ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅಧಿಕ ಲಾಭ
Published 29 ಸೆಪ್ಟೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಮರ್ಥ್ಯಕ್ಕೆ ಮತ್ತು ಕೆಲಸಕ್ಕೆ ಗ್ರಹಣ ಆವರಿಸಿ ಯೋಜನಾಬದ್ಧವಾಗಿ ಕೆಲಸ ನಡೆಯುವುದು ಕಷ್ಟಕರ ವಿಷಯ. ಹೈನುಗಾರಿಕೆಯನ್ನು ಉಪವೃತ್ತಿಯಾಗಿ ಮಾಡಿಕೊಳ್ಳಬಹುದು. ಮಾಡುವ ಕೆಲಸದಲ್ಲಿ ಶ್ರದ್ಧೆ ಇರಲಿ.
ವೃಷಭ
ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳಿಗೆ ಜನರು ಕಾಯುವುದನ್ನು ನೋಡಿ ಹೆಮ್ಮೆಪಟ್ಟುಕೊಳ್ಳುವಿರಿ. ಸಮಸ್ಯೆಗಳ ನಡುವೆ  ಕಾರ್ಯಸಾಧನೆ ಮಾಡಿದ ಹೆಮ್ಮೆ ನಿಮ್ಮದಾಗಲಿದೆ. ಕಾರ್ಯಸಿದ್ಧಿಗೆ ಗಣೇಶನನ್ನು ಪೂಜಿಸಿ.
ಮಿಥುನ
ಕಮಿಷನ್ ಏಜೆಂಟರಿಗೆ ಮತ್ತು ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಅಧಿಕ ಲಾಭ ಸಿಗುವುದು. ಜೀವನ ಸಂಗಾತಿಯ ಆಯ್ಕೆ ವಿಚಾರದಲ್ಲಿ ಹಿರಿಯರ ಮಾತಿನತ್ತ ಗಮನ ಕೊಡಿ. ಯಂತ್ರಗಳ ಬಳಕೆಯಲ್ಲಿ ಅಪಾಯವಾಗಬಹುದು.
ಕರ್ಕಾಟಕ
ಸಾಮಾಜಿಕವಾಗಿ ಗೌರವ ಬೆಳೆಯುವುದರ ಫಲವಾಗಿ ಶತ್ರುಬಾಧೆ ಅಥವಾ ಅಸೂಯೆ ವೃದ್ಧಿಯಾಗಲಿದೆ. ಗುತ್ತಿಗೆ ಆಧಾರಿತ ಉತ್ತಮ ಉದ್ಯೋಗ ದೊರೆತು ಲಾಭ ಸಿಗಲಿದೆ. ಷೇರು ಪೇಟೆಯಿಂದ ಲಾಭ ಗಳಿಸುವಿರಿ.
ಸಿಂಹ
ಜೀವನದಲ್ಲಿ ಹಳೆಯ ಘಟನೆಗಳಿಂದ ಕಲಿತ ಪಾಠವು ತಿಳಿವಳಿಕೆಗೆ ಕಾರಣವಾಗುವುದು. ವಾತಾವರಣದ ಬದಲಾವಣೆಯು ಆರೋಗ್ಯದ ಮೇಲೆ ಪ್ರಭಾವ ಬೀರಲಿದೆ. ನೀಲಿ ಬಣ್ಣ ಶುಭ ತರುವುದು.
ಕನ್ಯಾ
ಮಾನಸಿಕ ಒತ್ತಡದ ನಿವಾರಣೆಗೆ ಹಾಗೂ ಶತ್ರುನಿವಾರಣೆಗೆ ಕುಲ ದೇವರ ದರ್ಶನ, ಸೇವೆ ಮಾಡುವುದು ಉಪಕಾರಿಯಾಗುವುದು. ಸಂತಾನ ಅಪೇಕ್ಷಿಗಳಿಗೆ ದೇವ ಬಲದಿಂದ ಶುಭ ಸುದ್ದಿ ಸಿಗಲಿದೆ.
ತುಲಾ
ಸಹೋದರರಲ್ಲಿನ ಭಿನ್ನಾಭಿಪ್ರಾಯ ಅಥವಾ ಹುಳುಕುಗಳು ಅನ್ಯರಿಗೆ ತಿಳಿಯುವಂಥ ಘಟನೆ ನಡೆಯಬಹುದು. ಇತರ ಯೋಚನೆಗಳ ನಡುವೆ ಮಾಡುವ ಕೆಲಸದಲ್ಲಿ ಹೆಚ್ಚಿನ ಗಮನವಿಲ್ಲದಿದ್ದರೆ ದಂಡತೆತ್ತುವಂತಾಗಲಿದೆ.
ವೃಶ್ಚಿಕ
ಸ್ವಸಾಮರ್ಥ್ಯವನ್ನು ಉತ್ತಮ ರೀತಿಯಲ್ಲಿ ಪ್ರದರ್ಶಿಸಿದಲ್ಲಿ, ಹುದ್ದೆಯನ್ನು ಭದ್ರಗೊಳಿಸಿಕೊಳ್ಳಬಹುದು. ಮೇಲಧಿಕಾರಿಗಳ ಗಮನಸೆಳೆಯಬಹುದು. ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು.
ಧನು
ವ್ಯಾಪಾರದಲ್ಲಿ ಹಿಂದೆ ನೀವು ತೆಗೆದುಕೊಂಡಿದ್ದ ನಿರ್ಧಾರ ಸರಿಯಾದುದೆಂದು  ಮನವರಿಕೆಯಾಗುವುದು. ಆಹಾರದಲ್ಲಿ ವಿಷದ ಅಂಶವು ಸೇರಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ‌ ಕೆಲಸಗಳಿಗೆ ವಿಘ್ನ ಕಾಡಲಿದೆ.
ಮಕರ
ಕುಟುಂಬಕ್ಕೆ ಸಂಬಂಧಪಟ್ಟ ಮಹತ್ವದ ವಿಷಯಗಳನ್ನು ಗಂಭೀರವಾಗಿ ಚಿಂತಿಸಿ ನಿರ್ಧರಿಸುವುದು ಉತ್ತಮ. ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ಮನೋಭಾವ ಉತ್ಕಟವಾದ ಸ್ನೇಹಕ್ಕೆ ಅಡ್ಡಿಮಾಡಲಿದೆ.
ಕುಂಭ
ಮನೆಯ ಪತ್ರ ಅಥವಾ ಕಂದಾಯ ಇಲಾಖೆಯ ವ್ಯವಹಾರದಲ್ಲಿ ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ. ತಾಂತ್ರಿಕ ಕ್ಷೇತ್ರದಲ್ಲಿ ಗುರಿ ಮುಟ್ಟುವ ಗಣನೀಯ ಸಾಧನೆ ತೋರಿ ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗುವಿರಿ.
ಮೀನ
ಕೌಟುಂಬಿಕ ಅಭಿವೃದ್ಧಿಯಂಥ ವಿಷಯಗಳಿಂದ ಬಹಳ ಖುಷಿ ಸಿಗುವುದು. ಅಪರೂಪದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭವು ಒದಗಿ ಬರಲಿದೆ. ಯಂತ್ರೋಪಕರಣಗಳ ಮಾರಾಟದಿಂದ ಲಾಭ ಇರಲಿದೆ.
ADVERTISEMENT
ADVERTISEMENT