ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ
Published 7 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉತ್ತಮ ಸಂಸ್ಕೃತಿಯನ್ನು ಪಡೆದಿರುವ ಕೆಲಸ ಕಾರ್ಯಗಳಲ್ಲಿ ಖಂಡಿತ ಜಯ ಸಿಗುವುದು. ಹೆಂಡತಿ ಮಕ್ಕಳೊಂದಿಗೆ ಕೈಗೊಂಡ ಪ್ರವಾಸ ಸುಖದಾಯಕವಾಗಿರುವುದು. ಕೈ ತಪ್ಪಿದ ಅವಕಾಶಗಳು ಪುನಃ ದೊರೆಯಲಿದೆ.
ವೃಷಭ
ಸಾಂಸಾರಿಕ ಸಮಸ್ಯೆಗಳಿಂದ ವೃತ್ತಿಯಲ್ಲಿ ಬಿಡುವು ಮಾಡಿಕೊಳ್ಳಬೇಕಾದ ಸಂದರ್ಭ ಎದುರಾಗಬಹುದು. ಈ ದಿನದ ಆಗುಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ.  ಸೌಖ್ಯವೆಂದು ಅನಿಸಲಿದೆ.
ಮಿಥುನ
ನಿರುದ್ಯೋಗಿಗಳಿಗೆ ಪ್ರತಿಷ್ಠಿತರ ಪರಿಚಯದಿಂದ ಗೌರವಾನ್ವಿತ ಜಾಗದಲ್ಲಿ ಉದ್ಯೋಗ ಪ್ರಾಪ್ತಿ. ಹವಾ ಬದಲಾವಣೆಗಾಗಿ ಕಿರು ಪ್ರವಾಸದ ಸಾಧ್ಯತೆಗಳಿವೆ. ಲೇವಾದೇವಿ ವ್ಯವಹಾರಗಳಲ್ಲಿ  ಜಾಗ್ರತೆ ವಹಿಸಬೇಕಾಗುವುದು.
ಕರ್ಕಾಟಕ
ಆರ್ಥಿಕತೆಯಲ್ಲಿ ಅಗೌರವವಾಗುವಂಥ ಸನ್ನಿವೇಶ ಎದುರಾಗಿ ಕೊನೆಯ ಕ್ಷಣದಲ್ಲಿ ಹಣಕಾಸಿನ ಹೊಂದಿಕೆಯಾಗುವುದು. ಮಹಿಳೆಯರಿಗೆ ತವರಿನವರ ಆಗಮನವು ಅತೀವ ಸಂತೋಷಕ್ಕೆ ಕಾರಣವಾಗುವುದು.
ಸಿಂಹ
ಕಾರ್ಯಕ್ಷೇತ್ರದಲ್ಲಿ ಎಚ್ಚರ ವಹಿಸದೆ ಅತಿಯಾದ ವಿಶ್ವಾಸದಿಂದ ಮುಂದುವರಿದರೆ ನಿಮ್ಮ ಮೇಲಧಿಕಾರಿಗಳಿಂದ ಮುಖಭಂಗವಾಗಬಹುದು. ಸಾಂಸಾರಿಕವಾಗಿ ಸುಖ ಹಾಗೂ ನೆಮ್ಮದಿಯುಕ್ತ ಕುಟುಂಬ ನಿಮ್ಮದಾಗುವುದು.
ಕನ್ಯಾ
ಬುದ್ಧಿವಂತಿಕೆ ಹಾಗೂ ಯೋಜನೆಗಳು ನಿಮ್ಮ ವ್ಯವಹಾರ ಸುಲಭ ಗೊಳಿಸುತ್ತದೆ. ಸ್ನೇಹಿತರಿಂದ ವ್ಯಾಪಾರದಲ್ಲಿ ಉತ್ತಮ ಫಲಿತಾಂಶ  ಎದುರು ನೋಡಬಹುದು. ಹಿತಶತ್ರುಗಳ ಪರಾಜಯ ನೋಡಿ ಸಂತಸ.
ತುಲಾ
ಇಂದಿನ ದಿನದ ಪರಿಸ್ಥಿತಿಗಳನ್ನು ನೀವು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಮನೆ ದೇವರ ಪೂಜೆಯ ಹರಕೆಯ ಫಲವಾಗಿ ಮಗ/ ಮಗಳಿಗೆ ಉದ್ಯೋಗ ದೊರಕುವುದು.
ವೃಶ್ಚಿಕ
ವಾಣಿಜ್ಯೋದ್ಯಮ ಮಂದಿಗೆ ಇಂದು ಹೆಚ್ಚಿನ ಬಂಡವಾಳ ತೊಡಗಿಸಲು ಉತ್ತಮ ದಿನ.  ಕೆಲಸಮಾಡುವ ಸ್ಥಳದಲ್ಲಿ ಕೆಲವು ಬದಲಾವಣೆ ಮಾಡುವುದು ಉತ್ತಮ. ಪರೀಕ್ಷಾರ್ಥಿಗಳಿಗೆ ಆತ್ಮವಿಶ್ವಾಸ ವೃದ್ಧಿಯಾಗುವುದು.
ಧನು
ಜನಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಬಹಳ ಕೆಲಸದ ಒತ್ತಡ ಇರುವುದು. ಧ್ಯೇಯವನ್ನು ತಲುಪುವ ಹಾದಿಯಲ್ಲಿ ನಿಮ್ಮ ಬಾಲ್ಯ ಸ್ನೇಹಿತರ ಸಹಕಾರ  ದೊರೆಯಲಿದೆ. ಅಧಿಕಾರಿಗಳ ವಿಶ್ವಾಸಗಳಿಸಲು ಪ್ರಯತ್ನಿಸಿ.
ಮಕರ
ಕ್ರಮಿಸಿ ಬಂದ ದಾರಿಯನ್ನು ಅವಲೋಕಿಸಿದಲ್ಲಿ ತಲುಪುಬೇಕೆಂದಿರುವ ಗುರಿ ದೂರವಿಲ್ಲವೆಂಬ ವಿಚಾರದಿಂದ ಉತ್ಸಾಹ ಹೊಂದುವಿರಿ. ನಿಮ್ಮ ಕೆಲಸಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮದ ಅಗತ್ಯವಿದೆ.
ಕುಂಭ
ವ್ಯವಹಾರದ ಮೂಲ ವಿಚಾರವನ್ನು ನಿಮ್ಮ ಉತ್ತರಾಧಿಕಾರಿಗಳಿಗೆ ತಿಳಿಸುವ ಮನಸ್ಸಾಗಲಿದೆ. ಕೃಷಿ ಕಾರ್ಯವು ವಿಳಂಬವಾಗದಂತೆ ಕೃಷಿಕರು ಗಮನವಹಿಸಿ.  ಭೋಜನ ಆರೋಗ್ಯಕ್ಕೆ ಸ್ವಲ್ಪ ತೊಂದರೆ ತರಬಹುದು.
ಮೀನ
ವಾಹನ ಮಾರಾಟಗಾರರಿಗೆ,ರಿಪೇರಿ ಮಾಡುವವರಿಗೆ ಉದ್ಯೋಗದಲ್ಲಿ ಬಿಡುವಿಲ್ಲ. ನಿಮ್ಮ ವೃತ್ತಿಯಲ್ಲಿ ಸಾಕಷ್ಟು ಸುಸಂದರ್ಭಗಳು ಎದುರಾ ಗಬಹುದು. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಿಂದ ಲಾಭ ಸಿಗುವುದು.