ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಡಿ. 8 – ಈ ರಾಶಿಯವರಿಗೆ ಶುಭ ಕಾರ್ಯಗಳಿಗೆ ಹಣ ವಿನಿಯೋಗವಾಗುವುದು
Published 7 ಡಿಸೆಂಬರ್ 2023, 23:08 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆರ್ಥಿಕ ಸ್ಥಿತಿಯು ನಾನಾ ರೀತಿಯಲ್ಲಿ ಅವನತಿಯ ಹಂತವನ್ನು ಹೊಂದುವ ಪರಿಸ್ಥಿತಿ ನಿಮ್ಮ ಗೋಚರಕ್ಕೆ ಬರಬಹುದು, ಜಾಗ್ರತೆ ವಹಿಸಿ. ಕಬ್ಬಿಣ ದಾಸ್ತಾನು ಹೊಂದಿದವರಿಗೆ ತಕ್ಕ ಮಟ್ಟಿಗೆ ಉತ್ತಮ ಆದಾಯ ಸಿಗಲಿದೆ.
ವೃಷಭ
ಅಧಿಕಾರಿ ವರ್ಗದವರಲ್ಲಿ ಹಾಗೂ ಸಹಚರರಲ್ಲಿ ವೈಮನಸ್ಯವನ್ನು ದೂರಪಡಿಸಿಕೊಂಡು ಉತ್ತಮ ಕೆಲಸಗಳನ್ನು ಮಾಡುವಲ್ಲಿ ಮುಂದಾಗುವಿರಿ. ಪತ್ರಿಕಾ ವರದಿಗಾರರಿಗೆ ಕೆಲಸದಲ್ಲಿನ ದಕ್ಷತೆಯಿಂದ ಹೆಚ್ಚಿನ ಯಶಸ್ಸನ್ನು ಕಾಣುವರು.
ಮಿಥುನ
ರೈತಾಪಿವರ್ಗದವರು ತಮ್ಮ ವೃತ್ತಿಯಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರಿಂದ ಅಭಿವೃದ್ಧಿಯನ್ನು ನೋಡಬಹುದು. ಗುರಿ ಸಾಧನೆಗಳ ಬಗ್ಗೆ ಲಕ್ಷ್ಯವಿರಿಸಲು ಮಕ್ಕಳಿಗೆ ಬುದ್ಧಿವಾದ ಹೇಳುವುದು ಒಳ್ಳೆಯದು.
ಕರ್ಕಾಟಕ
ಕೈಗೆಟಕುವ ಕಾರ್ಯವೊಂದು ನಿಮ್ಮ ಸತತ ಪ್ರಯತ್ನದಿಂದ ಆಶ್ಚರ್ಯಕರ ರೀತಿಯಲ್ಲಿ ಥಟ್ಟನೆ ಸಿದ್ಧಿಸಬಹುದು. ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಇಲ್ಲವಾದರೆ ಸಮಸ್ಯೆ ಎದುರಾಗುವುದು.
ಸಿಂಹ
ಸಂಗಾತಿಯೊಂದಿಗೆ ಸ್ನೇಹದಿಂದ ವರ್ತಿಸಿದರೆ ಭಿನ್ನಾಭಿಪ್ರಾಯ ಮೂಡುವ ಅವಕಾಶ ತಪ್ಪುವುದು. ಕೋರ್ಟಿನ ವ್ಯವಹಾರಗಳು ಸಿಹಿ-ಕಹಿಯ ಮಿಶ್ರಫಲದಲ್ಲಿ ಇತ್ಯರ್ಥವಾಗಲಿದೆ. ಅನುಕಂಪಕ್ಕೆ ಅರ್ಹರಲ್ಲದವರಿಗೆ ಸಹಾಯ ಹಸ್ತ ಚಾಚಬೇಡಿ.
ಕನ್ಯಾ
ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿಸಿದ ಲಾಭ ಪಡೆಯಲು ಪರಿಶ್ರಮದ ಜೊತೆಯಲ್ಲಿ ಬುದ್ಧಿವಂತಿಕೆಯೂ ಬಹುಮುಖ್ಯವಾಗುವುದೆಂದು ತಿಳಿದುಬರುವುದು. ತಂದೆ ತಾಯಿಯ ಇಷ್ಟಾರ್ಥಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನಹರಿಸಿ.
ತುಲಾ
ಕಾರ್ಯರಂಗದಲ್ಲಿ ಪರಿವರ್ತನೆ ಕಂಡು ಬರುವುದರಿಂದ ದುಡುಕದೆ ಕೆಲವೊಂದು ವಿಚಾರಗಳ ಬಗ್ಗೆ ಮತ್ತೆ ಮತ್ತೆ ಆಲೋಚನೆ ಮಾಡುವುದು ಉತ್ತಮ. ನಿಮ್ಮ ಪರಿಶ್ರಮದಿಂದ ಆರ್ಥಿಕ ಸ್ಥಿತಿ ಕ್ರಮೇಣವಾಗಿ ಉತ್ತಮಗೊಳ್ಳಲಿದೆ.
ವೃಶ್ಚಿಕ
ಯಂತ್ರೋಪಕರಣಗಳ ಮಾರಾಟದಿಂದ ಮತ್ತು ಅದರ ಸೇವೆಯಿಂದ ಹೆಚ್ಚಿನ ಲಾಭ ಪಡೆಯುವಿರಿ. ಏಕಮುಖಿ ನಿರ್ಧಾರಗಳಿಂದ ಕತ್ತರಿಗೆ ಸಿಲುಕುವ ಸ್ಥಿತಿ ಎದುರಾಗಬಹುದು. ಬ್ಯಾಂಕ್ ಅಧಿಕಾರಿಗಳಿಗೆ ವರ್ಗಾವಣೆಯ ಸಂಭವವಿದೆ.
ಧನು
ಈ ದಿನ ಎದುರಾಗುವ ಸಂದಿಗ್ಧ ಪರಿಸ್ಥಿತಿಯನ್ನು ನೀವು ಸಂಪೂರ್ಣವಾಗಿ ಅವಲೋಕಿಸಿ ನಿಮ್ಮ ಇಷ್ಟದೇವರನ್ನು ಪ್ರಾರ್ಥಿಸಿ ತೀರ್ಮಾನ ಕೈಗೊಳ್ಳುವುದು ಉತ್ತಮ. ಶುಭ ಕಾರ್ಯಗಳಿಗೆ ಹೆಚ್ಚು ಹಣ ವಿನಿಯೋಗವಾಗುವುದು.
ಮಕರ
ಮಾತಿನಿಂದ ಕಾರ್ಯ ಸಾಧಿಸುವ ನಿಮ್ಮ ಗುಣದಿಂದ ಅನುಕೂಲಕರ ವಾತಾವರಣವನ್ನು ಕಾಣುವಿರಿ. ದಿಟ್ಟತನದ ಜೊತೆಗೆ ಸ್ವಲ್ಪ ತಂತ್ರಗಾರಿಕೆ ತೋರಿದರೆ ಅಧಿಕಾರಿಗಳ ಗಮನ ಸೆಳೆಯುವುದು ಕಷ್ಟವಾಗುವುದಿಲ್ಲ.
ಕುಂಭ
ವ್ಯಾಪಾರ ವ್ಯವಹಾರದಲ್ಲಿ ಮಂದಗತಿಯ ನಡೆ ಕಂಡರೂ ಅಭಿವೃದ್ಧಿಯಂತೂ ಖಚಿತ. ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ಮತ್ತು ರಿಪೇರಿಯಿಂದ ಆದಾಯ ಹೆಚ್ಚುವುದು. ಮನೆಗೆ ಹೊಸ ವಸ್ತುಗಳನ್ನು ಕೊಳ್ಳುವ ಯೋಗವಿದೆ.
ಮೀನ
ನಿಮ್ಮ ಒಳ್ಳೆಯ ಸ್ನೇಹಪರ ವರ್ತನೆಯಿಂದ ಅಕ್ಕ ಪಕ್ಕದವರಲ್ಲಿ ಬಾಂಧವ್ಯ ಬೆಳೆಯಲಿದೆ. ಭೂ ಸಂಬಂಧದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವ ಮುನ್ನ ಎರಡೆರಡು ಬಾರಿ ಯೋಚಿಸುವುದು ಉತ್ತಮ.