ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ವ್ಯವಹಾರದಲ್ಲಿ ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆಯಿದೆ
Published 5 ಮಾರ್ಚ್ 2024, 23:45 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಾರ್ಮಿಕ ವರ್ಗದವರಲ್ಲಿ ಮೃದು ವರ್ತನೆ ತೋರಿದರೆ ಮಾತ್ರ ಲಾಭವಾಗುವುದು. ಹೊಸ ಆಕಾಂಕ್ಷೆಗಳನ್ನು ಹಾಗೂ ಜೀವನದ ಗುರಿಗಳನ್ನು ಚೆನ್ನಾಗಿ ಅರಿತುಕೊಳ್ಳುವಿರಿ. ಹಣಕಾಸಿನ ಕೊರತೆ ಅಷ್ಟಾಗಿ ಕಾಡದು.
ವೃಷಭ
ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮತ್ತು ಬಾಕಿ ಉಳಿದ ಕೆಲಸವನ್ನು ಪೂರ್ತಿಗೊಳಿಸಲು ಈ ದಿನ ಪ್ರಶಸ್ತವಾಗಿದೆ. ವ್ಯವಹಾರದಲ್ಲಿ ಪಾಲುದಾರರಿಂದ ಮೋಸ ಹೋಗುವ ಸಾಧ್ಯತೆ ಅತ್ಯಧಿಕವಾಗಿರಲಿದೆ.
ಮಿಥುನ
ನಿತ್ಯದ ವ್ಯವಹಾರಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಿರುವುದಿಲ್ಲ. ಮೇಲಧಿಕಾರಿ ವರ್ಗದವರಿಗೆ ಲೆಕ್ಕ ಪತ್ರಗಳು ಸಮರ್ಪಕವಾಗಿರುವುದು ಕಂಡುಬರುವುದು. ವಿದ್ಯಾಭ್ಯಾಸದಲ್ಲಿನ ಪ್ರಗತಿ ಕಂಡು ಕಂಡುಬರುವುದು.
ಕರ್ಕಾಟಕ
ಸ್ಪರ್ಧಾ ಮನೋಭಾವದಿಂದ ಉನ್ನತ ಸ್ಥಾನಕ್ಕೆ ಏರಬಹುದು. ಈ ದಿನ ಮಕ್ಕಳಿಂದ ನೆಮ್ಮದಿ ಅಥವಾ ಸಮಾಧಾನದ ಮಾತುಗಳನ್ನು ಕೇಳುವಿರಿ. ಮನದ ಮಾತುಗಳಿಗೆ ಬೆಲೆ ಕೊಡುವುದು ಉತ್ತಮ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಸಾಕಷ್ಟು ಎಚ್ಚರವಹಿಸದೆ ಅತಿ ವಿಶ್ವಾಸದಿಂದ ಮುಂದುವರಿದರೆ ಅಧಿಕಾರಿ ಜನರಿಂದ ಕಷ್ಟ-ನಷ್ಟಗಳು, ಸ್ಥಾನಮಾನಕ್ಕೆ ಹಾನಿ ಸಂಭವಿಸಬಹುದು. ವೃತ್ತಿ ಬದುಕಿನಲ್ಲಿ ಉನ್ನತ ಸ್ಥಾನರಕ್ಕೇರಲು ಸಕಾಲವಾಗಿದೆ.
ಕನ್ಯಾ
ಉದ್ಯೋಗಸ್ಥ ಮಹಿಳೆಯರಿಗೆ ಅಧಿಕ ಕೆಲಸದ ಜತೆಯಲ್ಲಿ ಹೆಚ್ಚಿನ ಆದಾಯ ಉಂಟಾಗಲಿದೆ. ಸಂಬಂಧಗಳಿಗೆ ಅತಿಯಾಗಿ ಬೆಲೆ ಕೊಡುವ ಸಂಬಂಧಿಕರಿಂದ ಉಂಟಾದ ನೋವು ಮರೆಯಲಾಗದಂತೆ ಆಗುವುದು.
ತುಲಾ
ಬಹಳ ದಿನಗಳಿಂದ ಪರಿಶ್ರಮಕ್ಕೆ ತಕ್ಕ ಆದಾಯವಿಲ್ಲದೆ ಸೊರಗಿದ್ದ ಅತಿ ಹೆಚ್ಚಿನ ವರಮಾನದ ಮಾರ್ಗವನ್ನು ಸ್ನೇಹಿತರೊಬ್ಬರು ತೋರುವರು. ಮೇಲಧಿಕಾರಿಗಳಲ್ಲಿ ಯಾವುದನ್ನೂ ಮುಚ್ಚಿಡಬೇಕಾದ ಅವಶ್ಯಕತೆ ಇರುವುದಿಲ್ಲ.
ವೃಶ್ಚಿಕ
ಮನಸ್ಸಿನ ಭಾವನೆಗಳನ್ನು ಸ್ನೇಹಿತರಲ್ಲಿ ಹೇಳಿಕೊಳ್ಳುವಿರಿ. ಅದರಿಂದಾಗಿ ಬಹಳ ದಿನದಿಂದ ಇದ್ದ ಆತಂಕ ದೂರಾಗುವುದು ಹಾಗೂ ಸಂತಸ ಮೂಡುತ್ತದೆ. ಆದಾಯದಲ್ಲಿ ಏರಿಳಿತವನ್ನು ನೋಡಬೇಕಾಗುತ್ತದೆ.
ಧನು
ಟೆಕ್ಸ್ಟ್‌ ಟೈಲ್‌ ಉದ್ಯಮದವರಿಗೆ ಅಪಾರ ಲಾಭವಿದ್ದು , ರಫ್ತು ವ್ಯವಹಾರಗಳನ್ನು ಹೆಚ್ಚಿಸಿಕೊಳ್ಳಬಹುದು. ವೈದ್ಯ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕವಾಗಿ ಗೌರವವನ್ನು ಪಡೆದುಕೊಳ್ಳುವಿರಿ. ಬಿಳಿ ಬಣ್ಣ ಶುಭ ತರಲಿದೆ
ಮಕರ
ಅನ್ವೇಷಣೆಯ ಹಾದಿಯಲ್ಲಿ ಮತ್ತಷ್ಟು ದೂರ ಸಾಗಿದಲ್ಲಿ ಯಶಸ್ಸಿನ ಛಾಯೆ ಕಾಣಲಿದೆ. ಪಾಲುದಾರಿಕೆಯನ್ನು ಮುಂದುವರಿಸುವ ಯೋಚನೆಯು ಸರಿಯಾಗಿರುವುದು. ಷೇರಿನ ವ್ಯವಹಾರದಲ್ಲಿ ಹೆಚ್ಚಿನ ಹಣ ಸಂಗ್ರಹವಾದೀತು.
ಕುಂಭ
ವೃತ್ತಿಪರವಾದ ಕನಸುಗಳ ಸಮೀಪಕ್ಕೆ ಸಾಗಲು ಅಗತ್ಯ ತಯಾರಿ ನಡೆಸಿ. ಲೇವಾದೇವಿ ವ್ಯವಹಾರಗಳಿಂದ ಗಳಿಸಿದ ಹಣ ಒಳ್ಳೆಯ ಕಾರ್ಯಗಳಿಗೆ ಸಹಾಯವಾಗುವುದು. ಸತ್ಕಾರ ಸಮಾರಂಭಗಳಲ್ಲಿ ಭಾಗವಹಿಸುವಿರಿ.
ಮೀನ
ಮಕ್ಕಳ ವಿಚಾರದಲ್ಲಿ ಮನೆಯವರು ಹೇಳಿಕೊಂಡಿರುವ ಹರಕೆ ತೀರಿ ಸುವ ಬಗ್ಗೆ ನೆನಪಿರಲಿ .ಹೊಸದನ್ನು ಕಲಿಯುವುದಕ್ಕೆ ಉತ್ಸುಕರಾಗಿರುತ್ತೀರಿ. ವಾದ-ವಿವಾದಗಳನ್ನು ಮಾಡಿದಲ್ಲಿ, ಸಮಸ್ಯೆಗೆ ನಾಂದಿ ಹಾಡಿದಂತಾಗುವುದು.