ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಮಾಡಬೇಕಾದ ಕೆಲಸಗಳನ್ನು ತುರಾತುರಿಯಿಂದ ಮುಗಿಸಿ
Published 2 ಮೇ 2024, 0:44 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಎಂದೋ ಹುಡುಗಾಟಿಕೆಯಲ್ಲಿ ಮಾಡಿಕೊಂಡ ಕೆಲವು ಕಾರ್ಯಗಳು ಬಹುವಾಗಿ ಕಾಡುವ ಸಾಧ್ಯತೆ ಇದೆ. ತಿಳಿವಳಿಕೆ ಇಲ್ಲದವರಂತೆ ವರ್ತಿಸಿ ಮೂರ್ಖರೆನ್ನಿಸಬೇಡಿ. ಆದಾಯ ಎಂದಿನಂತೆ ಇರುತ್ತದೆ.
ವೃಷಭ
ಅಗತ್ಯಕ್ಕಿಂತ ಹೆಚ್ಚು ಅಲಂಕಾರವನ್ನು ಮಾಡಿಕೊಂಡು ಬರುವ ನಿಮ್ಮನ್ನು ಕಂಡು ಆಡಿಕೊಳ್ಳುವ ಜನರಿರುವರು, ಗಮನವಿರಲಿ. ಮುಕ್ತ ಮಾತುಕತೆಯಿಂದ ಕಾರ್ಮಿಕರ ಸಮಸ್ಯೆಗಳನ್ನು ಪೂರ್ಣಗೊಳಿಸಿ.
ಮಿಥುನ
ಸಭೆಯಲ್ಲಿ ಮಾತನಾಡುವಾಗ ದಾಕ್ಷಿಣ್ಯ ಮಾಡಿಕೊಳ್ಳದೆ ಬುದ್ಧಿವಂತಿಕೆಯಿಂದ ಮತ್ತು ಮನಸ್ಸಿನ ಆಲೋಚನೆಯಂತೆ ಮಾತನಾಡಿದಲ್ಲಿ ಬೇಕಾದ ಸೌಲಭ್ಯಗಳು ದೊರೆಯಲಿವೆ. ಪ್ರಯಾಣ ಮಾಡಬೇಕಾಗಬಹುದು.
ಕರ್ಕಾಟಕ
ಸಂಗ್ರಹಿಸಿದ ಸಂತ್ರಸ್ತರ ನಿಧಿಯು ಉತ್ತಮವಾಗಿ ವಿನಿಯೋಗವಾಗುವುದು ಹಾಗೂ ಅಭಿನಂದನಾರ್ಹವಾಗಿರುವುದು. ಮನೆಗೆ ಬರುವ ಅತಿಥಿಗಳು ಸತ್ಕಾರದಿಂದ ಸಂತೃಪ್ತಿ ಹೊಂದುವರು.
ಸಿಂಹ
ವಿದ್ಯಾರ್ಥಿಗಳು ಶಿಕ್ಷಕರ ಒತ್ತಾಯಕ್ಕಾಗಿ ಕಾಟಾಚಾರಕ್ಕೆ ಶಾಲಾ ಕಾಲೇಜುಗಳ ಕೆಲಸಗಳನ್ನು ಮಾಡುವುದು ಬೇಡ. ಸಿಹಿ ಖಾದ್ಯ ತಯಾರಕರಿಗೆ ಬೇಡಿಕೆಗಳು ಹೆಚ್ಚಲಿವೆ. ಗೃಹಾಲಂಕಾರ ವಸ್ತುಗಳ ಖರೀದಿಗೆ ಉತ್ತಮ ದಿನ.
ಕನ್ಯಾ
ಸ್ನೇಹಿತನ ಮಾತನ್ನು ಅಗತ್ಯಕ್ಕಿಂತ ಹೆಚ್ಚಾಗಿ ಕೇಳುವುದರಿಂದ ಆಜ್ಞಾನುವರ್ತಿಯನ್ನಾಗಿಸಬಹುದು. ಹೊಸ ದಾರಿಯನ್ನು ಹಿಡಿಯಲು ಯೋಚಿಸುತ್ತಿರುವ ವಿದ್ಯಾರ್ಥಿಗಳಿಗೆ ಗ್ರಹಗತಿಯ ಬೆಂಬಲ ಇದೆ.
ತುಲಾ
ಮಾಡಬೇಕಾದ ಕೆಲಸಗಳನ್ನು ತುರಾತುರಿಯಿಂದ ಮುಗಿಸಿದಲ್ಲಿ ಬೇಕಾದ ಫಲಿತಾಂಶ ಸಿಗದಿರಬಹುದು. ಸಾವಕಾಶವಾಗಿ ವ್ಯವಹರಿಸಿ. ಕರಿದ ತಿಂಡಿಗಳು ಹಾಗೂ ನಂಜಿನ ಪದಾರ್ಥಗಳಿಂದ ದೂರವಿರಿ.
ವೃಶ್ಚಿಕ
ವೃತ್ತಿಗೆ ಸಂಬಂಧಪಟ್ಟಂತೆ ಎಷ್ಟೇ ಎಚ್ಚರವಹಿಸಿ ವ್ಯಕ್ತಿಗಳನ್ನು ನಂಬಿದರೂ ಕಡಿಮೆಯಾಗುತ್ತದೆ. ಮಾತೃ ಸಂಬಂಧಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತನ ಮೊರೆ ಹೋಗಬೇಕಾಗುವುದು.
ಧನು
ಹರಡುತ್ತಿರುವ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಇಂದು ನಡೆಯುವ ಘಟನೆಯಿಂದ ನಿಮ್ಮ ಸಂಗಾತಿಗೆ ಸಂತೋಷವಾಗುವುದು. ಕೋಪವನ್ನು ನಿಯಂತ್ರಣ ಮಾಡಿಕೊಳ್ಳಿ.
ಮಕರ
ಸಾಧನೆಯ ಪರ್ವತದ ಶೃಂಗದಲ್ಲಿರುವವರು ಅನಿವಾರ್ಯ ಕಾರಣಗಳಿಂದ ಅಭಿನಂದನಾ ಕಾರ್ಯಕ್ರಮಗಳನ್ನು ತಪ್ಪಿಸಿಕೊಳ್ಳುತ್ತೀರಿ. ನಿಮ್ಮ ನಿಯತ್ತಿನ ಮುಂದೆ ಯಾರ ಕುತಂತ್ರಗಳು ನಡೆಯುವುದಿಲ್ಲ.
ಕುಂಭ
ಕುಟುಂಬದಲ್ಲಿ ನಡೆಯುವ ಶುಭಕಾರ್ಯಗಳು ಸಂಭ್ರಮವನ್ನು ಉಂಟುಮಾಡುತ್ತದೆ. ಬ್ಯಾಂಕ್ ಸಂಬಂಧಿ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗದೆಯೇ ಇರಬಹುದು. ಎಚ್ಚರವಿರಲಿ.
ಮೀನ
ಮಾತು ಬಲ್ಲವನಿಗೆ ಜಗಳವಿಲ್ಲ ಎಂಬಂತೆ ನಿಮ್ಮ ಮಾತಿನಿಂದ ದೊಡ್ಡ ಪ್ರಮಾಣದ ಜಗಳ ನಿಂತು ಹೋಗುತ್ತದೆ. ನಿಷ್ಠೆಯಿಂದ ಮಾಡಿದ ಕೆಲಸಕ್ಕೆ ಆತ್ಮತೃಪ್ತಿ ದೊರೆಯುತ್ತದೆ. ಮಧ್ಯವರ್ತಿಗಳ ಮಾತಿಗೆ ಮರುಳಾಗದಿರಿ.