ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಸಿನಿಮಾ ತಾರೆಗಳಿಗೆ ಪ್ರಸಿದ್ಧಿ ಸಿಗುವುದು
Published 14 ಆಗಸ್ಟ್ 2023, 23:31 IST
ಪ್ರಜಾವಾಣಿ ವಿಶೇಷ
author
ಮೇಷ
ಸಹೋದರ ಸಹೋದರಿಯರ ಬಾಂಧವ್ಯ ಗಟ್ಟಿಯಾಗುವಂಥ ಘಟನೆ ನಡೆಯುವುದು. ಇಂದಿನ ಸಂಧಾನ ಅಥವಾ ಕರಾರು ಒಪ್ಪಂದ ಅನುಕೂಲಕರ ಎನಿಸಲಿದೆ. ಮನೆ ದೇವರಿಗೆ ಹರಕೆ ಸಲ್ಲಿಸುವುದು ನೆನಪಿರಲಿ.
ವೃಷಭ
ಗೃಹ ನಿರ್ಮಾಣದಂತಹ ಕೆಲಸಗಳಿಗಾಗಿ ಹೆಚ್ಚು ಸಮಯ ವಿನಿಯೋಗಿಸುವಿರಿ. ಉದ್ಯೋಗದಲ್ಲಿ ಮೇಲಧಿಕಾರಿಗಳಿಂದ ಹೆಚ್ಚಿನ ಪ್ರಶಂಸೆ ದೊರೆತು ಬಡ್ತಿ ಸಿಗುವುದು. ಸಿನಿಮಾ ತಾರೆಗಳಿಗೆ ಪ್ರಸಿದ್ಧಿ ಸಿಗುವುದು.
ಮಿಥುನ
ಅಕ್ಕಪಕ್ಕದ ಮನೆಯವರ ಅಥವಾ ಸ್ನೇಹಿತರ ಹೊಗಳಿಕೆಯ ಮಾತುಗಳಿಗೆ ಕಿವಿಗೊಟ್ಟು ಮರುಳಾಗಬೇಡಿ. ಫ್ಯಾಷನ್ ಡಿಸೈನರ್‌ಗಳು ಈ ದಿನ ಅವಕಾಶಗಳನ್ನು ಹಾಗೂ ಉತ್ತಮ ಧನಲಾಭ ಪಡೆಯುವರು.
ಕರ್ಕಾಟಕ
ಮಕ್ಕಳ ಕೆಲಸಗಳ ಬಗ್ಗೆ ನೆರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ತಂದೆಯವರ ಮಾತಿನಿಂದ ಅತೃಪ್ತಿಯ ವಾತಾವರಣ ಮೂಡಿ ಬರಲಿದೆ. ಶ್ರೀಕ್ಷೇತ್ರಕ್ಕೆ ಹೋಗುವ ಯೋಜನೆ ಕಾರ್ಯರೂಪಕ್ಕೆತನ್ನಿ.
ಸಿಂಹ
ಚಿತ್ರಕಲೆಯಲ್ಲಿನ ಆಸಕ್ತಿಯಿಂದಾಗಿ ಹೆಚ್ಚಿನ ಕಲಿಕೆಗಾಗಿ ವಿಶೇಷ ತರಗತಿಗೆ ಕಳುಹಿಸಲು ತಂದೆಯವರಿಂದ ಒಪ್ಪಿಗೆ ದೊರೆಯುವುದು. ರಕ್ತದೊತ್ತಡ ನಿಯಂತ್ರಣಕ್ಕೆ ಬಂದು ಮನಸ್ಸಿಗೆ ಸಮಾಧಾನ ಆಗುವುದು.
ಕನ್ಯಾ
ಧನಾಗಮನಕ್ಕೆ ಹಲವು ದಾರಿಗಳು ಕಂಡರೂ ಸರಿಯಾದ ದಾರಿಯನ್ನು ಆರಿಸಿಕೊಳ್ಳುವುದು ನಿಮ್ಮ ವಿವೇಚನೆಗೆ ಬಿಟ್ಟಂಥ ವಿಚಾರ. ದೈವಾನುಗ್ರಹದಿಂದ ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ಪಡೆಯುವಿರಿ.
ತುಲಾ
ವಿದೇಶ ಶಿಕ್ಷಣ ಪಡೆದುಕೊಳ್ಳುವ ಪ್ರಯತ್ನವನ್ನು ನಡೆಸಿದಲ್ಲಿ ಅವಕಾಶ ಪ್ರಾಪ್ತಿಯಾಗುವುದು. ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆ ಸರಿಯಾಗಿರುವುದು. ಮನೆಯಲ್ಲಿ ಜವಾಬ್ದಾರಿ ಹೆಚ್ಚಲಿದೆ.
ವೃಶ್ಚಿಕ
ದೇವತಾನುಗ್ರದಿಂದ ಸಕಲ ಅಭೀಷ್ಟ ಸಿದ್ಧಿಯಾಗಿ ಸಂತೃಪ್ತಿಯಾಗುವುದು. ಕಷ್ಟದ ದಿನಗಳಲ್ಲಿ ಸಹಕರಿಸಿದವರೊಂದಿಗೆ ನಮ್ರತೆಯಿಂದ, ವಿನಯದಿಂದ ಇರುವುದನ್ನು ಮರೆಯಬೇಡಿ. ವಿಶ್ರಾಂತಿ ಬೇಕೆನಿಸಲಿದೆ.
ಧನು
ಬಂಧುಗಳ ಮನೆಯ ಶುಭಕಾರ್ಯಗಳಲ್ಲಿ ಹೆಚ್ಚಿನ ಜವಾಬ್ದಾರಿ ಮತ್ತು ಓಡಾಟವಿರುವುದು. ಮಾಡುವ ಕೆಲಸದ ಸರಿ ತಪ್ಪುಗಳ ಬಗ್ಗೆ ತಿಳಿಯುವ ಪ್ರಯತ್ನ ಮಾಡಿ. ಔಷಧ ವ್ಯಾಪಾರದಿಂದ ಲಾಭ ಹೊಂದಬಹುದು.
ಮಕರ
ಇಂದು ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ. ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯುವುದು. ಒಂಟಿತನದ ಚಿಂತೆಯು ಆಗಾಗ ಕಾಡಲಿದೆ.
ಕುಂಭ
ಅನುಯಾಯಿಗಳಿಗೆ ನೀವಾಡುವ ಆಶ್ವಾಸನೀಯ ವರ್ತನೆಯಿಂದ ಬಹಳ ಸಂತಸ ಉಂಟಾಗುವುದು. ದಂತವೈದ್ಯ ವೃತ್ತಿಯವರಿಗೆ ಹಾಗೂ ದಂತ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಅನುಕೂಲವಾದ ದಿನ.
ಮೀನ
ಗಡಿಬಿಡಿಯ ಸ್ವಭಾವದಿಂದಾಗಿ ಕಂಪನಿಯಲ್ಲಿ ಉಂಟಾದ ತ‍ಪ್ಪುಗಳಿಗೆ ನೇರ ಹೊಣೆಗಾರಿಕೆ ನಿಮ್ಮದ್ದಾಗಿರುತ್ತದೆ. ಯಾವುದೇ ಕೆಲಸವನ್ನು ಮಾಡುವುದಾದರೂ ಎರಡು ಬಾರಿ ಯೋಚಿಸಿ ಮಾಡುವುದು ಉತ್ತಮ.