ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗಲಿದೆ
Published 4 ಜೂನ್ 2024, 0:27 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತನ ಸಹಾಯದಿಂದಾಗಿ ಹಲವು ವಿಚಾರಗಳಲ್ಲಿ ಪರಿಪೂರ್ಣತೆಯನ್ನು ಹೊಂದಲು ಸಾಧ್ಯ. ಹಲವು ನಿರೀಕ್ಷೆಗಳೊಂದಿಗೆ ಬಂಧುಗಳ ಮನೆಗೆ ಪ್ರಯಾಣ ಬೆಳೆಸುವಿರಿ. ಪ್ರಯಾಣದಲ್ಲಿ ಜಾಗ್ರತರಾಗಿರಿ.
ವೃಷಭ
ಇಷ್ಟು ದಿನದವರೆಗೂ ತೋರಲಾಗದ ನಿಜವಾದ ಸಾಮರ್ಥ್ಯವನ್ನು ಉತ್ತಮ ಅಭ್ಯಾಸದ ಮೂಲಕ ಪ್ರದರ್ಶಿಸುವಿರಿ. ಊರಿನ ಅಥವಾ ಪರ ಊರಿನ ಉತ್ಸವದಲ್ಲಿ ಭಾಗವಹಿಸಿ ಸಂತುಷ್ಟರಾಗುವಿರಿ.
ಮಿಥುನ
ಕುದುರೆ ಸಾಕುವುದರ ಜತೆಗೆ ಸವಾರಿಯನ್ನು ಮಾಡುವವರಿಗೆ ಉತ್ತಮ ಅವಕಾಶ ದೊರೆಯಲಿದೆ. ಗೋವುಗಳ ಪಾಲನೆಯಿಂದ ಪುಣ್ಯವು ಪ್ರಾಪ್ತಿಯಾಗುವುದು. ಗಾರ್ಮೆಂಟ್ಸ್ ನೌಕರರಿಗೆ ಹೆಚ್ಚಿನ ಕೆಲಸವಿರುವುದು.
ಕರ್ಕಾಟಕ
ಯಾವ ಒತ್ತಡಗಳಿಗೂ, ಯಾರ ದಬ್ಬಾಳಿಕೆಗೂ ಒಳಗಾಗದೆ ಸ್ವತಂತ್ರರಾಗಿರಲು ಬಯಸುವಿರಾದರೂ ಸಾಧ್ಯವಾಗುವುದಿಲ್ಲ. ಅಪೇಕ್ಷಿಸಿದ ಬೆಂಬಲ ದೊರೆಯಲಿದೆ. ಇತರರನ್ನು ತಿರಸ್ಕಾರದಿಂದ ನೋಡದಿರಿ.
ಸಿಂಹ
ವೃತ್ತಿಯಲ್ಲಿದ್ದ ಸ್ಪರ್ಧಾತ್ಮಕ ಪೈಪೋಟಿಯಲ್ಲಿ ಸಿಕ್ಕ ಗೆಲುವಿನಿಂದ ಹೆಚ್ಚಿನ ತೃಪ್ತಿ, ಸಂತೋಷ ಉಂಟಾಗಲಿದೆ. ಬಿಟ್ಟುಹೋದ ಸಂಬಂಧಗಳನ್ನು ಮತ್ತೆ ಬೆಳೆಸುವ ಬಗ್ಗೆ ನಿಮ್ಮ ಕುಟುಂಬದವರೊಂದಿಗೆ ಚರ್ಚಿಸುವಿರಿ.
ಕನ್ಯಾ
ಅನಗತ್ಯ ವಿಷಯಗಳಿಂದ ದೂರವಿರುವುದು ಯೋಜನೆಗಳನ್ನು ಗಂಭೀರವಾಗಿ ಪರಿಗಣಿಸಲು ಅನುಕೂಲವಾಗುವುದು. ಹರಿತ ವಸ್ತುಗಳಿಂದ ಸಣ್ಣ-ಪುಟ್ಟ ಗಾಯ ಆಗುವ ಸಾಧ್ಯತೆ ಇದೆ. ವೃತ್ತಿಯಲ್ಲಿ ನಿಷ್ಠರಾಗಿರಿ
ತುಲಾ
ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಸುತ್ತ ಮುತ್ತಲಿನ ವಾತಾವರಣವೂ ಧನಾತ್ಮಕವಾಗಿ ಬದಲಾವಣೆಯಾಗುವುದು. ರೈತರು ಉತ್ತಮ ತಳಿಯ ಬೆಳೆಯಿಂದ ಹೆಚ್ಚಿನ ಸಂತೋಷ ಹೊಂದುವರು.
ವೃಶ್ಚಿಕ
ಬಹಳ ದಿನಗಳಿಂದ ನಿರೀಕ್ಷಿಸಿದ ರೀತಿಯಲ್ಲಿ ಉದ್ಯೋಗ ಸಿಕ್ಕದಿದ್ದರೂ, ಸಣ್ಣ ಮಟ್ಟಿನ ಉದ್ಯೋಗ ಸಿಕ್ಕಿರುವುದು ಸಂತೋಷ ಪಡುವ ವಿಚಾರ. ಹಿಂದಿನ ಕೆಲಸ ಕಾರ್ಯ ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.
ಧನು
ಉದ್ಯೋಗದ ವಿಚಾರದ ಬಗ್ಗೆ ಹೆಚ್ಚಿನ ತರಬೇತಿ ಪಡೆದುಕೊಳ್ಳುವುದರಿಂದ ಬಡ್ತಿಯ ಬಗ್ಗೆ ಯೋಚಿಸಬಹುದು. ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿದೆ. ರಂಗೋಲಿ ಕಲಾವಿದರ ಬೇಡಿಕೆ, ಸ್ಥಾನಮಾನ ಹೆಚ್ಚುತ್ತದೆ.
ಮಕರ
ಮನೆಯಲ್ಲಿ ನಿಮ್ಮ ಮಾತಿನಿಂದ ಉಂಟಾದ ಬಿಗು ವಾತಾವರಣ ದಿನದ ಅಂತ್ಯದ ಸಮಯದಲ್ಲಿ ತಿಳಿಯಾಗಿ ಮನಸ್ಸಿಗೆ ಸಮಾಧಾನ ಉಂಟಾಗುವುದು. ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ
ಕುಂಭ
ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ನಿಮಗೆ ಪ್ರತಿ ಬಾರಿಯ ಶುಭಕಾರ್ಯಗಳು ತಪ್ಪಿ ಹೋಗುವುದನ್ನು ಸಹಿಸಲಾರದೆ ದುಃಖಿತರಾಗುತ್ತೀರಿ. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗಲಿದೆ.
ಮೀನ
ಕಾರ್ಯ ವೈಖರಿಯನ್ನು ನೋಡಿದ ಕೆಲವರು ಮತ್ಸರ ಪಡುವಂತಾಗುತ್ತದೆ. ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಕೆಲಸದ ಅಧಿಕ ಒತ್ತಡದಿಂದ ಬೆನ್ನು ನೋವು ಕಾಡಬಹುದು.