ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇದೆ
Published 23 ಮೇ 2025, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇತರರನ್ನು ಮಾತಿನ ಮೂಲಕ ಗೆಲ್ಲುವ ಸಾಮರ್ಥ್ಯವಿದೆ. ನಿಮ್ಮ ಮಾತು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ಇರುವ ಬಗ್ಗೆ ಗಮನ ನೀಡಿ. ತಾಳ್ಮೆ ವಹಿಸಿ. ಶಿರೋವೇದನೆಯಿಂದ ಬಳಲುವ ಸಾಧ್ಯತೆ ಇರುವುದು.
ವೃಷಭ
ಅವಸರ ಮತ್ತು ಉದ್ವೇಗ ಇವೆರಡೂ ತಲೆ ತಗ್ಗಿಸುವಂತೆ ಮಾಡಬಹುದು. ಕೆಲಸದ ಬಗ್ಗೆ ವಿಮರ್ಶಿಸಿ ನಂತರದಲ್ಲಿ ಕಾರ್ಯರೂಪಕ್ಕೆ ತನ್ನಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಾಣಲಿದ್ದಾರೆ.
ಮಿಥುನ
ತಪ್ಪುಗಳನ್ನು ಪುನರಾವರ್ತನೆಯಾಗದಂತೆ ಗಮನಿಸಿದರೆ ಯಶಸ್ಸಿನ ದಾರಿ ಕಾಣಬಹುದು. ಸಿದ್ಧಿವಿನಾಯಕನ ಆರಾಧನೆಯು, ನಾಮಸ್ಮರಣೆಯು ಶುಭವನ್ನು ಉಂಟುಮಾಡುತ್ತದೆ.
ಕರ್ಕಾಟಕ
ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರಾದರೂ ಆತಂಕಪಡಬೇಕಾದ ಅವಶ್ಯಕತೆ ಇಲ್ಲ. ಮನೆಮದ್ದುಗಳಿಂದ ಸರಿಹೋಗುತ್ತದೆ. ಸಂಗೀತಗಾರರಿಗೆ ಮತ್ತು ನರ್ತಕರಿಗೆ ಅವಿಸ್ಮರಣೀಯ ದಿನ.
ಸಿಂಹ
ಸುಂದರ ವಸ್ತು, ಚಿತ್ರ ಅಥವಾ ಸಮಾಜದ ಅತಿ ಗಣ್ಯವ್ಯಕ್ತಿಗಳನ್ನು ನೋಡುವ, ಮಾತನಾಡುವ ಭಾಗ್ಯ ಸಿಗುವುದು. ಲೇಖನ ಬರೆಯುವುದರಿಂದ ಜನ ಸಂಪರ್ಕ ಅಭಿವೃದ್ಧಿಯಾಗಲಿದೆ. ಅನುಯಾಯಿಗಳು ಹುಟ್ಟಿಕೊಳ್ಳುವರು.
ಕನ್ಯಾ
ಸೂಕ್ತ ಸಮಯದಲ್ಲಿ ಸರಿಯಾದ ಕೆಲಸ ಮಾಡುವುದರಿಂದ ಅದೃಷ್ಟ ಖುಲಾಯಿಸಲಿದೆ. ವೃತ್ತಿಯಲ್ಲಿ ಉನ್ನತ ಅಧಿಕಾರಿಗಳಿಗೆ ಸಲಹೆ ನೀಡುವ ಬಗ್ಗೆ ಹಿಂಜರಿಕೆ ಬೇಡ. ಆಲೋಚನೆ ಮಾಡಿ.
ತುಲಾ
ಅಧಿಕಾರದಲ್ಲಿ ಸ್ಥಾನಮಾನ ಪಡೆಯುವ ಬಯಕೆಯಿಂದಾಗಿ ದೇವರ ಸೇವೆಯಂಥ ಧಾರ್ಮಿಕ ಕಾರ್ಯಗಳನ್ನು ನಡೆಸುವುದು ಒಳ್ಳೆಯದು. ದಾಂಪತ್ಯದಲ್ಲಿ ಉತ್ತಮ ಅನ್ಯೋನ್ಯತೆ ವೃದ್ಧಿಯಾಗಲಿದೆ.
ವೃಶ್ಚಿಕ
ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಸ್ವಲ್ಪಮಟ್ಟಿನ ಆಲಸ್ಯ ಉಂಟಾಗಲಿದೆ. ಕಾರ್ಯದ ವೇಗ ಕಡಿಮೆಯಾಗುವುದು. ಹೊಸ ಹೂಡಿಕೆಯಲ್ಲಿ ಎಚ್ಚರ ಇಲ್ಲದಿದ್ದರೆ ನಷ್ಟವಾಗುವುದು.
ಧನು
ಹವ್ಯಾಸಿ ಛಾಯಾಗ್ರಾಹಕರಿಗೆ ಪ್ರಶಸ್ತಿ ಅಥವಾ ಸಮಾಜದಲ್ಲಿ ಹೆಸರು ಲಭಿಸಲಿದೆ. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯವನ್ನು ಹೊಂದುವಿರಿ. ಸಂಧಾನದಿಂದ ಸಮಸ್ಯೆ ಬಗೆಹರಿಯುತ್ತದೆ.
ಮಕರ
ಪಾಲಕರಾಗುವ ಸುದ್ದಿ ತಿಳಿದು ಅತೀವ ಸಂತಸ. ತೈಲಗಳ ಲೇಪನ ಮಾಡಿಕೊಳ್ಳುವುದರಿಂದ ಕಾಲುನೋವು ನಿವಾರಣೆ. ವಿವಾಹದ ವಿಚಾರದಲ್ಲಿ ಅಂತಿಮವಾಗಿ ತೀರ್ಮಾನಕ್ಕೆ ಬರುವುದು ಉತ್ತಮವೆಂದು ಕಾಣುತ್ತದೆ.
ಕುಂಭ
ವೃತ್ತಿಯಲ್ಲಿ ಬದಲಾವಣೆ ಅನಿವಾರ್ಯವೆನಿಸಲಿದೆ. ಅದಕ್ಕೆ ಸ್ನೇಹಿತರೊಂದಿಗಿನ ಮಾತುಕತೆ ಉಪಯುಕ್ತವಾಗುವುದು. ಮಗನಿಗೆ ಓದಿನಲ್ಲಿ ಸಹಾಯ ಮಾಡುವಿರಿ. ಬಿಳಿ ಬಣ್ಣದ ಉಡುಗೆ ಶುಭ ತರುವುದು.
ಮೀನ
ಹಿಂದಿನ ದಿನಗಳಿಗೆ ಹೋಲಿಸಿದರೆ ಸಂಸಾರ ನಿರ್ವಹಣೆ ಸುಲಭವೆನಿಸುವುದು. ಕ್ರೀಡಾಪಟುಗಳ ಅಭ್ಯಾಸದ ಕೊರತೆಯು ವೈಫಲ್ಯಕ್ಕೆ ಕಾರಣವಾಗುತ್ತದೆ. ಎಲ್ಲಾ ವಿಧದ ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕಿ.
ADVERTISEMENT
ADVERTISEMENT