ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಹವ್ಯಾಸಿ ಉಪನ್ಯಾಸಕರಿಗೆ ಹೇರಳ ಅವಕಾಶ ಲಭ್ಯವಾಗುತ್ತದೆ
Published 30 ಮೇ 2024, 0:07 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಶತ್ರುಗಳ ಪ್ರಾಬಲ್ಯವನ್ನು ಬುದ್ಧಿಯಿಂದ ಮಟ್ಟ ಹಾಕುವ ಸಮಯ ಇದಾಗಲಿದೆ. ರಹಸ್ಯವಾಗಿ ಸಿಗುವ ಬೆಂಬಲದಿಂದ ಕನಸುಗಳು ನನಸಾಗಲಿವೆ. ಹವ್ಯಾಸಿ ಉಪನ್ಯಾಸಕರಿಗೆ ಹೇರಳ ಅವಕಾಶ ಲಭ್ಯವಾಗುತ್ತದೆ.
ವೃಷಭ
ವೃಷಭ: ಯೋಜಿತ ಕೆಲಸ ಕಾರ್ಯಗಳನ್ನು ಕಾರ್ಯರೂಪಕ್ಕೆ ತರಲು ಪರಿಶ್ರಮ ಅಗತ್ಯವಿದೆ. ಸಾಧಿಸಲೇಬೇಕೆಂದಿರುವ ನಿಮಗೆ ಆತ್ಮವಿಶ್ವಾಸದ ಕೊರತೆಯಂತೂ ಕಾಣಿಸದು. ಜೀವನದ ಹಾದಿ ಬದಲಾಗುವುದನ್ನು ಕಾಣುವಿರಿ.
ಮಿಥುನ
ಮಿಥುನ: ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ಕಾರ್ಯವೈಖರಿ ಯಿಂದ ಅನುಭವಕ್ಕೆ ಬರುತ್ತದೆ. ಅಡುಗೆಯಲ್ಲಿ ಉಂಟಾದ ವ್ಯತ್ಯಾಸದಿಂದ ಅಸಮಾಧಾನ ಉಂಟಾಗಬಹುದು. ಸೇವಾ ಸಂಸ್ಥೆಯವರಿಗೆ ಅನುಕೂಲ.
ಕರ್ಕಾಟಕ
ಕರ್ಕಾಟಕ: ರಾಜಕೀಯ ವರ್ಗದವರು ಸಾರ್ವಜನಿಕರ ಮನ್ನಣೆ ಪಡೆದುಕೊಂಡು ಉತ್ತಮ ಶುಭ ಫಲಗಳನ್ನು ಅನುಭವಿಸುವ ನಿರೀಕ್ಷೆ ಮಾಡಬಹುದು. ಸಿದ್ಧ ಉಡುಪಗಳ ರಫ್ತು ವ್ಯಾಪಾರದಿಂದ ಲಾಭ ಸಿಗುತ್ತದೆ.
ಸಿಂಹ
ಸಿಂಹ: ಮನೆ ಕೊಳ್ಳುವ ವಿಷಯದ ಬಗ್ಗೆ ಮನೆಯವರಿಂದ ಹೆಚ್ಚಿನ ಮಾಹಿತಿ ಪಡೆಯುವಿರಿ. ಕುಟುಂಬದ ಸದಸ್ಯರ ಸಹಕಾರ ಸಂತಸ ಉಂಟುಮಾಡುತ್ತದೆ. ಬರವಣಿಗೆಯ ಹವ್ಯಾಸಗಳಿಂದ ವರಮಾನ ಹೆಚ್ಚಲಿದೆ.
ಕನ್ಯಾ
ಕನ್ಯಾ: ಅಭಿರುಚಿಗೆ ಹೊಂದುವಂಥ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳುವಿರಿ. ಎದುರಾದ ವ್ಯಕ್ತಿಗಳನ್ನು ಸರಿಯಾಗಿ ಮಾತನಾಡಿಸುವ ಪ್ರವೃತ್ತಿ ಬೆಳೆಸಿಕೊಳ್ಳುವುದು ಉತ್ತಮ. ಕೋರ್ಟು ವ್ಯವಹಾರಗಳಿಗೆ ಓಡಾಟ ತಪ್ಪಲಿದೆ.
ತುಲಾ
ತುಲಾ: ಮಸಾಲೆ ಪದಾರ್ಥ ಅಥವಾ ಖಾದ್ಯ ವಸ್ತುಗಳ ಮಾರಾಟ ಮಾಡುವವರು ನೆಮ್ಮದಿ ಕಾಣಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿನ ಆಸಕ್ತಿಗೆ ಇತರ ಜವಾಬ್ದಾರಿಗಳ ಮೋಡ ಮುಸುಕಿ ಗ್ರಹಣ ಬಂದಂತಾಗುವುದು.
ವೃಶ್ಚಿಕ
ವೃಶ್ಚಿಕ: ಶೈಕ್ಷಣಿಕ ರಂಗದಲ್ಲಿ ವೃತ್ತಿ ನಿರ್ವಹಿಸುವವರಿಗೆ ಪರಸ್ಪರ ವರ್ಗಾವಣೆ ಮಾಡಿಕೊಳ್ಳುವ ಅವಕಾಶ ಸಿಗುವುದು. ದೇಹಾರೋಗ್ಯದ ಬಗ್ಗೆ ಅದರಲ್ಲೂ ಉದರ ವ್ಯಾಧಿಯ ಬಗ್ಗೆ ಕಾಳಜಿ ವಹಿಸಬೇಕು. ಓದುವ ಹವ್ಯಾಸ ಬೆಳೆಸಿಕೊಳ್ಳಿ.
ಧನು
ಧನು: ಈ ದಿನ ಮಗಳ ಮದುವೆಯ ವಿಚಾರದಲ್ಲಿ ಇಡುವ ಹೆಜ್ಜೆ ಬಹಳ ಪ್ರಮುಖವಾದುದು. ಶಿಕ್ಷಕ ವೃತ್ತಿಯನ್ನು ಆರಂಭಿಸುವ ಬಗ್ಗೆ ಆಲೋಚಿಸಿದವರಿಗೆ ಶುಭ ದಿನ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತದೆ.
ಮಕರ
ಮಕರ:ಅವಮಾನಿಸಿದ ವ್ಯಕ್ತಿಗಳಿಂದ ಗೌರವ ಪಡೆಯುವಂಥ ಕಾಲವನ್ನು ನಿರೀಕ್ಷಿಸಬಹುದು. ವಿವಾಹ ಪ್ರಸ್ತಾಪಗಳು ಬಲಗೊಂಡು ಕಂಕಣ ಭಾಗ್ಯದ ಸಾಧ್ಯತೆ ಇದೆ. ಹೊಸ ವಸ್ತುಗಳ ಖರೀದಿ ಇಂದು ಬೇಡ.
ಕುಂಭ
ಕುಂಭ: ಆತ್ಮ ವಿಶ್ವಾಸದಿಂದ ಕೆಲಸಕಾರ್ಯಗಳಲ್ಲಿ ಅತಿ ಯಶಸ್ಸು ಹೊಂದುವಿರಿ. ಹಿರಿಯರ ಆರೋಗ್ಯ ಸುಧಾರಿಸುವುದರಿಂದ ಹೆಚ್ಚಿನ ಸಂತಸವಿರುವುದು. ಈ ದಿನ ನೀವು ಎಲ್ಲರೊಂದಿಗೆ ಮುಕ್ತವಾಗಿ ಬೆರೆಯಬೇಕು.
ಮೀನ
ಮೀನ: ಬೇರೆಯ ವ್ಯಕ್ತಿಯ ಕೆಲವು ವಸ್ತುಗಳು ಅರಿವಿಲ್ಲದಂತೆ ಮನೆಯನ್ನು ಸೇರುವ ಸಾಧ್ಯತೆ ಇದೆ. ಅಚಾತುರ್ಯದಿಂದ ಬಳಸಿದ ಔಷಧವು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟುಮಾಡುತ್ತದೆ.