ಶುಕ್ರವಾರ, 1 ಆಗಸ್ಟ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ಯೋಗ್ಯರಿಗೆ ಮದುವೆಯ ಸುಯೋಗವಿದೆ
Published 31 ಜುಲೈ 2025, 23:56 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಹಸ ಮಾಡಿ ಪಡೆದುಕೊಂಡ ದ್ರವ್ಯವನ್ನು ಉಳಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಸಕಾರಾತ್ಮಕ ನಡವಳಿಕೆಯಿಂದ ಲಾಭ ಹೊಂದುವಿರಿ. ಅಗತ್ಯ ವಸ್ತುಗಳಿಗೆ ಹಣ ವಿನಿಯೋಗ ಮಾಡಿದರೂ ಲೆಕ್ಕವಿರಲಿ.
ವೃಷಭ
ಮನೆಯ ಗೃಹಿಣಿಯರ ಚತುರತೆಯಿಂದ ಪುರುಷರಿಗೆ ಅನಾಯಾಸವಾಗಿ ಅನುಕೂಲವಾಗುತ್ತದೆ. ಎಷ್ಟೇ ಗಳಿಸಿದ್ದರೂ ಇನ್ನೂ ಗಳಿಸಬೇಕೆಂಬ ಅತಿಯಾದ ಆಸೆಯಿಂದ ವೇದನೆಯಾಗುವಂತೆ ಮಾಡದಿರಿ.
ಮಿಥುನ
ಗೋಮಾಳ, ಅರಣ್ಯ ಭೂಮಿ ಅಥವಾ ಇತರೆ ಸರ್ಕಾರಿ ಜಾಗಗಳ ಸಂಬಂಧಿ ಭೂವ್ಯಾಜ್ಯಗಳು ಹೆಗಲೇರುವ ಸಾಧ್ಯತೆ ಇದೆ. ತೀಕ್ಷ್ಣವಾದ ವೇದನೆ,  ಕಾಯಿಲೆಗಳಿಂದ ಬಳಲುವವರಿಗೆ ಆಶಾಕಿರಣ ಗೋಚರಿಸುತ್ತದೆ.
ಕರ್ಕಾಟಕ
ಸಂಪಾದನೆಯಲ್ಲಿ  ಮಾಡುತ್ತಿರುವ ಧಾರ್ಮಿಕ ಕೆಲಸಗಳು, ದಾನಾದಿ ಕಾರ್ಯಗಳು  ಕುಟುಂಬಕ್ಕೆ ಶ್ರೇಯಸ್ಸನ್ನುಂಟು ಮಾಡುತ್ತವೆ. ಕುಟುಂಬದ ಜನರೊಂದಿಗೆ ಮನರಂಜನೆಗಾಗಿ ಸಮಯ ಮೀಸಲಿಡಿ.
ಸಿಂಹ
ಕೆಲಸ ಕಾರ್ಯಗಳಲ್ಲಿ ಇದ್ದ ಅಡಚಣೆಗಳು, ಅನವಶ್ಶಕ ವಾದ-ವಿವಾದಗಳು ಹಾಗೂ ಭಿನ್ನಾಭಿಪ್ರಾಯಗಳು  ದೂರಾಗಲಿವೆ. ಉನ್ನತ ಸರ್ಕಾರಿ ನೌಕರರಿಗೆ ಬಡ್ತಿಯ ಯೋಗ. ಬಂಧುಗಳ ಆಗಮನದಿಂದ ಮನಸ್ಸಿಗೆ ಸಂತೋಷ.
ಕನ್ಯಾ
ಶಿಕ್ಷಕ ವೃಂದದವರಿಗೆ ಕೆಲಸದ ಒತ್ತಡ ಕಡಿಮೆ ಇರುವುದು. ಆಲಂಕಾರಿಕ ವಸ್ತುಗಳ ಮೇಲಿನ ಹಣ ವಿನಿಯೋಗ ಸರಿಯಲ್ಲ. ಕುಟುಂಬದಲ್ಲಿ ಆರ್ಥಿಕ ತೊಂದರೆಯಿಂದ ನಿಂತಿದ್ದ ಅನೇಕ ಕಾರ್ಯಗಳು ಮುಂದುವರಿಯಲಿವೆ. 
ತುಲಾ
ಬೇಕಾದ ವಸ್ತು ನಿಮ್ಮಲ್ಲಿಯೇ ಇದ್ದರೂ, ಅಜ್ಞಾನದ ಕಾರಣ  ಬೇರೆಲ್ಲಾ ಕಡೆ ಹುಡುಕುವಂತಾಗುತ್ತದೆ. ಕಟ್ಟಡ ನಿರ್ಮಾಣ ಮಾಡಿಸುತ್ತಿರುವವರಿಗೆ ಲಾಭ ನಷ್ಟಗಳ ಬಗ್ಗೆ ಪುನರಾವಲೋಕನ ಅಗತ್ಯ.
ವೃಶ್ಚಿಕ
ವಿಳಂಬವಾಗಿದ್ದ ಕೆಲಸ ಕಾರ್ಯಗಳು ಚುರುಕುಗೊಂಡು  ಅನುಕೂಲ ಒದಗಿ ಬರಲಿವೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಬೇಕಾದ ಆರ್ಥಿಕ ವ್ಯವಸ್ಥೆಯು ಸಕಾಲದಲ್ಲಿ ಆಗಲಿದೆ. ತಂತಜ್ಞಾನದ ತರಬೇತಿ ಅನಿವಾರ್ಯ.
ಧನು
ಸಹನೆಯಿಂದ ಸಮಸ್ಯೆಗಳ ಪರಾಮರ್ಶೆ ಮಾಡಿದರೆ ಯಾವುದೂ ಕಷ್ಟಕರವಲ್ಲವೆಂಬ ಅರಿವಾಗುವುದು. ಪ್ರಾಮಾಣಿಕತೆಯಿಂದ  ಮೇಲಧಿಕಾರಿಗಳ ನಂಬಿಕೆ ಪಡೆಯುವಿರಿ. ಯೋಗ್ಯರಿಗೆ ಮದುವೆಯ ಸುಯೋಗವಿದೆ.
ಮಕರ
ಇಂದು ಷರತ್ತುಗಳನ್ನು ಹೊಂದಿರುವ ಯಾವುದೇ ವ್ಯವಹಾರವನ್ನು ಒಪ್ಪಿಕೊಳ್ಳಬೇಡಿ. ವಿವಾಹದ ಬಗ್ಗೆ ಮನೆಯಲ್ಲಿ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ದಿನ. ಲೇವಾದೇವಿ ವ್ಯವಹಾರದಲ್ಲಿ ಅನುಕೂಲ ಇರಲಿದೆ.
ಕುಂಭ
ಒತ್ತಡಗಳ ನಡುವೆಯೂ ಸಂತೋಷದಿಂದ ಇರಿ. ಸಕ್ರಿಯ ಹಾಗೂ ಕಾರ್ಯ ಮಗ್ನತೆಯ ದಿನವು ಇದಾಗಿದೆ. ಸಂಜೆ ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಹೊಸದೊಂದು ವಿಚಾರ ಸಿಗಲಿದೆ.
ಮೀನ
ಗುರಿಯನ್ನು ತಲುಪುವಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮ. ಶ್ರಮವು ಸಾರ್ಥಕವೆನಿಸುವುದು. ಷೇರು ವ್ಯವಹಾರಗಳಲ್ಲಿ ಲಾಭವಿದೆ. ಕೆಲಸ ಬದಲಿಸುವ ಯೋಚನೆಗೆ ದಾರಿ ದೊರಕುವುದು.
ADVERTISEMENT
ADVERTISEMENT