ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: 20 ಜುಲೈ 2023 – ಈ ರಾಶಿಯವರಿಗೆ ಕೃಷಿಗೆ ಕೀಟಗಳ ಬಾಧೆ ಇರಬಹುದು
Published 19 ಜುಲೈ 2023, 22:40 IST
​ಪ್ರಜಾವಾಣಿ ವಾರ್ತೆ
author
ಮೇಷ
ಪರಿಚಯಸ್ಥರ ಮಗಳಿಗೆ ಯೋಗ್ಯ ವರನನ್ನು ಹುಡುಕಿಕೊಡುವಿರಿ. ಮನೆಯಲ್ಲಿ ನೆಮ್ಮದಿ ಕಾಪಾಡುವ ಕಾರಣಕ್ಕಾಗಿ ಹಿರಿಯರನ್ನು ಸುಮ್ಮನಿರಿಸುವಂಥ ಕೆಲಸವನ್ನು ಮಾಡುವಿರಿ. ಮಗಳ ಮಾತಿಗೆ ಬೆಲೆ ಕೊಡಿ.
ವೃಷಭ
ನವದಂಪತಿ  ದೀರ್ಘ ಪ್ರಯಾಣದ ನಂತರ ಮನೆಗೆ ವಾಪಸಾಗುವಿರಿ. ನೂತನ ಸ್ಥಳದಲ್ಲಿ ಗೆಳೆಯರನ್ನುಸಂಪಾದಿಸುವಂಥ ಕೆಲಸವನ್ನು ಮಾಡುವಿರಿ.  ಎದುರಾಳಿಗಳನ್ನು ಮಾತಿನಲ್ಲಿ ಸುಲಭವಾಗಿ ಕಟ್ಟಿಹಾಕುವಿರಿ.
ಮಿಥುನ
ಮನೆಯಲ್ಲಿ ಹಲವು ಜನಗಳ ಅಕಾಂಕ್ಷೆಗಳನ್ನು ನೀವೇ ಪೂರೈಸಬೇಕಾದರು ಸಹ ನೆಮ್ಮದಿಯ ವಿಷಯವೇನೆಂದರೆ ಖರ್ಚಿಗೆ ತಕ್ಕಂತೆ ಧನಾಗಮನ ಇರುವುದರಿಂದ ಚಿಂತೆ ಇರದು. ಮಾರ್ಗದರ್ಶನ ಪಡೆಯುವಿರಿ.
ಕರ್ಕಾಟಕ
ವಿದೇಶಕ್ಕೆ ಹೋಗುವ ಅವಕಾಶಗಳನ್ನು ತಂದೆ ತಾಯಿಯರ ಹಿತಕ್ಕಾಗಿ ಹೋಗುವುದನ್ನು ನಿಲ್ಲಿಸುವಂತಾಗುವುದು. ಮುಂಬರುವ ಕಾರ್ಯಕ್ರಮ  ಆರ್ಥಿಕ ನಿರ್ವಹಣೆಗಾಗಿ ಕೆಲವು ಖರ್ಚು ನಿಲ್ಲಿಸುವಿರಿ.
ಸಿಂಹ
ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿ ಪ್ರಗತಿ ಕಂಡು ಬರುವುದು. ಅನಗತ್ಯವಾದ ಮಾತುಗಳಿಂದ ದೂರ ವಿರಿ. ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನವಾಗುವುದು. ಹೈನುಗಾರರಿಗೆ ಬೇಡಿಕೆ ಹೆಚ್ಚಲಿದೆ.
ಕನ್ಯಾ
ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯು ಇರಲಿದೆ. ಕುಟುಂಬದ ಕಿರಿಯ ಸೋದರನಿಗೆ ವಿವಾಹ ನಿಶ್ಚಯವಾಗುವುದು. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗದಿದ್ದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳಬೇಡಿ.
ತುಲಾ
ಸರ್ಕಾರಿ ಕೆಲಸಗಳು ಗುತ್ತಿಗೆಯಾಗಿ ಲಭಿಸುವುದರ ಜತೆಗೆ ಲಾಭದಾಯಕವಾಗಿಯೂ ಇರುತ್ತವೆ. ಕಲ್ಲುಹಾಗೂ ಕಬ್ಬಿಣದ ಕೆಲಸದಲ್ಲಿ ಜಾಗ್ರತರಾಗಿರಿ.  ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುವಿರಿ.
ವೃಶ್ಚಿಕ
ಸುತ್ತಲಿನ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಪರಿಗಣಿಸಿ ವ್ಯವಹರಿಸಿ.  ಭಾವನೆಗಳ ಬಗ್ಗೆಪ್ರಾಮಾಣಿಕರಾಗಿರಿ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿದೆ. ಕೃಷಿಗೆ ಕೀಟಗಳ ಬಾಧೆ ಇರಬಹುದು.
ಧನು
ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಿರಿ. ದೀರ್ಘಕಾಲಿಕ ಕೆಲಸಗಳು ನಿಧಾನವಾಗಿ ಸಾಗಲಿವೆ. ಇಂದು ಲಕ್ಷ್ಮಿ ಸಮೇತನಾದ ವೇಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಶುಭವಾಗುತ್ತದೆ.
ಮಕರ
ಸಂಶೋಧನೆಯ ಕೆಲಸಗಳು ಉತ್ತಮ  ಫಲಿತಾಂಶವನ್ನು ಕಾಣಲಿದೆ. ಯಾವ ಕೆಲಸದಲ್ಲೂ ಅಡೆ ತಡೆ ಗಳೇನೂ ಇರದು. ಬಾಕಿ ಇರಿಸಿದ ವ್ಯವಹಾರವು ಪೂರ್ಣಗೊಳ್ಳುವುದು. ದೂರ ಪ್ರಯಾಣ ಮಾಡಬೇಕಾಗುವುದು.
ಕುಂಭ
ರಾಜಕೀಯ ವ್ಯಕ್ತಿಗಳು ಜನರಲ್ಲಿ ತಾಳ್ಮೆಯಿಂದ ವ್ಯರ್ತಿಸಿ. ಹೊಸ ಕೆಲಸ ಪ್ರಾರಂಭ ಮಾಡಾಬೇಕಾದಾಗಸೂಕ್ತ ಮಾರ್ಗದರ್ಶನ ತೆಗೆದುಕೊಳ್ಳುವುದು ಉತ್ತಮ. ಉದ್ಯೋಗದಲ್ಲಿ ಬದಲಾವಣೆ ಕಂಡುಬರಲಿದೆ.
ಮೀನ
ಇತರರೊಂದಿಗೆ ಜೊತೆಗೂಡಿ ಕೆಲಸ ಮಾಡುವುದು, ನಾಲ್ಕಾರು ಜನರ ಜೊತೆಯಲ್ಲಿ ಬೆರೆಯುವುದನ್ನುಅಭ್ಯಾಸ ಮಾಡಿಕೊಳ್ಳಿ. ಗುಪ್ತಚರದಳ ಮಂದಿಗೆ ಕಾರ್ಯಭಾರ ಹೆಚ್ಚಲಿದೆ. ಕೋರ್ಟಿನ ವಿಚಾರದಲ್ಲಿ ಜಯಲಭಿಸಲಿದೆ.