ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸೆ.1 – ಈ ರಾಶಿಯವರು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಿರಿ
Published 31 ಆಗಸ್ಟ್ 2023, 23:33 IST
ಪ್ರಜಾವಾಣಿ ವಿಶೇಷ
author
ಮೇಷ
ರಾಜಕೀಯದಲ್ಲಿ ಹೆಚ್ಚಿನ ಪ್ರಭಾವ ಹೊಂದಲು ರಾಜಕೀಯ ಧುರೀಣರ ಕೃಪಾಕಟಾಕ್ಷ ಪಡೆದುಕೊಳ್ಳ ಬೇಕಾಗುವುದು. ಮಗನಿಗೆ ಸದಸ್ಯತ್ವದ ಸಂಸ್ಥೆ ವತಿಯಿಂದ ವಿದೇಶದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು.
ವೃಷಭ
ನಿಮ್ಮ ವೃತ್ತಿಕ್ಷೇತ್ರದ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳನ್ನು ಹಿಡಿತಕ್ಕೆ ತೆಗೆದುಕೊಂಡು ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ. ವೃತ್ತಿ ಜೀವನದಲ್ಲಿ ಉತ್ತಮ ಸುಧಾರಣೆ ಕಂಡುಬರಲಿದೆ. ಉದ್ಯೋಗದಲ್ಲಿ ಅನಿಶ್ಚಿತತೆ ದೂರಾಗುವುದು.
ಮಿಥುನ
ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಸ್ವಂತವಾಗಿ ವ್ಯವಹಾರ ಮಾಡುವವರು, ವ್ಯಾಸಂಗದಲ್ಲಿ ವಿದ್ಯಾರ್ಥಿಗಳು ಪ್ರಗತಿ ಸಾಧಿಸುವರು.
ಕರ್ಕಾಟಕ
ತೆರೆಮರೆಯಲ್ಲಿ ನಡೆಯುತ್ತಿರುವ ನಿಮ್ಮ ವಿರುದ್ಧದ ಸಂಚನ್ನು, ರಾಜಕೀಯ ಚಟುವಟಿಕೆಗಳನ್ನು ಆಪ್ತರೊಬ್ಬರ ಮೂಲಕವಾಗಿ ತಿಳಿದುಕೊಳ್ಳುವಿರಿ. ಹೂಡಿಕೆ ವಿಚಾರದಲ್ಲಿ ಯೋಚಿಸಿ ನಿರ್ಧಾರ ಕೈಗೊಳ್ಳುವುದು ಉತ್ತಮ.
ಸಿಂಹ
ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ವಿಚಾರದಲ್ಲಿ ಎಂದಿಗೂ ಮರೆಯಲಾಗದ ಒಂದು ಕಹಿ ಘಟನೆ ನಡೆಯಬಹುದು. ಕಣ್ಣಿನ ದೃಷ್ಟಿ ದೋಷ ಸರಿಪಡಿಸಿಕೊಳ್ಳಲು ವೈದ್ಯರನ್ನು ಭೇಟಿಮಾಡಿ. ಮಕ್ಕಳ ತುಂಟತನದ ಬಗ್ಗೆ ಗಮನವಿರಲಿ.
ಕನ್ಯಾ
ಸೋದರರೊಡನೆ ಆಥವಾ ದಾಯಾದಿಗಳೊಡನೆ ಇದ್ದ ಕಲಹಗಳು ಈ ದಿನಾಂತ್ಯದಲ್ಲಿ ನಿರ್ಮೂಲವಾಗಿ ಶುಭವಾಗಲಿದೆ. ಷೇರು ವ್ಯವಹಾರದಲ್ಲಿ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತಾಗಲಿದೆ. ಅತಿಯಾದ ಆಲಸ್ಯ ನಿಮ್ಮನ್ನು ಕಾಡಲಿದೆ
ತುಲಾ
ಗುರುವಿನ ಮಾರ್ಗದರ್ಶನದಂತೆ ನಡೆಯುವ ಈ ದಿನದ ಕೆಲಸದಲ್ಲಿ ಸರ್ವತೋಮುಖವಾದ ಅಭಿವೃದ್ಧಿ ಹೊಂದುವಿರಿ. ರಿಯಲ್ ಎಸ್ಟೇಟ್ ವ್ಯವಹಾರಗಳ ಸಮಸ್ಯೆಯನ್ನು ನಿವಾರಿಸಿಕೊಂಡು, ವರಮಾನ ಹೆಚ್ಚಿಸಿಕೊಳ್ಳುವಿರಿ.
ವೃಶ್ಚಿಕ
ಮನಸ್ಸು ಧ್ಯಾನದತ್ತ ಹರಿಯಲು ಧಾರ್ಮಿಕ ವಿಚಾರಧಾರೆಯಂತಹ ಸಮಾರಂಭಗಳ ಆಲಿಕೆಯು ಕಾರಣವಾಗುವುದು. ವಕೀಲೀ ವೃತ್ತಿಯನ್ನು ಅಭ್ಯಾಸಿಸುವವರಿಗೆ ಪಾಪ-ಪ್ರಜ್ಞೆಯು ಕಾಡಲಿದೆ. ಪಿತ್ರಾರ್ಜಿತ ಆಸ್ತಿ ಕೈಸೇರಲಿದೆ.
ಧನು
ಪ್ರಭಾವಿತ ವ್ಯಕ್ತಿಗಳಿಂದ ಸಿಕ್ಕ ಸಹಕಾರ ಈ ಸಮಯದಲ್ಲಿ ಸಹಾಯಕ್ಕೆ ಬರಲಿದೆ. ವಿರೋಧಿಗಳು ರಾಜಿಯಾಗಲು ಬರುವಂಥ ಸನ್ನಿವೇಶಗಳು ನಡೆಯಬಹುದು. ಪತ್ನಿಯ ಆರೋಗ್ಯವು ಸುಧಾರಿಸುವುದು.
ಮಕರ
ಯೋಜನೆಗಳು ಹಾಗೂ ಅವುಗಳ ಬೆಳವಣಿಗೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ದಿನವಿಡೀ ಚರ್ಚಿಸಿದರೂ ತೀರ್ಮಾನಕ್ಕೆ ಬರುವುದು ಕಷ್ಟಕರ ವಿಚಾರ. ಮೇಲಧಿಕಾರಿಗಳಿಂದ ನೀವು ಅಪೇಕ್ಷಿಸುವ ಸಹಕಾರಗಳು ದೊರೆಯಲಿದೆ.
ಕುಂಭ
ವಿದೇಶಿ ವ್ಯವಹಾರಗಳು ಈ ದಿನ ಕೈಗೂಡಲಿದೆ. ಕಲಾವಿದರಿಗೆ ಹಾಗೂ ನಟ ನಟಿಯರಿಗೆ ಉತ್ತಮ ಅವಕಾಶಗಳು ಒದಗಿ ಬರುವುದು. ಸರ್ಕಾರಿ ನೌಕರರಿಗೆ ನಾನಾ ರೀತಿಯಲ್ಲಿ ಅಡ್ಡಿ- ಆತಂಕಗಳು ಕಾಡಬಹುದು.
ಮೀನ
ಬಹಳ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿರುವವರಿಗೆ ಔಷಧಿಯು ಪ್ರತಿಕ್ರಿಯಿಸಿ ಚೇತರಿಕೆಯ ಹಂತಕ್ಕೆ ಹೋಗುವಿರಿ. ಉದ್ಯೋಗಾಕಾಂಕ್ಷಿಗಳಿಗೆ ವಿದ್ಯಾರ್ಹತೆಗೆ ಸರಿಯಾದ ಕೆಲಸಗಳು ದೊರಕುವಲ್ಲಿ ವ್ಯತ್ಯಾಸಗಳಾಗಬಹುದು.