೊತೆ ಚೆನ್ನಾಗಿರುತ್ತದೆ. ವಿಶೇಷವಾಗಿ ಮಕ್ಕಳಿಗೆ ಇಷ್ಟವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.