ನವಿ ಮುಂಬೈ: ಅಮೋಘ ಲಯದಲ್ಲಿರುವ ಇಶಾನ್ ಕಿಶನ್ ಅವರ ಅರ್ಧಶತಕದ ಬಲದಿಂದ ಭಾರತ ತಂಡವು ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 30 ರನ್ಗಳಿಂದ ಮಣಿಸಿತು.

ಡಿ.ವೈ.ಪಾಟೀಲ ಕ್ರೀಡಾಂಗಣಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರರಾದ ಇಶಾನ್ (53; 20ಎ, 4x2, 6x7) ಹಾಗೂ ಅಭಿಷೇಕ್ ಶರ್ಮಾ (24; 18ಎ, 4x3, 6x1) ಅವರು 5.4 ಓವರ್ಗಳಲ್ಲಿ 80 ರನ್ ಬಾರಿಸಿದರು.

ತಿಲಕ್ ವರ್ಮಾ 19 ಎಸೆತಗಳಲ್ಲಿ ತಲಾ 3 ಬೌಂಡರಿ ಹಾಗೂ ಸಿಕ್ಸರ್ಗಳಿದ್ದ 45 ರನ್ ಸಿಡಿಸಿದರು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಕೇವಲ 10 ಎಸೆತಗಳಲ್ಲಿ 30 ರನ್ ಬಾರಿಸಿದರು. ಅವರ ಬ್ಯಾಟ್ನಿಂದ 2 ಬೌಂಡರಿ ಹಾಗೂ 3 ಸಿಕ್ಸರ್ಗಳು ಬಂದವು. ಭಾರತ ತಂಡ 20 ಓವರ್ಗಳಲ್ಲಿ 5 ವಿಕೆಟ್ಗೆ 240 ರನ್ ಗಳಿಸಿತು.

ಕಠಿಣ ಗುರಿ ಬೆನ್ನಟ್ಟಿದ ಏಡನ್ ಮರ್ಕರಂ ಪಡೆಯು 7 ವಿಕೆಟ್ಗೆ 210 ರನ್ ಗಳಿಸಿ ಓವರ್ ಪೂರೈಸಿತು. ರೈಯಾನ್ ರಿಕಲ್ಟನ್ (44; 21ಎ, 4x4, 6x3) ಹಾಗೂ ಟ್ರಿಸ್ಟನ್ ಸ್ಟಬ್ಸ್ (ಔಟಾಗದೇ 45; 21ಎ, 4x1, 6x4) ಹೋರಾಟ ತೋರಿದರು.

ಸಂಕ್ಷಿಪ್ತ ಸ್ಕೋರು

ಭಾರತ: 20 ಓವರ್ಗಳಲ್ಲಿ 5 ವಿಕೆಟ್ಗೆ 240 (ಇಶಾನ್ ಕಿಶನ್ 53, ತಿಲಕ್ ವರ್ಮಾ 45; ಮಾರ್ಕೊ ಯಾನ್ಸೆನ್ 18ಕ್ಕೆ1)

ದಕ್ಷಿಣ ಆಫ್ರಿಕಾ: 20 ಓವರ್ಗಳಲ್ಲಿ 7 ವಿಕೆಟ್ಗೆ 210 (ರೈಯಾನ್ ರಿಕಲ್ಟನ್ 44, ಟ್ರಿಸ್ಟನ್ ಸ್ಟಬ್ಸ್ ಔಟಾಗದೇ 45; ಅಭಿಷೇಕ್ ಶರ್ಮಾ 32ಕ್ಕೆ2).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.