ಅಬುಧಾಬಿ: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 19ನೇ ಆವೃತ್ತಿಯ ಮಿನಿ ಹರಾಜಿನಲ್ಲಿ ಭಾರತದ ಅನ್ಕ್ಯಾಪ್ಡ್ ಆಟಗಾರ ಔಕಿಬ್ ನಬಿ ದಾರ್ ಅವರು ₹8.4 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

ಜಮ್ಮು ಕಾಶ್ಮೀರ ಮೂಲದ 29 ವರ್ಷದ ಬೌಲಿಂಗ್ ಆಲ್ರೌಂಡರ್ ಔಕಿಬ್ ನಬಿ ದಾರ್ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ತೀವ್ರ ಪೈಪೋಟಿ ನಡೆಸಿದವು.

₹30 ಲಕ್ಷ ಮೂಲಬೆಲೆ ಹೊಂದಿದ್ದ ಔಕಿಬ್ ನಬಿ ಅವರು 2025–26 ಸಾಲಿನ ರಣಜಿಯಲ್ಲಿ ಉತ್ತಮ ಪ್ರದರ್ಶನ ತೋರಿಸಿದ್ದರು. 5 ಪಂದ್ಯಗಳಿಂದ 29 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು.

ಬಲಗೈ ಬ್ಯಾಟರ್ ಹಾಗೂ ಬಲಗೈ ಮಧ್ಯಮ ವೇಗಿಯಾಗಿರುವ ಔಕಿಬ್ ನಬಿ ದಾರ್, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿ 7 ಪಂದ್ಯಗಳಿಂದ 15 ವಿಕೆಟ್ ಪಡೆಯುವ ಮೂಲಕ ಮಿಂಚಿದ್ದರು. ದುಲೀಪ್ ಟ್ರೋಫಿಯಲ್ಲಿ ನಾಲ್ಕು ಬಾಲಿಗೆ ನಾಲ್ಕು ವಿಕೆಟ್ ಕೂಡ ಪಡೆದಿದ್ದರು.

ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 36 ಪಂದ್ಯಗಳನ್ನು ಆಡಿರುವ ಔಕಿಬ್ ನಬಿ, 125 ವಿಕೆಟ್ ಕಬಳಿಸಿದ್ದಾರೆ. 870 ರನ್ ಬಾರಿಸಿದ್ದಾರೆ.
.IPL Auction 2026: ₹7.2 ಕೋಟಿಗೆ ರಾಜಸ್ಥಾನ ರಾಯಲ್ಸ್ ಪಾಲಾದ ರವಿ ಬಿಷ್ಣೋಯಿ.IPL 2026: ರ್ಯಾಂಕಿಂಗ್ನಲ್ಲಿ 2ನೇ ಸ್ಥಾನದಲ್ಲಿರುವ ಜಾಕೋಬ್ ಡಫಿ ಖರೀದಿಸಿದ RCB.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.