ಶುಕ್ರವಾರ, 4 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಈ ರಾಶಿಯವರ ವ್ಯವಹಾರಗಳು ಜಯಪ್ರದವಾಗುತ್ತವೆ
Published 3 ಜುಲೈ 2025, 22:57 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಕಟ ಸಂಬಂಧಗಳೊಂದಿಗೆ ಬದುಕಿನ ದುರ್ಘಟನೆಯ ವಿಷಯಗಳನ್ನು ಹಂಚಿಕೊಳ್ಳುವುದರಿಂದ ಸಹಾಯ ಹೊಂದುವಿರಿ. ಪ್ರಮುಖ ಹುದ್ದೆಗಳಲ್ಲಿರುವವರಿಗೆ ಒಳ್ಳೆಯ ಸ್ಥಾನ ಮತ್ತು ಪ್ರಶಂಸೆ ದೊರಕುವುದು.
ವೃಷಭ
ಕಟ್ಟಡದ ಕಂಟ್ರಾಕ್ಟರ್‌ಗಳಿಗೆ ಕೆಲಸಗಾರರ ಕೊರತೆ ಕಾಣಲಿದೆ. ಪರಿಣತ ಕೆಲಸಗಾರರ ಗೈರುಹಾಜರಿಯಿಂದ ನಷ್ಟ ಸಂಭವಿಸುವುದು. ಪರಿಸ್ಥಿತಿಯು ಆತ್ಮಾವಲೋಕನ ನಡೆಸುವಂತಾಗಲಿದೆ.
ಮಿಥುನ
ಕೆಲಸಗಳನ್ನು ಸಾಧಿಸಿಕೊಳ್ಳಬೇಕಿದ್ದರೆ ಅವಿರತ ಶ್ರಮ ಅಗತ್ಯವಾಗುವುದು. ಗುತ್ತಿಗೆಯನ್ನು ನೀಡುವ ಮೊದಲು ಎಲ್ಲಾ ನಿಯಮಗಳಿಗೆ ಒಪ್ಪಿದ ದಾಖಲೆಪತ್ರಗಳಲ್ಲಿ ಸೂಕ್ತ ಸಹಿ ಪಡೆದುಕೊಳ್ಳಲು ಮರೆಯದಿರಿ.
ಕರ್ಕಾಟಕ
ಕಾಲು ನೋವು ಅಥವಾ ಬೆನ್ನುನೋವು ಕಾಣಿಸಿದವರಿಗೆ ವೈದ್ಯರ ದರ್ಶನ ಅಗತ್ಯವೆನಿಸಲಿದೆ. ವೃತ್ತಿ ಜೀವನದಲ್ಲಿ ಗೊಂದಲದಿಂದ ಹೊರಬರಬೇಕಾದರೆ ಧೈರ್ಯದಿಂದ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.
ಸಿಂಹ
ಕೆಲಸದ ಒತ್ತಡದಿಂದ ದೇಹಾಯಾಸ ತೋರಿಬಂದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆಹಾರ ಪದಾರ್ಥಗಳನ್ನು ದಾನ ಮಾಡಿ. ಸ್ಟೇಷನರಿ ಮತ್ತು ಫ್ಯಾನ್ಸಿ ವಸ್ತುಗಳ ಮಾರಾಟವಿರುವುದು.
ಕನ್ಯಾ
ಕೆಲಸದಲ್ಲಿ ಆತುರದ ಸ್ವಭಾವ ಬೇಡ. ಮಕ್ಕಳಿಗೆ ಓದಿನಲ್ಲಿ ಹೆಚ್ಚು ಆಸಕ್ತಿ ಹುಟ್ಟುವಂತೆ ಮನೆಯ ಪರಿಸರವನ್ನು ನಿರ್ಮಿಸಿ. ಮನೆಯವರ ಆರ್ಥಿಕ ಪರಿಸ್ಥಿತಿ ಕ್ರಮೇಣ ಸುಧಾರಿಸಲಿದೆ. ವ್ಯವಹಾರಗಳು ಜಯಪ್ರದವಾಗುತ್ತವೆ.
ತುಲಾ
ರಾಜಕಾರಣಿಗಳಿಗೆ ಶುಭ ಸುದ್ದಿ ದೊರೆಯಲಿದೆ. ಸಾಧ್ಯತೆ ಅರಿತು ವ್ಯವಹಾರದಲ್ಲಿ ಮುಂದುವರಿಯಿರಿ. ಸದ್ಯಕ್ಕೆ ವೃತ್ತಿಯ ಬದಲಾವಣೆಯ ಯೋಚನೆ ಸರಿಯಲ್ಲ. ಕೆಲಸಕ್ಕೆ ನಿಯಮಿತ ಸಮಯವಿರುವುದಿಲ್ಲ.
ವೃಶ್ಚಿಕ
ಕುಟುಂಬದಲ್ಲಿ ಊಹೆಗೂ ನಿಲುಕದಂಥ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಸಹವರ್ತಿಗಳ ಜತೆ ಉತ್ತಮ ಸಂಪರ್ಕ ಬೆಳೆಸಿಕೊಳ್ಳುವುದು ಸಾಧ್ಯವಾಗುವುದು. ಹಣಕಾಸಿನ ವಿವಾದಗಳನ್ನು ಬಗೆಹರಿಸಿಕೊಳ್ಳುವಿರಿ.
ಧನು
ಸೃಜನಶೀಲತೆ, ಚಿಂತನಾ ಲಹರಿಗಳು ಇತರರಿಗೆ ವಿಭಿನ್ನವೆನಿಸಿದರೂ ಸರಿಯಾಗಿಯೇ ಇರುತ್ತವೆ. ಅದರಲ್ಲಿ ಅನುಮಾನ ಬೇಡ. ಪದವಿ ವಿದ್ಯಾರ್ಥಿಗಳಿಗೆ ಉತ್ತಮ ನೆನಪಿನಶಕ್ತಿ, ಜ್ಞಾನ ದೊರೆತು ಆನಂದವಾಗಲಿದೆ.
ಮಕರ
ದಾಂಪತ್ಯದಲ್ಲಿ ಸಣ್ಣ ಪುಟ್ಟ ವಿಚಾರಗಳಿಂದ ಮಾನಸಿಕ ಅಸಮಾಧಾನ ಕಾಡಲಿದೆ. ಸಹನಾಶೀಲರಾಗಿ ವರ್ತಿಸಿದಲ್ಲಿ ಯಶಸ್ಸು ಸಿಗುತ್ತದೆ. ಊರಿನ ರಾಜಕಾರಣದ ವಿಷಯಗಳಲ್ಲಿ ಹೆಚ್ಚು ಸಮಯ ಕಳೆಯುವಂತಾಗುವುದು.
ಕುಂಭ
ದೈವಾನುಗ್ರಹದಿಂದ ಸಕಲ ಅಭೀಷ್ಟವು ಸಿದ್ಧಿಯಾಗಿ ಸಂತೃಪ್ತಿ ಪಡೆಯುತ್ತೀರಿ. ಕೌಟುಂಬಿಕ ಸಮಸ್ಯೆಯು ನೂತನ ಆಯಾಮ ಪಡೆಯಲಿದೆ. ಅತಿ ವಿಶ್ವಾಸದಿಂದ ಮುಂದುವರಿದ ಮುಖಭಂಗವಾಗಬಹುದು.
ಮೀನ
ಧಾರ್ಮಿಕ ಕೆಲಸದಲ್ಲಿ ಆಸಕ್ತಿ ಹೆಚ್ಚಲಿದೆ.ವೈಯಕ್ತಿಕ ಅಭಿವೃದ್ಧಿಗೂ ಸಾಮಾಜಿಕ ಏಳಿಗೆಗೂ ಅನುಕೂಲ ಆಗಲಿದೆ. ಕುಟುಂಬದವರೊಡನೆ ಸಂತೋಷದಿಂದ ಕಳೆಯುವಂತಾಗಲಿದೆ.
ADVERTISEMENT
ADVERTISEMENT