ಶನಿವಾರ, 5 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸವಾಲನ್ನು ಎದುರಿಸುವ ಶಕ್ತಿ ಹೆಚ್ಚಲಿದೆ
Published 12 ಜುಲೈ 2024, 0:38 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಜೀವನದ ಪ್ರಮುಖ ಘಟ್ಟವೊಂದರಲ್ಲಿ ಅನಾರೋಗ್ಯದಿಂದಾಗಿ ಸರಿಯಾದ ರೀತಿಯಲ್ಲಿ ಕ್ಷಣವನ್ನು ಅನುಭವಿಸಲು ಆಗುವುದಿಲ್ಲ. ಹರಿತವಾದ ಮಾತುಗಳು ತಾಯಿಯ ಮನಸ್ಸನ್ನು ನೋಯಿಸುವ ಸಾಧ್ಯತೆ ಇದೆ.
ವೃಷಭ
ಅತ್ಯಂತ ಆತ್ಮೀಯರಿಂದಲೇ ಭೂಮಿಯ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಮಗಳಿಂದ ಶುಭ ಸುದ್ದಿ ತಿಳಿಯುವಿರಿ. ಇಲ್ಲ ಸಲ್ಲದ ವಿಷಯಗಳಲ್ಲಿ ತಲೆ ಹಾಕಲು ಹೋಗದಿರುವುದು ಕ್ಷೇಮ
ಮಿಥುನ
ಕ್ರೂರ ಅಧಿಕಾರಿಗಳ ವಿರುದ್ಧ ತಿರುಗಿಬೀಳುವಲ್ಲಿ ಪ್ರಮುಖ ಪಾತ್ರ ವಹಿಸುವಿರಿ. ಹೊಸ ಮನೆ ಕೆಲಸಗಳ ಜವಾಬ್ದಾರಿ ನಿಮ್ಮದಾಗಿ ಮಾಡಿಕೊಳ್ಳುತ್ತಿರುವ ಕಾರಣ ಬಿಡುವಿಲ್ಲದ ದುಡಿಮೆಯ ದಿನಗಳು ನಿಮ್ಮದಾಗಲಿದೆ.
ಕರ್ಕಾಟಕ
ಭಾಗ್ಯವಂತರಾದ ನಿಮಗೆ ಹೊಸ ಯೋಜನೆಯು ಸುಲಭವೆನಿಸಲಿದೆ. ಹಲವು ದಿನಗಳ ಬಳಿಕ ಕುಟುಂಬದ ಹಿರಿಯ ವ್ಯಕ್ತಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಳ್ಳುವಿರಿ.
ಸಿಂಹ
ಬದಲಾವಣೆಯ ಅಲೆಯನ್ನು ನಿರೀಕ್ಷಿಸುತ್ತಿರುವ ನೀವು ಉತ್ತಮ ರೀತಿ ನೀತಿಗಳನ್ನು ಅಳವಡಿಸಿಕೊಳ್ಳುವಿರಿ. ತಮ್ಮನ ಮಕ್ಕಳ ಮದುವೆಯಲ್ಲಿ ಅತ್ಯಂತ ಹೆಚ್ಚಿನ ಓಡಾಟ ನಡೆಸುವಿರಿ.
ಕನ್ಯಾ
ಮನೆಯ ಕಟ್ಟಡದ ದುರಸ್ತಿ ಕಾರ್ಯಗಳು ಅನಿವಾರ್ಯ. ಔಷಧ ಮಾರಾಟಗಳಲ್ಲಿ ಸಂಪಾದನೆ ಹೆಚ್ಚಲಿದೆ. ಕೆಲವು ವ್ಯಕ್ತಿಗಳ ದ್ವೇಷದ ಕೃತ್ಯಗಳ ಫಲವಾಗಿ ನೀವು ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ.
ತುಲಾ
ಹಿರಿಯರಲ್ಲಿ ನಿಮ್ಮ ತಪ್ಪಿಲ್ಲದಿದ್ದರೂ ವಯಸ್ಸಿಗೆ ಬೆಲೆ ಕೊಟ್ಟು ಕ್ಷಮೆಯನ್ನು ಕೇಳಿ. ಕಾರ್ಯ ಕಲಾಪಗಳ ಒತ್ತಡದಲ್ಲಿ ಸ್ನೇಹಿತರ ವರ್ಗಕ್ಕೆ ಸಮಯ ನೀಡಬೇಕಾಗುತ್ತದೆ. ಸಾಧು ಸಂತರ ದರ್ಶನ ಮಾಡುವಿರಿ.
ವೃಶ್ಚಿಕ
ಈ ಹಿಂದೆ ನಡೆದ ದುರ್ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುವುದು ಸೂಕ್ತ. ಸಂಗಾತಿಯ ಜತೆ ನೀವಂದುಕೊಂಡ ಖುಷಿಯ ಸಮಯ ಕಳೆಯುವ ಅವಕಾಶ ದೊರೆಯುವುದು. ಸಂತೋಷ ನೆಮ್ಮದಿ ಇರಲಿದೆ.
ಧನು
ದೇವರ ಆಭರಣ ತಯಾರಿಕೆ ಅಥವಾ ದೇವಾಲಯದ ಕೆಲಸದ ಗುತ್ತಿಗೆದಾರರಿಗೆ ಹೊಸ ಗುತ್ತಿಗೆ ಸಿಗುವ ಸಂಭವಗಳಿವೆ. ಸೋದರ ಮಾವನ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
ಮಕರ
ಸವಾಲನ್ನು ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಅಭಿವೃದ್ಧಿ ಆಗುವುದು. ಈ ದಿನದ ಕಾರ್ಯಗಳನ್ನು ಮೊದಲೇ ನಿಶ್ಚಯಿಸಿಕೊಂಡು ಕ್ರಮ ಪ್ರಕಾರವಾಗಿ ಮಾಡುವುದು ಉತ್ತಮ. ನಂಜು ಉಂಟಾಗುತ್ತದೆ.
ಕುಂಭ
ಸಮಯವನ್ನು ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನ ಗತಿಯಲ್ಲಿ ಸಾಗಲಿವೆ. ಮಗಳಿಗೆ ಹೆಸರಿಡುವ ವಿಷಯವಾಗಿ ಹಲವಾರು ಚರ್ಚೆ ಆಗುತ್ತದೆ. ಉದ್ಯೋಗದಿಂದ ಒಳ್ಳೆಯ ಅನುಭವ ಸಿಗಲಿದೆ.
ಮೀನ
ತಂದೆ, ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ಮಿತ್ರವರ್ಗದಿಂದ ದುಃಖದ ಸಮಾಚಾರ ಕೇಳಬೇಕಾಗಬಹುದು. ದೀರ್ಘ ಪ್ರಯಾಣ ಮುಗಿಸಿ ಮರಳಲಿದ್ದೀರಿ.
ADVERTISEMENT
ADVERTISEMENT