ದಿನ ಭವಿಷ್ಯ: ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸಲಿವೆ..
Published 30 ಮೇ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸದನ್ನು ಕಲಿಯುವುದಕ್ಕೆ ನೀವು ಬಹಳ ಉತ್ಸುಕರಾಗಿದ್ದೀರಿ. ಇತರರನ್ನು ಹೀಯಾಳಿಸುವ ಅಥವಾ ನಿಂದನೆ ಮಾಡುವ ಮನೋಭಾವವನ್ನು ಕಡಿಮೆ ಮಾಡಿಕೊಳ್ಳಿ. ಬಹುಕಾಲದ ಯೋಜನೆಗಳು ಯಶಸ್ವಿಯಾಗಲಿವೆ.
ವೃಷಭ
ಅಧಿಕಾರಿಗಳ ಜೊತೆ ವ್ಯವಹರಿಸುವಾಗ ಕೆಲವೊಂದು ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರುವುದರಿಂದ ನಿರಾಳವಾಗಿ ಮುಂದುವರೆಯಿರಿ. ಕುಲದೇವರ ದರ್ಶನದಿಂದ ವ್ಯವಹಾರದಲ್ಲಿ ಅಭಿವೃದ್ಧಿ ಕಾಣುವಿರಿ.
ಮಿಥುನ
ಅಸಾಧ್ಯ ಕಾರ್ಯಗಳನ್ನು ಸಹ ಸಾಧಿಸುವಷ್ಟು ಮನೋಬಲ ನಿಮ್ಮಲ್ಲಿದೆ. ಆದರೆ ಇಂದು ಯಾವುದೇ ಹೊಸ ಉದ್ಯೋಗ ಅಥವಾ ಕರಾರಿಗೆ ಆತುರದಲ್ಲಿ ಸಹಿ ಹಾಕಬೇಡಿ. ಪೂರ್ವಸಿದ್ಧತೆಯಿಲ್ಲದೆ ಯಾವುದೇ ಕೆಲಸ ಮಾಡಬೇಡಿ.
ಕರ್ಕಾಟಕ
ಒಂದು ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ಯಾವುದೇ ರೀತಿಯ ತೀರ್ಮಾನ ಕೈಗೊಳ್ಳಬೇಡಿ. ಈ ದಿನ ಎದುರಾಗುವ ಕಹಿ ಘಟನೆಗಳಿಗೆ ಹೆಚ್ಚು ಪಾಶಸ್ತ್ಯ ಕೊಡುವ ಅವಶ್ಯಕತೆಯಿಲ್ಲ.
ಸಿಂಹ
ನೈತಿಕ ಶಕ್ತಿ ಹೆಚ್ಚುವುದರಿಂದ ಕೆಲಸದಲ್ಲಿ ಉತ್ತಮ ಅಭಿವೃದ್ಧಿಯನ್ನು ಕಾಣುವಿರಿ. ಮಗನೊಡನೆ ವ್ಯಾವಹಾರಿಕ ಬಾಂಧವ್ಯ ಹೆಚ್ಚಿ, ವ್ಯವಹಾರದಲ್ಲಿ ಲಾಭವನ್ನು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಎಣಿಕೆಯಂತೆ ಕಾರ್ಯಗಳು ಸಿದ್ಧಿಸಲಿವೆ.
ಕನ್ಯಾ
ಈ ದಿನ ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲ ಕಾರ್ಯಗಳಲ್ಲಿಯೂ ಯಶಸ್ಸು ಪಡೆಯುವಿರಿ. ಅಧಿಕಾರಿಗಳಿಗೆ ಸಹೋದ್ಯೋಗಿ ಗಳಿಂದ ಸಹಾಯ ದೊರೆಯುವುದು. ಭೂ ವ್ಯವಹಾರದಲ್ಲಿ ಹೆಚ್ಚಿನ ಲಾಭವಿದೆ.
ತುಲಾ
ಸ್ವಂತ ಉದ್ಯಮದಲ್ಲಿರುವವರು ತಮ್ಮ ಕಾರ್ಯ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿಕೊಳ್ಳುವುದರಲ್ಲಿ ಬಹಳ ಉತ್ಸಾಹವನ್ನು ತೋರಿ ಅದರಲ್ಲಿ ಯಶಸ್ಸು ಪಡೆಯುವಿರಿ. ಧಾನ್ಯಗಳ ರಪ್ತು ಮಾರಾಟಗಾರರಿಗೆ ಹೆಚ್ಚಿನ ಲಾಭವಿದೆ.
ವೃಶ್ಚಿಕ
ನಿರುದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದಂತಹ ಕೆಲಸ ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸಗಳಲ್ಲಿನ ಜವಾಬ್ದಾರಿಗಳು ಹೆಚ್ಚಿ, ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಿದೇಶದಲ್ಲಿನ ಹುದ್ದೆಗಾಗಿ ಅರ್ಜಿ ಸಲ್ಲಿಸಬಹುದು.
ಧನು
ಕುಟುಂಬದಲ್ಲಿ ಹಿರಿಯರ ಭಿನ್ನಾಭಿಪ್ರಾಯವನ್ನು ಮುರಿದು ಹೊಸ ತಲೆಮಾರಿನವರು ನೂತನವಾಗಿ ಸಂಬಂಧವನ್ನು ಬೆಳೆಸುವಂತಾಗಲಿದೆ. ಈ ದಿನ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿಯು ಮೂಡಲಿದೆ.
ಮಕರ
ಉಪಹಾರ ಗೃಹಗಳ ಮಾಲೀಕರು ಅಧಿಕ ಲಾಭವನ್ನು ಪಡೆಯುವಿರಿ. ಹಿರಿಯರಿಂದ ಪಡೆದ ಸಲಹೆಯು ನಿಮ್ಮ ಜೀವನಕ್ಕೆ ಹೊಸ ಬುನಾದಿಯಾಗಲಿದೆ. ತೆಂಗಿನ ಕೃಷಿ ಮಾಡುವ ರೈತರಿಗೆ ಹೇರಳವಾಗಿ ಲಾಭವಾಗಲಿದೆ.
ಕುಂಭ
ರಾಜಕೀಯ ವ್ಯಕ್ತಿಗಳು ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಜನ ಸಂಪಾದನೆಯಾಗಲಿದೆ. ನಿಮ್ಮ ನೂತನ ಕೆಲಸ ಕಾರ್ಯಗಳಿಗೆ ಅಪೇಕ್ಷಿಸಿದ ಬೆಂಬಲ ನಿಮಗೆ ದೊರೆಯಲಿದೆ.
ಮೀನ
ಮನೆಯಲ್ಲಿ ಆನಂದದ ವಾತಾವರಣ ಇರಲಿದೆ. ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ. ಮನೆಗೆ ಬಂಧುಗಳ, ಆತ್ಮೀಯರ ಆಗಮನವಿರುವುದು. ಬರಹಗಾರರಿಗೆ ಉತ್ತೇಜನದ ಕೊರತೆ ಕಾಣಲಿದೆ.