ದಿನ ಭವಿಷ್ಯ | 2023 ಜುಲೈ 26: ಈ ರಾಶಿಯವರು ಬೇರೆಯವರು ಮಾಡಿದ ಉಪಕಾರ ಮರೆಯಬೇಡಿ
Published 25 ಜುಲೈ 2023, 19:30 IST
ಕೆ.ಎಲ್.ವಿದ್ಯಾಶಂಕರ ಸೋಮಯಾಜಿ
ಮೇಷ
ನಿಮ್ಮ ಮೇಲೆ ಪ್ರೀತಿ ತೋರಿಸಲು ಶುರು ಮಾಡಿದ ನೆಂಟರ ಬುದ್ಧಿಯು ಕಪಟವಾದದ್ದು ಎಂದು ನೀವು ಅರಿಯಬೇಕು. ಮಕ್ಕಳ ಮನೆಯಲ್ಲಿ ಪುಣ್ಯದ ಫಲವಾಗಿ ಸುಖ ಸಮೃದ್ಧಿಗಳಿರುತ್ತವೆ.
ವೃಷಭ
ಕೆಲಸದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲಿಕ್ಕಾಗಿ ಹಲವಾರು ತರಬೇತಿಗಳನ್ನು ನೀವೇ ತೆಗೆದುಕೊಳ್ಳಲು ಯೋಚನೆ ನಡೆಸುವಿರಿ. ರಿಯಾಯಿತಿಯ ವಸ್ತ್ರ ಖರೀದಿಯಿಂದಾಗಿ ಹಣವನ್ನು ಉಳಿತಾಯ ಮಾಡುವಿರಿ.
ಮಿಥುನ
ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ ಹೊಂದಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವವರು ಸಣ್ಣ ಕಂಪನಿಗಳಲ್ಲಿ ಉದ್ಯೋಗ ಅನುಭವವನ್ನು ಹೊಂದಿದ ನಂತರ ಅಂಥ ಪ್ರಯತ್ನವನ್ನು ಮಾಡುವುದು ಸೂಕ್ತವಾದದ್ದು.
ಕರ್ಕಾಟಕ
ಮನೆಯಲ್ಲಿ ದೇವರ ಪ್ರಾರ್ಥನೆಯನ್ನು ನಡೆಸಿದ ನಂತರ ದೊರೆತ ಸಂತಾನಭಾಗ್ಯದ ಫಲವಾಗಿ ಹರ್ಷ ತುಂಬಿರುತ್ತದೆ. ಔದ್ಯೋಗಿಕವಾಗಿ ಅನುಭವಸ್ಥರಿಂದ ಕೇಳಿ ಪಡೆದ ಸಲಹೆ ಸೂಚನೆಗಳಿಂದಾಗಿ ಅಭಿವೃದ್ಧಿ ಹೊಂದುವಿರಿ.
ಸಿಂಹ
ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಇರುವ ರೀತಿಯಲ್ಲಿ ವಿವಾಹವು ನಿಗದಿಯಾಗುವ ಸಾಧ್ಯತೆ ಇರುವುದು. ಒಬ್ಬ ವ್ಯಕ್ತಿಯು ನಿಮ್ಮ ಮೇಲೆ ನಂಬಿಕೆ ಇಟ್ಟು ಮಾಡಿದಂಥ ಉಪಕಾರವನ್ನು ಮರೆಯಬೇಡಿ.
ಕನ್ಯಾ
ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಗಳಿಂದಾಗಿ ಹಿಂದುಮುಂದಾಗಬಹುದು. ವಾತಾವರಣದ ಫಲವಾಗಿ ಮಂಡಿ ಹಾಗೂ ಸಂದುಗಳಲ್ಲಿ ನೋವು ಕಾಣಿಸುವುದು. ಆಹಾರದಲ್ಲಿ ಅದನ್ನು ಸರಿಪಡಿಸಿಕೊಳ್ಳಿ.
ತುಲಾ
ಬದಲಾದ ನಿಮ್ಮ ವೇಳಾಪಟ್ಟಿಗೆ ಸರಿಯಾಗುವಂತೆ ನಡೆದುಕೊಳ್ಳುವ ಪತ್ನಿಯ ಮೇಲೆ ಗೌರವ ಹೆಚ್ಚಾಗುವುದು. ಫಲದಾಯಿಕೆಯಾದ ರಾಜರಾಜೇಶ್ವರಿಯನ್ನು ಪ್ರಾರ್ಥಿಸಿ , ಅಭೀಷ್ಟಗಳನ್ನು ನೆರವೇರಿಸಿಕೊಳ್ಳಿ.
ವೃಶ್ಚಿಕ
ಬೆಲೆಬಾಳುವ ವಸ್ತುವಿನ ಖರೀದಿಯಿಂದ ಮನೆಯಲ್ಲಿ ತಾಯಿ ಅಥವಾ ಹಿರಿಯರು ಮುನಿಸಿಕೊಳ್ಳುವರು. ನಿಮ್ಮ ಕೆಲಸಕ್ಕೆ ಅನಿರೀಕ್ಷಿತ ಬದಲಾವಣೆ ಬರಬಹುದು. ಕೃಷಿ ಚಟುವಟಿಕೆಗಳು ವೃಷ್ಟಿಯಿಂದ ಚುರುಕುಗೊಳ್ಳುವವು.
ಧನು
ಕಾರಣಾಂತರದಿಂದ ಸಿಕ್ಕಂಥ ಬಿಡುವಿನ ಸಮಯ ಸದುಪಯೋಗ ಪಡಿಸಿಕೊಳ್ಳುವಿರಿ. ಜೊತೆ ಸ್ಪರ್ಧಿಸುತ್ತಿದ್ದವರಿಗೆ ಎಚ್ಚರ ತಪ್ಪಿದಲ್ಲಿ ಜಯ ಸಿಗುವುದು. ಅಧಿಕ ಕೊಬ್ಬಿನ ಅಂಶದ ಆಹಾರವನ್ನು ತ್ಯಜಿಸಿ.
ಮಕರ
ಪ್ರವಾಸಕ್ಕಾಗಿ ಹೋದ ಪ್ರದೇಶದಲ್ಲಿ ಕೆಲವು ತೊಂದರೆಗಳಾಗುವಂಥ ಸಂದರ್ಭಗಳಿವೆ. ಮನೆಬದಿಯ ಜವಾಬ್ದಾರಿಗಳು ಅಣ್ಣನ ಅನಾರೋಗ್ಯದಿಂದ ಹೆಚ್ಚಾಗುವುದು. ನಟನೆ ಮಾಡುವವರಿಗೆ ಉತ್ತಮ ಅವಕಾಶಗಳಿವೆ.
ಕುಂಭ
ಪ್ರಕೃತಿಸಹಜವಾದ ಅವಿನಾಭಾವ ಸಂಬಂಧಗಳನ್ನು ಕಂಡು ನಿಮ್ಮಲ್ಲಿನ ಸಾಹಿತ್ಯ ಅಥವಾ ಚಿತ್ರಕಲಾ ಪ್ರಜ್ಞೆಯು ಎಚ್ಚೆತ್ತುಕೊಳ್ಳುವುದು. ಪತಿ ಪತ್ನಿಯರಲ್ಲಿ ಸಾಮರಸ್ಯ ಇರುವುದು. ಅಧಿಕಾರಿಗಳಿಂದ ಪ್ರಶಂಸೆ ಮಾತು ಕೇಳುವಿರಿ.
ಮೀನ
ವಾತ ಅಥವಾ ಪಿತ್ತದಿಂದ ಉಂಟಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಪ್ರಾಣಾಯಾಮ ಯೋಗದಂಥ ಮಾರ್ಗ ಉತ್ತಮವಾದುದು. ಬಂಧು ಮಿತ್ರರಲ್ಲಿ ಕಲಹಗಳು ಆಗದಂತೆ ಎಚ್ಚರವಹಿಸಿರಿ.