ದಿನ ಭವಿಷ್ಯ: ಈ ರಾಶಿಯವರಿಗೆ ವಾಹನದಿಂದ ಪೆಟ್ಟಾಗುವ ಸಾಧ್ಯತೆ ಇದೆ; ಎಚ್ಚರವಿರಲಿ
Published 4 ಫೆಬ್ರುವರಿ 2026, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೆಗೆದುಕೊಂಡಿರುವ ನಿರ್ಧಾರ ಸರಿಯಾದುದೆಂದು ಮನವರಿಕೆಯಾಗುವುದು. ತಾರ್ಕಿಕ ಹಾದಿಯಲ್ಲಿ ಬರುವ ಭಾವನಾತ್ಮಕ ಆಲೋಚನೆಗಳನ್ನು ಬದಿಗೆ ಸರಿಸಿ. ವಿದ್ಯಾರ್ಥಿಗಳಿಗೆ ಪರಿಶ್ರಮ ಅಗತ್ಯವಾಗುವುದು.
04 ಫೆಬ್ರುವರಿ 2026, 18:30 IST
ವೃಷಭ
ಇಂದಿನ ಕಾರ್ಯ ವೈಖರಿ ಸ್ವಲ್ಪ ಬದಲಿಸಿ ಹೊಸ ಕೆಲಸ ಮಾಡಿದರೆ ವಿಶಿಷ್ಟವಾದ ಜಯ ಕಾಣುವಿರಿ. ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ.
04 ಫೆಬ್ರುವರಿ 2026, 18:30 IST
ಮಿಥುನ
ಸರ್ಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಳ್ಳಲು ಸ್ವಲ್ಪ ಹಣ ಖರ್ಚು ಮಾಡಿದರೆ ಸಾಧ್ಯವಿದೆ. ವಯಸ್ಸಾದ ತಂದೆ-ತಾಯಿಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
04 ಫೆಬ್ರುವರಿ 2026, 18:30 IST
ಕರ್ಕಾಟಕ
ಅಧಿಕ ಒತ್ತಡದ ಕೆಲಸದ ನಡುವೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಿರಿ. ಸಂಬಂಧಿಕರ ಆಗಮನದಿಂದ ಸಂತೋಷ ಆಗುವುದು. ವಾಹನದಿಂದ ಕೈ ಕಾಲಿಗೆ ಪೆಟ್ಟಾಗುವ ಸಾಧ್ಯತೆ ಇರುವುದರಿಂದ ಎಚ್ಚರವಿರಲಿ.
04 ಫೆಬ್ರುವರಿ 2026, 18:30 IST
ಸಿಂಹ
ಈಗಿನ ಕಾಲ ಘಟ್ಟಕ್ಕೆ ಸರಿಯಾದ ಸಮಾನ ಸ್ಥಾನಮಾನಗಳು ದೊರಕುವ ಬಗ್ಗೆ ಪ್ರಯತ್ನವಿರಲಿ. ಎಲ್ಲಾ ಕೆಲಸಗಳನ್ನು ಅತೀವ ಒತ್ತಡದ ನಡುವೆ ಮಾಡುವಂತೆ ಆಗುವುದು. ಮಾತುಗಳು ಯಾರ ಮನಸ್ಸನ್ನೂ ನೋಯಿಸದಿರಲಿ.
04 ಫೆಬ್ರುವರಿ 2026, 18:30 IST
ಕನ್ಯಾ
ವೃತ್ತಿ ಬದುಕಿನಲ್ಲಿ ತಪ್ಪುಗಳು ನಡೆಯುವ ಸಂಭವ ಹೆಚ್ಚಿರುವುದರಿಂದ ಜಾಗರೂಕತೆ ವಹಿಸಬೇಕಾಗುತ್ತದೆ. ಆಟೋಟಗಳಲ್ಲಿ ಹಿಂದಿನಕ್ಕಿಂತ ಉತ್ತಮ ಪ್ರದರ್ಶನ ತೋರುವಿರಿ. ಆತ್ಮೀಯರಿಂದ ವ್ಯವಹಾರದಲ್ಲಿ ಲಾಭ.
04 ಫೆಬ್ರುವರಿ 2026, 18:30 IST
ತುಲಾ
ಕೆಲವೊಂದು ಸಮಾರಂಭದಲ್ಲಿ ಹಾಜರಿಯು ವಿಶೇಷವಾದ ಕಳೆ ತರುವುದು. ಸಂಬಂಧಿಗಳೊಂದಿಗೆ ವಾದವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿ. ಧ್ಯೇಯಗಳನ್ನು ಪಸರಿಸುವ ಕೆಲಸವನ್ನು ಮಾಡುವಿರಿ.
04 ಫೆಬ್ರುವರಿ 2026, 18:30 IST
ವೃಶ್ಚಿಕ
ರಚನಾತ್ಮಕ ಕಾರ್ಯಕ್ರಮಗಳ ಕುರಿತು ದೂರದರ್ಶನ ಮಾಧ್ಯಮದವರಿಂದ ಮೆಚ್ಚುಗೆಯ ಮಾತು ಕೇಳಲಿದ್ದೀರಿ. ಕೆಲಸಕ್ಕೆ ಸಂಬಂಧ ಪಟ್ಟ ಹಾಗೆ ದೂರದ ಊರಿನ ಪ್ರವಾಸ ಮಾಡುವ ಸಾಧ್ಯತೆಗಳಿರಬಹುದು.
04 ಫೆಬ್ರುವರಿ 2026, 18:30 IST
ಧನು
ಕಠಿಣ ಶ್ರಮದ ಫಲವಾಗಿ ಬಯಸಿದ ಸಂತೋಷದ ಜತೆಗೆ ಹೊಸ ಅನುಭವದ ಲಾಭ ನಿಮ್ಮದಾಗಲಿದೆ. ವೈದ್ಯರಿಗೆ ಬಿಡುವಿಲ್ಲದ ಅಭ್ಯಾಸದ ಜೊತೆಗೆ ಉನ್ನತ ಜವಾಬ್ದಾರಿ ಸ್ಥಾನಕ್ಕೆ ವರ್ಗಾವಣೆಯಾಗುವುದು.
04 ಫೆಬ್ರುವರಿ 2026, 18:30 IST
ಮಕರ
ಸಾಂಸಾರಿಕವಾಗಿ ಸದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಹೋಗುವುದೇ ಉತ್ತಮ ಎಂಬ ಭಾವನೆ ಸರಿಯಾಗಿದೆ. ಪರಿಶ್ರಮದಿಂದ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕವಾಗಿ ಗೌರವವನ್ನು ಪಡೆದುಕೊಳ್ಳುವಿರಿ.
04 ಫೆಬ್ರುವರಿ 2026, 18:30 IST
ಕುಂಭ
ಆಲಸ್ಯತನ ದೂರ ಮಾಡಿಕೊಳ್ಳುವುದರಿಂದ ಸಮಸ್ಯೆಗಳು ಬರಲಾರದು. ಸ್ವಾದವನ್ನು ಅರಸಿ ತಿಂದ ಆಹಾರವು ಅನಾರೋಗ್ಯಕ್ಕೆ ಕಾರಣವಾಗುವುದು. ಯಂತ್ರೋಪಕರಣಗಳ ಮಾರಾಟದಿಂದ ಅಧಿಕ ಲಾಭ.
04 ಫೆಬ್ರುವರಿ 2026, 18:30 IST
ಮೀನ
ಮಾನಸಿಕ ಒತ್ತಡ ಕಡಿಮೆಯಾಗದ ಹೊರತು ಇತರರೊಂದಿಗೆ ವಾಗ್ವಾದಕ್ಕೆ ಇಳಿಯಬೇಡಿ. ಕುಟುಂಬದವರೊಡನೆ ಮನರಂಜನೆಗಾಗಿ ಅಲ್ಪ ಕಾಲ ಮೀಸಲಿಡಲು ಪ್ರಯತ್ನಿಸಿ. ಸಂಗೀತವನ್ನು ಆಲೈಸಿ.
04 ಫೆಬ್ರುವರಿ 2026, 18:30 IST