ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ
Published 14 ಮಾರ್ಚ್ 2024, 23:39 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ದೊರೆಯುವ ಅವಕಾಶಗಳಿವೆ. ವ್ಯಕ್ತಿಯ ಮನಃ ಪರಿವರ್ತನೆ ಮಾಡುವ ವಿಚಾರದಲ್ಲಿ ಸಫಲ ರಾಗುತ್ತೀರಿ. ಹಣಕಾಸಿನ ಪರಿಸ್ಥಿತಿ ಉತ್ತಮ ಪಡಿಸಿಕೊಳ್ಳುವಿರಿ.
ವೃಷಭ
ಗಣ್ಯ ವ್ಯಕ್ತಿಗಳ ವೈಯಕ್ತಿಕ ಭೇಟಿಯಿಂದ ಸಹಚರರಲ್ಲಿ ಭಿನ್ನಾಭಿಪ್ರಾಯ. ಮೊಮ್ಮಕ್ಕಳ ಆಗಮನದಿಂದಾಗಿ ದೇಹಾಲಸ್ಯ ದೂರ. ನಿಮ್ಮ ವ್ಯವಹಾರ ಕ್ಷೇತ್ರಕ್ಕೆ ಸಂಬಂಧಿಸಿದ ರಕ್ಷಣಾ ದೇವತೆಯನ್ನು ಆರಾಧಿಸಿ.
ಮಿಥುನ
ಮನೆಯಲ್ಲಿ ವಿವಾಹ, ಗೃಹಪ್ರವೇಶದಂತಹ ಶುಭಕಾರ್ಯಗಳ ಪ್ರಸ್ತಾಪ ನೆರವೇರುವುದು. ಧಾರ್ಮಿಕವಾಗಿ ಹೆಚ್ಚಿನ ಏಕಾಗ್ರತೆ, ಧ್ಯಾನದಿಂದ ಮಾನಸಿಕವಾಗಿ ಸದೃಢರಾಗುವಿರಿ. ಅನಿರೀಕ್ಷಿತ ಧನಾಗಮನದಿಂದ ಸಂತಸ.
ಕರ್ಕಾಟಕ
ಅವಿವಾಹಿತರಿಗೆ ಮಾಂಗಲ್ಯ ಭಾಗ್ಯವಿದ್ದು ಮದುವೆಯ ಮಾತುಕತೆಗಳನ್ನು ನಡೆಸುವರು. ಕಾರ್ಯಕ್ಷೇತ್ರದಲ್ಲಿನ ನಷ್ಟ ಪ್ರಮಾಣ ಅಧಿಕವಾಗಿದ್ದರೂ, ಹೊಸ ಜವಾಬ್ದಾರಿಗಳು ನಿಮ್ಮನ್ನು ಅರಸಿ ಬರಲಿವೆ.
ಸಿಂಹ
ಈ ದಿನ ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿರುವವ ರಿಗೆ ನಿರೀಕ್ಷೆಗೂ ಮೀರಿದ ಸಂಪಾದನೆ ಉಂಟಾಗುವುದು. ಪ್ರೇಮಿಗಳಿಗೆ ಜೀವನವನ್ನು ನಿರ್ಣಯಿಸಲು ಉತ್ತಮ ಅವಕಾಶಗಳು ಈ ದಿನ ಬರಲಿವೆ.
ಕನ್ಯಾ
ಹಲವು ದಿನಗಳಿಂದ ಜೀವನದಲ್ಲಿ ಬೇಸರಗೊಂಡಿರುವ ನೀವು ಈ ದಿನದ ಅಂತ್ಯದಲ್ಲಿ ಮಾನಸಿಕವಾಗಿ ಸದೃಢರಾಗುವಿರಿ. ಉಳಿತಾಯದ ಹಣವನ್ನು ಮನೆ ನಿರ್ಮಾಣ ಕಾರ್ಯಗಳಿಗೆ ಬಳಸುವಿರಿ.
ತುಲಾ
ರಾಜಕೀಯ ವ್ಯವಹಾರಗಳ ಪ್ರಬಲಾಕಾಂಕ್ಷಿಯಾಗಿರುವ ನೀವು ಇನ್ನಷ್ಟು ಚುರುಕಾಗಬೇಕಾಗಿದೆ. ಈ ದಿನದ ಆಗು ಹೋಗುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗವಾಗುವುದು.
ವೃಶ್ಚಿಕ
ಮನಸ್ಸು ಸಿರಿತನದ ಜೀವನವನ್ನು ಇಷ್ಟ ಪಡಲಿದೆ. ಆದರೆ ಬುದ್ಧಿ ಸ್ಥಿಮಿತದಲ್ಲಿರಲಿ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಇಂದು ಸೂಕ್ತವಾದ ಕಾಲವಾಗಿರುತ್ತದೆ.
ಧನು
ಕಫ ವ್ಯಕ್ತಿಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸಾಂಸಾರಿಕವಾಗಿ ಇದ್ದಂತಹ ಹಲವು ಸಮಸ್ಯೆಗಳಿಗೆ ಪರಿಹಾರ ದೊರೆತು, ಮನಸ್ಸಿನ ಶಾಂತಿಯನ್ನು ಪಡೆಯುವಿರಿ.
ಮಕರ
ಪ್ರೀತಿ ಪಾತ್ರರೊಂದಿಗೆ ಇಂದು ಭವಿಷ್ಯದ ಯೋಜನೆಗಳ ಹಾಗೂ ನಿಮ್ಮ ಜೀವನದ ಗುರಿ ತಲುಪುವ ಬಗ್ಗೆ ಗಂಭೀರ ಚರ್ಚೆ ನಡೆಸುವಿರಿ ಹಾಗೂ ಪರಸ್ಪರ ಮನಸ್ಸು ಬಿಚ್ಚಿ ಮಾತನಾಡುವಿರಿ. ಹಾಡುಗಾರರಿಗೆ ಒಳ್ಳೆಯ ಅವಕಾಶ ಇದೆ.
ಕುಂಭ
ವಿದೇಶ ವ್ಯಾಸಂಗದ ಅಭಿಲಾಷಿಗಳಿಗೆ ಶುಭ ಸುದ್ದಿ ಕೇಳುವ ದಿನ ಇದಾಗಿದೆ. ಕ್ರೀಡಾಪಟುಗಳಿಗೆ ಪುರಸ್ಕಾರ, ಗೌರವಾಭಿನಂದನೆಗಳು ಪ್ರಾಪ್ತಿಯಾಗಲಿವೆ. ಆಲಂಕಾರಿಕ ವಸ್ತುಗಳ ಮಾರಾಟದಿಂದ ಹೆಚ್ಚು ಆದಾಯ ಗಳಿಕೆ.
ಮೀನ
ಕೇಟರಿಂಗ್ ಸೇವೆ ಮಾಡುವವರಿಗೆ ಅಧಿಕ ಲಾಭದ ಜೊತೆ ಸಂಪನ್ಮೂಲ ವ್ಯಕ್ತಿಗಳ ಬಳಕೆಯಾಗುವುದು. ಮಗನಿಂದ ಮನಸ್ಸಿಗೆ ನೋವಾಗುವಂತಹ ಘಟನೆ ನಡೆಯಬಹುದು. ಶ್ರೀ ರಾಮನಾಮ ಜಪವನ್ನು ಮಾಡಿ.