ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ವೃತ್ತಿಯಲ್ಲಿ ಅಪೂರ್ವ ಅವಕಾಶಗಳು ದೊರೆಯಲಿದೆ
Published 20 ಮಾರ್ಚ್ 2024, 23:20 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ : ಮೋಸ ಮಾಡುವ ಬುದ್ಧಿ, ಅನ್ಯಾಯ ಮಾಡುವ ಯೋಚನೆಗಳನ್ನು ಕಡಿಮೆ ಮಾಡಿಕೊಳ್ಳಿ. ಹಣದ ವಿಚಾರದಲ್ಲಿ ಖರ್ಚು-ವೆಚ್ಚಗಳ ವಿಷಯದಲ್ಲಿ ಜಾಗ್ರತೆ ಇರಲಿ. ರಾಜಕೀಯ ವಿದ್ಯಮಾನಗಳಿಂದ ಓಡಾಟ ಆಧಿಕಗೊಳ್ಳುವುದು.
ವೃಷಭ
ವೃಷಭ: ಮುಂಜಾನೆ ಏಳುವಾಗಲೇ ನೀವು ಉತ್ಸಾಹಿಗಳಾಗಿರುತ್ತೀರಿ. ಸಂತಸ ಭರಿತ ಒಂದು ಸುದ್ದಿ ನಿಮ್ಮನ್ನು ತಲುಪುತ್ತದೆ. ಯಾವ ಕೆಲಸದಲ್ಲೂ ನಿರ್ಲಕ್ಷ್ಯ ತೋರದಿರಿ. ಹೊಸದಾಗಿ ಹಣ ಹೂಡಿಕೆ ಮಾಡಬೇಕಾದರೆ ಪರಿಶೀಲನೆ ಅಗತ್ಯ.
ಮಿಥುನ
ಮಿಥುನ: ಮನೆಯ ವಿಸ್ತರಣೆ ವಿಷಯವಾಗಿ ಉತ್ತಮ ಆಲೋಚನೆಗಳು ಗರಿಗೆದರಲಿವೆ. ಸಹಾಯಕ ದರ್ಜೆಯವರಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ಮಲ್ಲಿಕಾರ್ಜುನನ ಆರಾಧನೆ ಮಾಡುವುದರಿಂದ ಶುಭ .
ಕರ್ಕಾಟಕ
ಕರ್ಕಾಟಕ: ಆಶಾವಾದ ಮತ್ತು ಧನಾತ್ಮಕ ವರ್ತನೆಯ ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತದೆ. ಎಲ್ಲಾ ಕಿರಿ ಕಿರಿಗಳನ್ನೂ ಶಾಂತ ರೀತಿಯಿಂದ ಎದುರಿಸಿ. ಮಾನಸಿಕಪೀಡೆಗಳಿಗೆ ಒಳಗಾಗದಂತೆ ಕಾಳಜಿವಹಿಸಿ.
ಸಿಂಹ
ಸಿಂಹ: ವೃತ್ತಿ ಬದುಕಿನಲ್ಲಿ ಅಪೂರ್ವ ಅವಕಾಶಗಳು ನಿಮ್ಮದಾಗಲಿವೆ. ವ್ಯಾಪಾರದಲ್ಲಿ ಸ್ಫರ್ಧಾತ್ಮಕ ರೀತಿಯ ವಾತಾವರಣ ಇರುತ್ತದೆ. ವಿದೇಶದಿಂದ ಮಗನ ಆಗಮನದ ಸುದ್ದಿ ಸಂತೋಷ ತರುವುದು.
ಕನ್ಯಾ
ಕನ್ಯಾ: ಗಂಭೀರ ಹಂತದಲ್ಲಿರುವ ವೈಯಕ್ತಿಕ ಹಾಗೂ ಔದ್ಯೋಗಿಕ ಸಂಬಂಧ ಗಳನ್ನು ಸರಿಗೊಳಿಸುವ ಪ್ರಯತ್ನವನ್ನು ನಡೆಸಬಹುದು. ಹಿಂದೆಂದೂ ಮಾಡದ ಅಪರೂಪದ ಕೆಲಸಗಳನ್ನು ಈಗ ಮಾಡಬೇಕಾಗುವುದು.
ತುಲಾ
ತುಲಾ : ಎಂಜಿನಿಯರಿಂಗ್ ಶಿಕ್ಷಣದಲ್ಲಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ತೋರಿರುವುದರಿಂದ ವಿದೇಶಕ್ಕೆ ತೆರಳುವ ಸಂಭವ. ಮನೆಗೆ ಬಂಧುಗಳ ಆಗಮನವಿರುವುದು. ಶ್ರಮಕ್ಕೆ ತಕ್ಕ ಧನ ಸಂಪಾದನೆ ಹೆಚ್ಚುವುದು.
ವೃಶ್ಚಿಕ
ವೃಶ್ಚಿಕ: ಕ್ರೀಡಾಪಟುಗಳಿಗೆ, ಸಂಗೀತಗಾರರಿಗೆ ಸಾಧನೆಯ ಅವಕಾಶ ಸಿಕ್ಕಿ ದರೂ ಅನಾರೋಗ್ಯ ಎದುರಾಗಬಹುದು. ಶುಭ ಕಾರ್ಯಗಳು ಕೈಗೂಡಿದ್ದು ಜವಾಬ್ದಾರಿ ಹೆಚ್ಚಲಿದೆ. ಸರ್ವತೋಮುಖ ಪ್ರಗತಿಯಿಂದ ಹರ್ಷವಿರುವುದು.
ಧನು
ವೃಶ್ಚಿಕ: ಕ್ರೀಡಾಪಟುಗಳಿಗೆ, ಸಂಗೀತಗಾರರಿಗೆ ಸಾಧನೆಯ ಅವಕಾಶ ಸಿಕ್ಕಿ ದರೂ ಅನಾರೋಗ್ಯ ಎದುರಾಗಬಹುದು. ಶುಭ ಕಾರ್ಯಗಳು ಕೈಗೂಡಿದ್ದು ಜವಾಬ್ದಾರಿ ಹೆಚ್ಚಲಿದೆ. ಸರ್ವತೋಮುಖ ಪ್ರಗತಿಯಿಂದ ಹರ್ಷವಿರುವುದು.
ಮಕರ
ಮಕರ: ವಕೀಲೀ ವೃತ್ತಿ ನಡೆಸುವವರಿಗೆ, ನ್ಯಾಯಾಂಗ ಇಲಾಖೆಯವರಿಗೆ ಉತ್ತಮ ದಿನ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದು ಅನಿವಾರ್ಯ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಯಶಸ್ಸು ಲಭ್ಯವಾಗಲಿದೆ.
ಕುಂಭ
ಕುಂಭ: ಕೆಲವು ಬಾರಿ ಆತಂಕ ಎದುರಾಗುವ ಸಾಧ್ಯತೆ ಇರುತ್ತದೆ. ಆದರೂ ಜೀವನದಲ್ಲಿ ಸೋಮಾರಿತನವನ್ನು ದೂರ ಮಾಡಿದರೆ, ಯೋಗ್ಯತೆಗೆ ಮೀರಿದ ಕೆಲಸಕಾರ್ಯಗಳಿಗೆ ಕೈಹಾಕಿದರೂ ಸಮಸ್ಯೆ ಆಗದು. ಗಮನವಿರಲಿ.
ಮೀನ
ಮೀನ: ಸ್ಪಷ್ಟ ನಿರ್ಧಾರವನ್ನು ಮಾಡಿದ ವಿಚಾರವನ್ನು ಮತ್ತೊಮ್ಮೆ ಯೋಚಿಸಲು ಅವಕಾಶಗಳು ಒದಗಿಬರುತ್ತದೆ. ಕುಟುಂಬ ವರ್ಗದಲ್ಲಿ ಆರೋಗ್ಯ ಉತ್ತಮವಾಗಿ ಇರುವುದು. ಈ ದಿನ ಅಪವಾದಗಳು ದೂರವಾಗಲಿವೆ.