ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವ್ಯವಹಾರದಲ್ಲಿ ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ
Published 23 ನವೆಂಬರ್ 2023, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಕಾರ್ಯಗಳಿಗೆ ಅಡ್ಡಿ ಉಂಟಾದಲ್ಲಿ ವಿಮರ್ಶಿಸಿ ಮುಂದುವರೆಯುವುದು ಉತ್ತಮ. ಮಕ್ಕಳ ಸರ್ವತೋಮುಖ ಪ್ರಗತಿಯಿಂದಾಗಿ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗುವುದು. ಹಣದ ಬಗ್ಗೆ ಚಿಂತಿಸುವ ಅಗತ್ಯವಿಲ್ಲ.
ವೃಷಭ
ಹಿರಿಯರ ಅನುಗ್ರಹದಿಂದ ಇಷ್ಟಸಿದ್ಧಿಯಾಗಿ ಕೃಷಿ ಉತ್ಪನ್ನಗಳ ಅಥವಾ ಪದಾರ್ಥಗಳ ಕ್ರಯ-ವಿಕ್ರಯದಲ್ಲಿ ಲಾಭ ತರಲಿದೆ. ಸ್ವತ್ತಿನ ವಿಷಯವಾಗಿ ಕಾನೂನು ಸಲಹೆ ಪಡೆದುಕೊಳ್ಳುವ ಬಗ್ಗೆ ಗಮನಹರಿಸಿ.
ಮಿಥುನ
ನಿಮ್ಮಿಂದ ಸಲಹೆ ಸಹಕಾರವನ್ನು ಪಡೆದು ನಿಮ್ಮನ್ನೇ ಮೂರ್ಖರನ್ನಾಗಿ ಮಾಡುವವರು ಎದುರಾಗುವರು. ಕಚೇರಿಯಲ್ಲಿ ಸಹದ್ಯೋಗಿಗಳ ಸಹಕಾರ ಪಡೆಯಬೇಕಾಗುವುದು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವುದು.
ಕರ್ಕಾಟಕ
ಗುರುಗಳ ಉಪದೇಶ ನಿಮ್ಮ ಬದುಕಿಗೆ ದಾರಿದೀಪವಾಗುವ ಲಕ್ಷಣಗಳಿರುವುದು. ವೃತ್ತಿಯಲ್ಲಿ ತಪ್ಪುಗಳು ಪುನರಾವರ್ತನೆ ಆಗದಂತೆ ಎಚ್ಚರವಹಿಸುವಿರಿ. ವ್ಯಾಪಾರಿಗಳಿಗೆ ಆರ್ಥಿಕ ಬೆಳವಣಿಗೆ ಅಧಿಕವಾಗುವುದು.
ಸಿಂಹ
ಮನೆಯ ನಿರ್ಮಾಣ ಕೆಲಸಗಳು ಪೂರ್ಣಗೊಂಡು ನೆಮ್ಮದಿ ಪ್ರಾಪ್ತಿಯಾಗುವುದು. ಶ್ರೀ ದಕ್ಷಿಣಾಮೂರ್ತಿಯನ್ನು ಪೂಜಿಸುವುದರಿಂದ ನಿಮ್ಮ ಯೋಜನೆಗಳು ನಿರಾತಂಕವಾಗಿ ಮುಂದುವರೆಯಲಿದೆ.
ಕನ್ಯಾ
ವ್ಯಾಪಾರ, ವ್ಯವಹಾರಗಳಲ್ಲಿ ತೀವ್ರವಾದ ಪೈಪೋಟಿ ಎದುರಾಗಿ ಆತಂಕಕ್ಕೆ ಕಾರಣವಾಗಲಿದೆ ಹಾಗೂ ನಷ್ಟ ಸಂಭವಿಸುವುದು. ಸಣ್ಣ ಪುಟ್ಟ ತೊಡಕುಗಳು ಕಾಣಿಸಿಕೊಂಡರೂ ಕೆಲಸಗಳು ಅಬಾಧಿತವಾಗಿ ಸಾಗುವುದು.
ತುಲಾ
ಮನೆಯ ಸದಸ್ಯರಲ್ಲಿದ್ದ ಭಿನ್ನಾಭಿಪ್ರಾಯ, ವೈಮನಸ್ಸಿಗೆ ಕಾರಣ ಮತ್ತು ಪರಿಹಾರವನ್ನು ಕಂಡುಕೊಳ್ಳುವಿರಿ. ನಿಮ್ಮ ವೃತ್ತಿಯಲ್ಲಿ ಸಾಕಷ್ಟು ಪೈಪೋಟಿಗಳನ್ನು ಸಹೋದ್ಯೋಗಿಗಳಿಂದ ನೀವು ಎದುರಿಸಬೇಕಾಗಬಹುದು.
ವೃಶ್ಚಿಕ
ಸಜ್ಜನರ ಸಹವಾಸ ಮಾಡುವ ನಿಮ್ಮ ಹಂಬಲಕ್ಕೆ ಪೂರಕವಾದ ವಾತಾವರಣ ಸಿಗಲಿದೆ. ಇತರರಿಗೆ ಸಹಾಯ ಮಾಡುವಲ್ಲಿ ಒಂದು ಬಗೆಯ ಆನಂದವನ್ನು ಅನುಭವಿಸುವಿರಿ. ಹಳದಿ ಬಣ್ಣ ಅದೃಷ್ಟ ತರುವುದು.
ಧನು
ಶುಭ ಕಾರ್ಯಗಳಿಗೆ ಉತ್ತಮ ಕಾಲವಾದರೂ ಬರುವ ಅವಕಾಶಗಳಿಂದ ವಂಚಿತರಾಗದಿರಿ. ಸಾರಿಗೆ ಸಂಸ್ಥೆ ಉದ್ಯೋಗಿಗಳಿಗೆ ಹೆಚ್ಚಿನ ಅನುಕೂಲ ಉಂಟಾಗಲಿದೆ. ಹಿಡಿದ ಕೆಲಸ ಪೂರ್ಣಗೊಳಿಸುವ ಬಗ್ಗೆ ಹೆಚ್ಚಿನ ಪ್ರಯತ್ನವಿರಲಿ.
ಮಕರ
ಆಡುವ ಮಾತಿನ ಬಗ್ಗೆ ನಿಗವಿರಲಿ, ನಿಮ್ಮ ಮಾತನ್ನು ನೀವೇ ಸಾಧಿಸಿ ತೋರಿಸಬೇಕಾಗುತ್ತದೆ. ಇಂದಿನ ನಿಮ್ಮ ನಿರ್ಧಾರದಲ್ಲಿ ತೊಡಕುಗಳೇ ಉಂಟಾ ಗುವುದು. ನಿಮ್ಮ ಬಗೆಗಿನ ವದಂತಿಗಳು ತಾನಾಗಿಯೇ ಮುಚ್ಚಿ ಹೋಗುವುದು.
ಕುಂಭ
ಯಂತ್ರೋಪಕರಣ ಅಥವಾ ಕಾರ್ಖಾನೆ ಕೆಲಸಗಳಲ್ಲಿರುವವರಿಗೆ ಹೆಚ್ಚಿನ ಧನ ಲಾಭವಿರುವುದು. ನೀವು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೆಣಗಬೇಕಾಗಬಹುದು. ವ್ಯವಹಾರದಲ್ಲಿ ಸ್ವಲ್ಪ ಜಾಣತನವನ್ನು ಪ್ರದರ್ಶಿಸಿ.
ಮೀನ
ನಿಮ್ಮ ಹೆಚ್ಚಿನ ಪರಿಶ್ರಮವಿದ್ದರೂ ಅಲ್ಪ ಕಾರ್ಯಸಿದ್ಧಿಯಾಗುವುದು ದುಃಖಕ್ಕೆ ಮೂಲ ಕಾರಣ. ಇನ್ನೊಬ್ಬರಿಗೆ ತಿಳಿವಳಿಕೆ ಹೇಳುವ ಸಮಯದಲ್ಲಿ ಜಾಗೃತರಾಗಿರಿ. ಒಪ್ಪಂದ ವ್ಯವಹಾರಗಳಿಂದ ವರಮಾನ ಹೆಚ್ಚಲಿದೆ.