ದಿನ ಭವಿಷ್ಯ: ಗುರುವಾರ 28 ಆಗಸ್ಟ್ 2025; ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ
Published 27 ಆಗಸ್ಟ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅಣ್ಣ-ತಮ್ಮಂದಿರ ವರ್ಗದವರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಸಮೀಪವರ್ತಿಗಳ ಆಶ್ವಾಸನೆ ಹಾಗು ಸಲಹೆ ದೊರೆತು ಶುಭಕಾರ್ಯಗಳತ್ತ ಗಮನ ಹರಿಸುವಿರಿ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
ವೃಷಭ
ಭಾವನಾತ್ಮಕ ಹಾದಿಯಲ್ಲಿ ಬರುವ ತಾರ್ಕಿಕ ಆಲೋಚನೆಗಳನ್ನು ಬದಿಗೆ ಸರಿಸಿ. ತಾರ್ಕಿಕ ಭಾವನೆಗಳ ಬದಲು ವಾಸ್ತವದತ್ತ ಗಮನ ಹರಿಸಲು ಇದು ಸೂಕ್ತವಾದ ಸಮಯವಾಗಿದೆ. ನಟನಾ ವೃತ್ತಿಯವರಿಗೆ ಖ್ಯಾತಿ ಮತ್ತು ಸಂಪತ್ತು ಹರಿದು ಬರಲಿದೆ.
ಮಿಥುನ
ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿದೆ. ಹಣಕಾಸಿನ ಸಂಸ್ಥೆಗೆ ಪಾಲುದಾರರಾಗುವ ಸಾಧ್ಯತೆ ಇದೆ. ಟೆಕ್ಸ್ಟೈಲ್ಸ್ ಉದ್ಯಮದವರಿಗೆ ರಫ್ತು ವ್ಯಾಪಾರಗಳಿಂದ ಬಹಳಷ್ಟು ಹಣ ಹಾಗೂ ವ್ಯಾಪಾರಗಳ ಲಾಭವನ್ನು ಹೊಂದುವರು
ಕರ್ಕಾಟಕ
ಆರೋಗ್ಯದ ಬಗ್ಗೆ ನಿಗವಹಿಸುವುದು ಅಗತ್ಯ.ಶ್ರೀ ಸತ್ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚುವುದರಿಂದ ಪುಣ್ಯಸಂಪಾದನೆಯಾಗಲಿದೆ. ಜೀವನ ಶೈಲಿಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದುಕೊಳ್ಳುವ ಸನ್ನಿವೇಶ ಬರಲಿದೆ.
ಸಿಂಹ
ತಂದೆಯಾಗುವ ಸುದ್ದಿ ಕೇಳಿ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ಈ ದಿನ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ನಿಮ್ಮ ಮೇಲೆ ಗಣಪತಿಯ ಅನುಗ್ರಹವಿರಲಿದೆ.
ಕನ್ಯಾ
ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ನಿಮ್ಮ ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ. ಸಾಲಬಾಧೆ ಸ್ವಲ್ಪ ಮಟ್ಟಿಗೆ ತೀರಲಿದೆ. ನಿಮ್ಮ ಪೂರ್ವನಿಯೋಜಿತ ಕೆಲಸ ಕಾರ್ಯಗಳು ಸರ್ವರ ಸಹಾಯದಿಂದ ಮಂದಗತಿಯಲ್ಲಿ ಪೂರ್ಣಗೊಳ್ಳುವುದು.
ತುಲಾ
ಉದ್ಯೋಗದಲ್ಲಿನ ಸಮಸ್ಯೆಯಿಂದಾಗಿ ಬದಲಾವಣೆಯ ಮನಸ್ಸು ಬರಲಿದೆ. ಆದರೇ ಯಾವುದೇ ಕಾರಣಗಳಿಗೂ ಉದ್ಯೋಗ ಬದಲಾವಣೆಯ ಬಗ್ಗೆ ತೀರ್ಮಾನಿಸಬೇಡಿ. ನಿರ್ಧಾರಗಳು ಅಗತ್ಯವಾಗಿ ತೆಗೆದುಕೊಳ್ಳುವ ಸಮಯದಲ್ಲಿ ಜ್ಯೋತಿಷ್ಯರನ್ನು ಸಂಪರ್ಕಿಸಿ.
ವೃಶ್ಚಿಕ
ನಿಮ್ಮ ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ, ಕೇವಲ ನಿಮ್ಮ ಮೇಲಿನ ನಂಬಿಕೆಯಿಂದಾಗಿ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳುವರು. ಮನೆಯಲ್ಲಿ ಧಾರ್ಮಿಕ ಸಮಾರಂಭಗಳ ಸಿದ್ಧತೆ ನೆಡೆಯಲಿದೆ.
ಧನು
ವಾಹನದಲ್ಲಿ ಚಲಿಸುವಾಗ ಜಾಗ್ರತೆ ಇರಲಿ. ನಿಮ್ಮನ್ನು ಅಥವಾ ನಿಮ್ಮ ನಾಜೂಕತೆಯ ಕೆಲಸವನ್ನು ಕಂಡು ಅಸೂಯೆ ಪಡುವ ಸಹೋದ್ಯೋಗಿಗಳು ಹಾಗೂ ಮೇಲಧಿಕಾರಿಗಳೊಂದಿಗೆ ಜಾಣ್ಮೆಯಿಂದ ವ್ಯವಹರಿಸಿ. ದೃಷ್ಟಿದೋಷಕ್ಕೆ ಒಳಗಾಗುವ ಸಂಭವವಿದೆ.
ಮಕರ
ವ್ಯವಹಾರದಲ್ಲಿ ನೀವು ಈಗ ತೆಗೆದುಕೊಂಡಿದ್ದ ನಿರ್ಧಾರಗಳು ಸರಿಯಾಗಿದೆಯೇ ಎಂದು ಇನ್ನೊಮ್ಮೆ ಪರಾಮರ್ಶಿಸಿಕೊಳ್ಳಿ. ಅಂತರಾಜ್ಯದ ಅತಿ ಮುಖ್ಯವಾದ ವ್ಯಕ್ತಿಯೊಬ್ಬರ ಪರಿಚಯ ನಿಮ್ಮ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು.
ಕುಂಭ
ಹಿರಿಯರ ಮಾರ್ಗದರ್ಶನದಂತೆ ನಡೆದು ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ಚಿಂತೆ ಮತ್ತು ಭಯ ಇವೆರಡನ್ನೂ ದೂರ ಮಾಡಿಕೊಳ್ಳುವ ಬಗ್ಗೆ ಪ್ರಯತ್ನಿಸಿ. ಅನಿರೀಕ್ಷಿತವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು.
ಮೀನ
ಅತಿಯಾಗಿ ಒತ್ತಡ ತರುವ ಕೆಲಸಗಳಿಂದ ದೂರ ಉಳಿಯುವ ಯೋಚನೆಯು ಸರಿಯಾಗಿರುವುದು. ದಿನಸಿ ವರ್ತಕರಿಗೆ ಉತ್ತಮ ಮಾರಾಟದೊಂದಿಗೆ ಲಾಭವೂ ಇರುವುದು. ಭೂಮಿಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಪ್ರಯತ್ನ ಪಟ್ಟ ಕೆಲಸಗಳು ದಿನದ ಅಂತ್ಯಕ್ಕೆ ಫಲ ನೀಡಲಿವೆ.