ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಮೇಲಾಧಿಕಾರಿಗಳು ಕೆಲಸಗಳಲ್ಲಿ ಸಹಕಾರ ನೀಡುತ್ತಾರೆ
Published 15 ಜೂನ್ 2024, 23:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ಆತ್ಮ ವಿಶ್ವಾಸವನ್ನು ರೂಢಿಸಿಕೊಂಡು ಪರಿಶ್ರಮದಿಂದ ಪ್ರಗತಿಯ ಹಾದಿಗೆ ಗಮನಹರಿಸಿ. ನಿಮ್ಮ ತೀವ್ರ ಪ್ರತಿಸ್ಪರ್ಧಿಯನ್ನು ಭೇಟಿ ಮಾಡುವ ಅವಕಾಶ ಬರಲಿದೆ. ವ್ಯಾಪಾರದಲ್ಲಿ ಮೋಸ ಹೋಗದೆ ಬುದ್ಧಿವಂತಿಕೆ ತೋರಿ.
ವೃಷಭ
ಅಡುಗೆ ಕೆಲಸ ಮಾಡುವವರಿಗೆ ಈ ದಿನ ಹೆಚ್ಚಿನ ಕೆಲಸ, ಬೇಡಿಕೆ ಹಾಗೂ ಲಾಭವಿರುವುದು. ಕುಟುಂಬದ ಸದಸ್ಯರ ಮಾತುಗಳನ್ನು ತಾಳ್ಮೆಯಿಂದ ಕೇಳಿರಿ. ಮಂದಿರದ ಭೇಟಿ ಹಾಗೂ ದೇವರ ದರ್ಶನವನ್ನು ಮಾಡುವಿರಿ.
ಮಿಥುನ
ವಿವಾಹ ವಯಸ್ಕ ಮಗಳಿಗೆ ಅನುರೂಪ ವರ ದೊರೆತು ನೆಮ್ಮದಿ ಕಂಡು ಬರುವುದು. ನಿಮ್ಮ ಮನೋಭಿಲಾಷೆಯನ್ನು ಸಿದ್ಧಿಸಿಕೊಳ್ಳಲಿಕ್ಕಾಗಿ ಇತರರಿಗೆ ಮಾರಕವಾಗುವ ಮಾರ್ಗವನ್ನು ಆರಿಸಿಕೊಳ್ಳಬೇಡಿ.
ಕರ್ಕಾಟಕ
ಸ್ಟೇಷನರಿ ಹೋಲ್‌ಸೇಲ್ ವ್ಯಾಪಾರಿಗಳು ವ್ಯಾಪಾರ ವಿಸ್ತರಿಸುವ ಬಗ್ಗೆ ಮಾತುಕತೆ ನಡೆಸಿ. ನೀವು ಅಪೇಕ್ಷೆಪಟ್ಟಿದ್ದ ಹೊಸ ಉದ್ಯೋಗವನ್ನು ಸಂಪಾದಿಸುವಲ್ಲಿ ರಾಜಕೀಯ ವ್ಯಕ್ತಿಗಳ ಮೂಲಕ ಯಶಸ್ಸು ಗಳಿಸುವಿರಿ.
ಸಿಂಹ
ನಿಮ್ಮ ಬದುಕನ್ನು ಒಂದು ವ್ಯವಸ್ಥೆಗೆ ತರಲು ದಿನದ ಅಲ್ಪ ಸಮಯವನ್ನು ಮೀಸಲಿಡಿ. ಕುಟುಂಬ ನಿರ್ವಹಣೆಗೆ ಒಡಹುಟ್ಟಿದವರಿಂದ ಕೊಡುಗೆ ಅಪಾರವಾಗಿರಲಿದೆ. ಆರೋಗ್ಯದ ಮೇಲೆ ವಿಶೇಷ ಗಮನವಿಡಿ.
ಕನ್ಯಾ
ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ಚಂಚಲ ಮನಸ್ಸು ಅಡ್ಡಿಮಾಡುವುದು. ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಇರುವುದು. ಹವ್ಯಾಸಗಳಲ್ಲಿ ತೊಡಗುವುದಕ್ಕೆ ಸಮಯ ಸಿಗುವುದು.
ತುಲಾ
ಮೇಲಾಧಿಕಾರಿಗಳು ಹಾಗೂ ಹಿರಿಯರು ಕೆಲಸಗಳಲ್ಲಿ ನಿಮಗೆ ಸಹಕಾರ ನೀಡುತ್ತಾರೆ. ಮೇಲಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳಲು ನಿಮ್ಮ ಇಚ್ಛೆಗೆ ಬಿಡುವರು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ವೃಶ್ಚಿಕ
ನಿಮ್ಮ ಯೋಜನೆಗಳು ಕಾರ್ಯಗತಗೊಳ್ಳಲು ಹೆಚ್ಚಿನ ಪ್ರಯತ್ನ ನಡೆಸಬೇಕಾಗುವುದು. ಮಹಾ ಗಣಪತಿಯ ಮೊರೆ ಹೋಗುವುದರಿಂದ ಕಾರ್ಯ ಸಿದ್ಧಿಯಾಗಲಿದೆ. ಕೈತಪ್ಪಿ ಹೋದ ಹಣ ಪುನಃ ಕೈ ಸೇರುವುದು.
ಧನು
ಬಾಲ್ಯದಲ್ಲಿ ಕಲಿತ ಅಥವಾ ತಿಳಿದುಕೊಂಡಿದ್ದ ಕೆಲ ಇತರೆ ವಿಷಯಗಳು ವೃತ್ತಿಪರವಾಗಿ ಇಂದು ನಿಮಗೆ ಉಪಯೋಗಕ್ಕೆ ಬರಲಿದೆ. ಬಂಧುಗಳು ಮತ್ತು ಸ್ನೇಹಿತರಿಂದ ಮಾರ್ಗದರ್ಶನಕ್ಕೇನು ಕೊರತೆ ಇರದು.
ಮಕರ
ದಾಂಪತ್ಯದಲ್ಲಿ ಅನ್ಯೋನ್ಯತೆ ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಯಾಗಿರುತ್ತದೆ. ವ್ಯವಹಾರದಲ್ಲಿ ತಪ್ಪುಗಳಾಗದಂತೆ ಜಾಗರೂಕತೆ ವಹಿಸಿರಿ. ತಂದೆ– ತಾಯಿಯ ಆರೋಗ್ಯದಲ್ಲಿ ಸಣ್ಣ-ಪುಟ್ಟ ಬದಲಾವಣೆಯಾಗಲಿದೆ.
ಕುಂಭ
ರುಚಿ ಭೋಜನದ ಹೆಸರಿನಲ್ಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆಹಾರವನ್ನು ಸೇವಿಸದಿರಿ. ಇಂದು ಮಕ್ಕಳಿಂದ ಅಚ್ಚರಿಯ ಸುದ್ದಿಯೊಂದನ್ನು ಕೇಳುವಿರಿ. ಮಕ್ಕಳ ಆರೋಗ್ಯದ ಕಡೆ ಗಮನ ಹರಸಿ.
ಮೀನ
ನೀವು ಗಳಿಸಿದ ಸಂಪಾದನೆಯಲ್ಲಿ ತೃಪ್ತಿ ಹೊಂದುವುದು ಅತ್ಯಂತ ಮುಖ್ಯವಾದ ವಿಚಾರವಾಗಿರುತ್ತದೆ. ಕರಕುಶಲ ವಸ್ತುಗಳ ತಯಾರಕರು ತಮ್ಮ ಉತ್ತಮವಾದ ಕೆಲಸಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು.