ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಐ.ಟಿ ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ
Published 3 ಡಿಸೆಂಬರ್ 2023, 23:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಸಣ್ಣ ಬುದ್ಧಿಯಿಂದಾಗಿ ಸಮಾಜದಲ್ಲಿ ಜನರ ಅಪಹಾಸ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿದೆ. ಕೆಲಸದ ಗುಣಮಟ್ಟ, ಕರ್ತವ್ಯ ನಿಷ್ಠೆಯು ಮೇಲಧಿಕಾರಿಗಳ ಗಮನಕ್ಕೆ ಬಂದು ಬಡ್ತಿಗೆ ಮೂಲ ಕಾರಣವಾಗುತ್ತದೆ.
ವೃಷಭ
ನವೋದ್ಯಮಿಗಳಿಗೆ ಅನ್ಯರ ಸಹಾಯ ಸಹಕಾರ ಪ್ರಾಪ್ತಿಯಾಗಿ ವೃತ್ತಿಪರವಾದ ಹುಮ್ಮಸ್ಸು ಇಮ್ಮಡಿಗೊಳ್ಳುವುದು. ಲೇವಾದೇವಿ ವ್ಯವಹಾರಗಳನ್ನು ಆದಷ್ಟು ಕಡಿಮೆ ಮಾಡಿಕೊಳ್ಳಲು ನಿರ್ಧರಿಸಿ. ಮನಶ್ಶಾಂತಿ ಇರುವುದು.
ಮಿಥುನ
ನೂತನವಾಗಿ ಆರಂಭಿಸಿದ ವ್ಯವಹಾರದಲ್ಲಿ ಅನುಭವದ ಕೊರತೆಯಿಂದಾಗಿ ನಷ್ಟ ಸಂಭವಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಹೆಚ್ಚಿನ ಅಧ್ಯಯನ ಅಗತ್ಯ. ಸಾಹಿತ್ಯದಲ್ಲಿ ಅಭಿರುಚಿ ಹೆಚ್ಚುತ್ತದೆ.
ಕರ್ಕಾಟಕ
ತಂದೆ ಅಭಿಪ್ರಾಯಕ್ಕೆ ಬೆಲೆ ಕೊಡಿ, ನಿಮ್ಮ ಯಶಸ್ಸಿಗೆ ಅನುಕೂಲಕರವಾಗಿರುತ್ತದೆ. ನಿಮ್ಮ ಹೃದಯ ಶ್ರೀಮಂತಿಕೆಯಿಂದ ಕೈಗೊಂಡ ಕಾರ್ಯಗಳನ್ನು ನಿರಾತಂಕವಾಗಿ ನೆರವೇರಿಸುವಿರಿ. ದೂರ ಪ್ರಯಾಣದ ಸಾಧ್ಯತೆಗಳು ಹೆಚ್ಚಿವೆ.
ಸಿಂಹ
ಇತರರಲ್ಲಿ ನಿಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಇಂದು ಸೂಕ್ತವಾದ ಸಮಯ. ಪೋಲೀಸ್ ಅಧಿಕಾರಿಗಳಿಗೆ ಶಿಕ್ಷೆಯ ವರ್ಗಾವಣೆಯಾಗುವ ಸಂಭವವಿದೆ. ಸ್ವಪ್ರಯತ್ನದಿಂದ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ.
ಕನ್ಯಾ
ನಿಮ್ಮಲ್ಲಿರುವ ಮಾತಿನ ಚತುರತೆಯಿಂದ ನಿಮ್ಮ ಎಲ್ಲಾ ಕೆಲಸಗಳು ಸರಾಗವಾಗಿ ನೆರವೇರುವುದು. ಮಾನಸಿಕ ಸ್ಥಿತಿಯನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಲಿದೆ. ಬಂಧುಗಳೊಡನೆ ವಿವಾದವನ್ನು ಮಾಡಬೇಡಿ.
ತುಲಾ
ನಿಮಗೆ ಎದುರಾಗಿರುವ ಕೌಟುಂಬಿಕ ಸಂದಿಗ್ಧತೆಯನ್ನು ಮಾರ್ಗದರ್ಶಕರ ಸಲಹೆ ಪಡೆದು, ನಿಭಾಯಿಸುವುದು ಒಳ್ಳೆಯದು. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯ ಹೊಂದುವಿರಿ.
ವೃಶ್ಚಿಕ
ಇಂದು ನಿಮ್ಮ ಸಹೋದ್ಯೋಗಿಗಳ ಯಾವುದೇ ತರಹದ ಒತ್ತಡಕ್ಕೆ ಮಣಿಯದೆ ಕೆಲಸದಲ್ಲಿ ಮುನ್ನುಗ್ಗಿ. ತಾಯಿಯ ಸಲಹೆಯಿಂದಾಗಿ ಯಾವ ದಿಕ್ಕಿನಲ್ಲಿ ಸಾಗಬೇಕೆಂಬ ಗೊಂದಲಗಳು ನಿವಾರಣೆಯಾಗುತ್ತದೆ.
ಧನು
ಅಧ್ಯಯನದಲ್ಲಿ ಆಸಕ್ತಿ ಹೆಚ್ಚುವುದು ಹಾಗೂ ಅಧ್ಯಯನಶೀಲರಿಗೆ ಜ್ಞಾನಾರ್ಜನೆ ಆಗುವುದು. ಕೆಲಸದಲ್ಲಿ ಬಹಳ ದಿನಗಳಿಂದ ಇದ್ದಂತಹ ಸಮಸ್ಯೆ ಬಗೆ ಹರಿಯುವುದು. ಔಷಧಿ ಮಾರಾಟಗಾರರು ವೃತ್ತಿಯಲ್ಲಿ ಜಾಗ್ರತೆವಹಿಸಿ.
ಮಕರ
ಹಣಕಾಸಿನ ವ್ಯಾಮೋಹ, ಬಯಕೆ ಹೆಚ್ಚಾಗುವ ಪರಿಣಾಮ ಪಶ್ಚಾತಾಪಕ್ಕೆ ಕಾರಣವಾಗದಂತೆ ನೋಡಿಕೊಳ್ಳಿ. ಸಂಜೆಯ ಸಮಯದಲ್ಲಿ ಪ್ರೀತಿ ಪಾತ್ರರೊಡನೆ ಕಾಲ ಕಳೆಯುವಿರಿ. ಶ್ರೀ ದುರ್ಗಾದೇವಿಯನ್ನು ಭಜಿಸಿ.
ಕುಂಭ
ಮಾಧ್ಯಮ ಮಿತ್ರರಿಂದ ತಪ್ಪು ಮಾಹಿತಿ ರವಾನೆಯಾಗಬಹುದು, ವೃತ್ತಿಯಲ್ಲಿ ಜಾಗ್ರತೆವಹಿಸಿ. ಮಗಳ ಮದುವೆಯ ನಿಶ್ಚಯ ಸಂತೋಷವನ್ನು ಉಂಟುಮಾಡುತ್ತದೆ. ಕೃಷಿ ಉತ್ಪನ್ನಗಳಿಂದ ಉತ್ತಮ ಆದಾಯವಿದೆ.
ಮೀನ
ಐ.ಟಿ ಕಂಪನಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಜಾಸ್ತಿಯಾಗಲಿದೆ, ಅದರ ಪರಿಣಾಮವಾಗಿ ವರಮಾನ ಹೆಚ್ಚಳದ ಸಂಭವ ಇರುವುದು. ವೃತ್ತಿ ನೈಪುಣ್ಯತೆಯಿಂದ ಉನ್ನತಾಧಿಕಾರಿಯ ಹುದ್ದೆಗೆ ನೇಮಕಗೊಳ್ಳುವಿರಿ.
ADVERTISEMENT
ADVERTISEMENT