ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಅವಿವಾಹಿತರಿಗೆ ಕಂಕಣ ಬಲ ಸಂತಸ ತರಲಿದೆ
Published 7 ಏಪ್ರಿಲ್ 2024, 0:19 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಳೆದುಹೋಗಿದ್ದ, ಹಳೆಯ ನೆನಪುಗಳನ್ನು ಹೊಂದಿರುವ ವಸ್ತು ಪುನಃ ಕೈ ಸೇರುತ್ತದೆ. ಮನೋವಿಜ್ಞಾನದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಎದುರು ನೋಡಬಹುದು. ಕಾಲಮಿತಿಯೊಳಗೆ ಕರ್ತವ್ಯ ಪಾಲಿಸಿ.
ವೃಷಭ
ನಿಮ್ಮ ಸುತ್ತಮುತ್ತಲ ಜನರೊಂದಿಗಿನ ಬಾಂಧವ್ಯವು ಉತ್ತಮಗೊಳ್ಳುವುದು. ವೈದ್ಯರು ಅಭ್ಯಾಸದಲ್ಲಿ ತೋರಿದ ಬೇಜವಬ್ದಾರಿತನದಿಂದ ಪ್ರಾಣಾಪಾಯ ಸಂಭವಿಸಬಹುದು. ಕಥೆ-ಕಾದಂಬರಿಯ ಬಗ್ಗೆ ಆಸಕ್ತಿ ಮೂಡಲಿದೆ.
ಮಿಥುನ
ಈ ದಿನದ ಪರಿಸ್ಥಿತಿಗಳು ಕೊಂಚ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು. ಮನೆಯಲ್ಲಿ ಮಕ್ಕಳಿಂದ ಸಂಭ್ರಮದ ವಾತಾವರಣ ಮೂಡುವುದು. ಗಂಟಲು ಬೇನೆ ಎದುರಾದಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ.
ಕರ್ಕಾಟಕ
ಸದಾಕಾಲ ಪಕ್ಕದಲ್ಲಿಯೇ ಇರುವ ಶತ್ರುಗಳಿಂದ ವಂಚನಾ ಪ್ರಸಂಗವಿದ್ದರೂ, ಖಂಡಿತವಾಗಿ ನೀವೇ ಜಯಶಾಲಿಯಾಗುವಿರಿ. ಇಂದು ದೈಹಿಕ ಶ್ರಮವು ಜಾಸ್ತಿಯಾದರೂ ಆದಾಯ ಉತ್ತಮ ಸ್ಥಿತಿಯಲ್ಲಿರುತ್ತದೆ.
ಸಿಂಹ
ವ್ಯವಹಾರದಲ್ಲಿ ಎಲ್ಲಾ ಸನ್ನಿವೇಶಗಳು ನಿಮ್ಮ ಪರವಾಗಿರುವಂತೆ ತೋರಿದರೂ, ಮೋಸ ಹೋಗುವ ಸಂಭವವಿದೆ. ಜಾಗ್ರತರಾಗಿರಿ. ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.
ಕನ್ಯಾ
ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗಲಿದೆ. ಇಂಟೀರಿಯರ್ ಡೆಕೊರೇಟರ್ಸ್‌ಗಳಿಗೆ ಅಧಿಕ ವರಮಾನ ಇರಲಿದ್ದು, ಕಾರ್ಯಕ್ಷೇತ್ರದಲ್ಲಿ ಯಶಸ್ಸನ್ನು ಕಾಣಬಹುದು.
ತುಲಾ
ವ್ಯಕ್ತಿಯನ್ನು ಅವರ ಮೊದಲ ಭೇಟಿಯಲ್ಲಿ ನೋಡಿದ ಸ್ವಭಾವವೆಂದು ತೂಕಹಾಕಿ ತೀರ್ಮಾನಿಸಬೇಡಿ. ಸ್ನೇಹಿತರಲ್ಲಿ ಅನಗತ್ಯವಾಗಿ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಇತರರನ್ನು ಗೌರವದಿಂದ ನೋಡಿ.‌
ವೃಶ್ಚಿಕ
ಅವಿವಾಹಿತರಿಗೆ ಕಂಕಣ ಬಲ ಸಂತಸ ತರಲಿದೆ. ಸರಕು ಸಾಗಾಣಿಕೆದಾರರಿಗೆ, ಮತ್ತು ಬಂದರು ಕಾರ್ಮಿಕರಿಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ. ಮಹಿಳೆಯರಿಗೆ ಆಭರಣ ಕೊಳ್ಳುವಂತಹ ಇಷ್ಟಾರ್ಥ ಸಿದ್ಧಿಯಾಗಲಿದೆ.
ಧನು
ಧಾರ್ಮಿಕವಾಗಿ ಇರುವವರಿಗೆ, ವೇದಾಧ್ಯಯನದಲ್ಲಿರುವವರಿಗೆ ಮಂತ್ರಸಿದ್ಧಿ ಆಗಬಹುದು. ಬೆಳ್ಳಿ ವಸ್ತುಗಳ ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ. ಮಕ್ಕಳಿಂದ ಅನಾವಶ್ಯಕ ಖರ್ಚು ಸಂಭವಿಸಲಿದೆ.
ಮಕರ
ನೀವು ಹಿಂದೆ ಮಗನ ಒಳಿತಿಗಾಗಿ, ಅಭ್ಯುದಯಕ್ಕಾಗಿ ತೆಗೆದುಕೊಂಡ ಕೆಲ ಕಠಿಣ ನಿರ್ಧಾರಗಳಿಂದಾಗಿ ಇಂದು ಉತ್ತಮ ಫಲ ನಿರೀಕ್ಷಿಸಬಹುದಾಗಿದೆ. ಸಂಪರ್ಕ ಸಾರಿಗೆಯಲ್ಲಿ ಸೇವೆ ಸಲ್ಲಿಸುವವರಿಗೆ ಲಾಭವಾಗುವುದು.
ಕುಂಭ
ಗೃಹದಲ್ಲಿ ಸಂತೋಷ ತರುವಂಥ ಶುಭ ಸಮಾರಂಭಗಳು ನಡೆಯುವವು. ನೀವು ಎಲ್ಲವನ್ನೂ ಕಷ್ಟಪಟ್ಟು ಅಥವಾ ಇತರರ ಸಹಾಯದಿಂದ ಸಂಪಾದಿಸಿಕೊಳ್ಳಬೇಕಾಗುತ್ತದೆ. ಮಾನಸಿಕ ಖಿನ್ನತೆಯನ್ನು ದೂರಮಾಡಿ.
ಮೀನ
ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಆರ್ಥಿಕವಾಗಿ ಮುಂದುವರಿಯಲು ಸಹಾಯವಾಗುತ್ತದೆ. ನಿಮ್ಮ ಮಿತ್ರರೊಬ್ಬರು ನಿಮಗೆ ಎಲ್ಲ ವಿಧದಲ್ಲಿಯೂ ನಿಮಗೆ ಸಹಾಯ ಮಾಡಲಿದ್ದಾರೆ.