ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಆರ್ಥಿಕವಾಗಿ ಬಲಿಷ್ಟರಾಗುವಿರಿ.
Published 27 ಮಾರ್ಚ್ 2024, 22:37 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯೋಜನಾ ಬದ್ಧವಾದ ಕೆಲಸವನ್ನು ರೂಪಿಸದಿದ್ದರೆ ಈ ದಿನದ ನಿಮ್ಮ ಶ್ರಮವು ವ್ಯರ್ಥವಾಗಲಿದೆ. ಪ್ರಾಮಾಣಿಕವಾಗಿ ದೇವರು ಮೆಚ್ಚುವ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವುದು ಉತ್ತಮ. ನಿಮ್ಮ ಕಾರ್ಯವೈಖರಿಗೆ ಶ್ಲಾಘನೆ ಸಲ್ಲಲಿದೆ.
ವೃಷಭ
ಮನೆ ಬದಲಾವಣೆಯ ಬಗ್ಗೆ ಮನೆಯವರ ಅಭಿಪ್ರಾಯವನ್ನು ತಿಳಿದುಕೊಳ್ಳುವಿರಿ. ಸರಿಯಾದಂತಹಾ ಪರಿಶೀಲನೆ ಇಲ್ಲದೆ ಯಾವ ಕೆಲಸಗಳಲ್ಲೂ ಹೂಡಿಕೆ ಸಲ್ಲದು. ಪೋಲಿಸ್ ವರಿಷ್ಟರಿಗೆ ವರ್ಗಾವಣೆಯ ಸಂಭವವಿದೆ.
ಮಿಥುನ
ಇತರರ ಭಾವನೆಗಳಿಗೆ ಹೆಚ್ಚಿನ ಆದ್ಯತೆಯನ್ನು ಕೊಡುಲು ಕಲಿಯಬೇಕಾಗುತ್ತದೆ. ಆಫೀಸಿನಲ್ಲಿ ಧನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಇಂದು ಉತ್ತಮ ಸಮಯವಾಗಿದೆ. ಒಂದು ರೀತಿಯ ಸ್ಫರ್ಧಾತ್ಮಕ ವಾತಾವರಣ ಎದುರಿಸಬೇಕಾಗುವುದು.
ಕರ್ಕಾಟಕ
ಆರ್ಥಿಕವಾಗಿ ಬಲಿಷ್ಟರಾಗುವಿರಿ. ಕೃಷಿಯ ಮೇಲೆ ಹೆಚ್ಚು ಬಂಡವಾಳ ಹೂಡುವಿಕೆ ಲಾಭದಾಯಕವಾದದ್ದು. ಎಷ್ಟೆ ಕಷ್ಟಬಂದರೂ ಸಹ ನೀವು ನಿಮ್ಮ ಗುರಿಯನ್ನು ಇಂದು ಸಾಧಿಸಿಯೇ ತೀರುತ್ತೀರಿ.
ಸಿಂಹ
ವಿವಾಹದ ಅಥವಾ ದಾಂಪತ್ಯದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ. ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಭಿನ್ನಾಭಿಪ್ರಾಯ ಮೂಡಿಬಂದು ಅಶಾಂತಿಯ ವಾತಾವರಣ ಕಂಡುಬರಲಿದೆ.
ಕನ್ಯಾ
ಹೂವು-ಹಣ್ಣು, ತರಕಾರಿಗಳ ಮಾರಾಟಗಾರರಿಗೆ ತಾವು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಲಾಭವನ್ನು ವ್ಯಾಪಾರದಲ್ಲಿ ಪಡೆದಕೊಳ್ಳುವುದರಿಂದ ಸಂತೋಷ ಇರುವುದು. ನಿಮ್ಮ ಸಹವರ್ತಿಗಳಲ್ಲಿ ಸಲಹೆ ಸಹಕಾರಗಳನ್ನು ಕೋರುವಿರಿ.
ತುಲಾ
ಶಿಕ್ಷಕ ವೃತ್ತಿಯನ್ನು ನೆಡೆಸಿ ವಿದ್ಯಾದಾನ ಮಾಡುವವರಿಗೆ ಸೂಕ್ತ ಗೌರವಾದರಗಳು ದೊರೆಯಲಿದೆ. ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟ ಇರಲಿದೆ. ವಿವಾಹದ ಪ್ರಯತ್ನಗಳು ಯಶಸ್ಸನ್ನು ಹೊಂದಲಿದೆ.
ವೃಶ್ಚಿಕ
ವೈಯಕ್ತಿಕ ಕಾರ್ಯದೊತ್ತಡದ ನಡುವೆಯೂ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವ ನಿಮಗೆ ರಾಜಕೀಯ ಸೇರಲು ಆಹ್ವಾನ ಬರಲಿದೆ. ಅದರ ಪರಿಣಾಮವಾಗಿ ನಿಮ್ಮ ಜೀವನದ ಮುಂದಿನ ಹಾದಿಯು ಸುಗಮವಾಗಲಿದೆ.
ಧನು
ಮಹಿಳೆಯರಿಗೆ ಆದರ ಮನ್ನಣೆ ಹೆಚ್ಚಲಿದ್ದು ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ. ಬಂಧುಗಳಲ್ಲಿ ವ್ಯವಹರಿಸಿದ ಸಾಲ ಮರು ಪಾವತಿ ಮಾಡುವ ಬಗ್ಗೆ ಹೆಚ್ಚಿನ ಗಮನಕೊಡಿ. ತೀರ್ಥಯಾತ್ರೆಗೆ ಹೋಗುವ ಮನಸ್ಸಾಗುವುದು.
ಮಕರ
ಹೊಸ ಜನರ ಭೇಟಿಯಾಗುವುದು ಹಾಗೂ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ನೀವು ಬಹಳಷ್ಟು ಜಾಣತನ ತೋರಬೇಕಾಗುವುದು. ತಂದೆ ತಾಯಿಯ ಆರೋಗ್ಯದಲ್ಲಿ ಅಧಿಕವಾದ ಗಮನವಿರಲಿ.
ಕುಂಭ
ನಿಮ್ಮ ಆಲೋಚನೆಯನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವಿರಿ. ಛಾಯಾಗ್ರಾಹಕರಿಗೆ ಹೆಚ್ಚಿನ ಅವಕಾಶಗಳು ಸಿಗಲಿವೆ. ಮಾತಿನಲ್ಲಿ ಕಪಟತನ ಇಲ್ಲವಾದ್ದರಿಂದ ನಿಷ್ಠೂರವಾಗಬಹುದು.
ಮೀನ
ಕಟ್ಟಡ ನಿರ್ಮಾಣದ ಕೆಲಸಗಾರರಿಗೆ ವೃತ್ತಿಯಲ್ಲಿ ಬೇಸರ ಹುಟ್ಟಬಹುದು. ತಾಂತ್ರಿಕ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪರಿಶ್ರಮದ ಅಗತ್ಯವಿದೆ. ದೂರ ಸಂಚಾರದಲ್ಲಿ ವೃಥಾ ಖರ್ಚುಗಳಿದ್ದರೂ ಸಂತೋಷ ಇರಲಿದೆ.