ದಿನ ಭವಿಷ್ಯ | ಈ ರಾಶಿಯವರಿಗೆ ವರ್ಗಾವಣೆಯ ಸಾಧ್ಯತೆಯಿದೆ
Published 15 ಅಕ್ಟೋಬರ್ 2025, 23:26 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ಈ ದಿನ ನೆರವಿಗೆ ನಿಲ್ಲುವರು. ಅವರೇ ನಿಮ್ಮನ್ನು ಸರಿಯಾದ ದಾರಿಗೆ ಕರೆದೊಯ್ಯುವರು. ಕಟ್ಟಡಗಳ ಬಾಡಿಗೆಯಿಂದಾಗಿ ಆರ್ಥಿಕವಾಗಿ ಅಭಿವೃದ್ಧಿ ಕಂಡುಬರುವುದು.
ವೃಷಭ
ಬೆಳ್ಳಿ ವಸ್ತುಗಳ ಮಾರಾಟ ಮಾಡುವವರು ಆದಾಯವನ್ನು ಗಳಿಸುವಿರಿ. ಸರ್ಕಾರಿ ಗುತ್ತಿಗೆ ಕೆಲಸಗಳು ನಿಮ್ಮದಾಗಲಿವೆ. ನಿರುದ್ಯೋಗಿಗಳಿಗೆ ಸಾಧಾರಣ ಉದ್ಯೋಗ ದೊರೆಯಲಿದೆ.
ಮಿಥುನ
ವರ್ಚಸ್ಸಿನ ಪ್ರಭಾವದಿಂದ ವಿನೂತನ ಅವಕಾಶಗಳು ದೊರೆಯಲಿವೆ. ಭಾವನೆಗಳ ಮೇಲೆ ಹಿಡಿತ ಸಾಧಿಸಿ. ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದನ್ನು ನಿಲ್ಲಿಸಿ. ನೀರಿನ ಬಗ್ಗೆ ಜಾಗರೂಕತೆ ಇರಲಿ.
ಕರ್ಕಾಟಕ
ಬದಲಾವಣೆಯನ್ನು ಬಯಸಿದ ನಿಮಗೆ ಇದು ಹರ್ಷ ಸಮಯ. ಸಾಂಸಾರಿಕವಾಗಿ ಸುಖ-ದುಃಖಗಳ ಸಮ್ಮಿಶ್ರ ಫಲವನ್ನು ಅನುಭವಿಸುವಿರಿ. ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಖರ್ಚು ಉಂಟಾಗುವುದು.
ಸಿಂಹ
ಹೊಸ ಬದುಕನ್ನು ಆರಂಭಿಸಲು ಅವಕಾಶದ ಬಾಗಿಲು ತೆರೆದಿದೆ. ಕೆಲಸದಲ್ಲಿ ತುಂಬಾ ಮಟ್ಟಿನ ಉತ್ಸಾಹವಿರುವುದು. ಸರ್ಕಾರಿ ಕೆಲಸಗಳು ನಡೆಯುವುದು ಸ್ವಲ್ಪ ವಿಳಂಬವಾಗುವುದು.
ಕನ್ಯಾ
ಅವಿವಾಹಿತರ ಮನೋಕಾಮನೆಗಳು ಪೂರ್ಣಗೊಳ್ಳುವ ದಿನ. ಕುಟುಂಬ ಸದಸ್ಯರ ಆರೋಗ್ಯದ ಬಗೆಗಿನ ಚಿಂತೆ ತಪ್ಪಿದ್ದಲ್ಲ. ಸ್ವಯಂ ರಕ್ಷಣೆ ತಿಳಿದಿರುವುದರಿಂದ ಮೋಸ ಹೋಗುವ ಪ್ರಮೇಯ ಕಡಿಮೆಯಾಗಿರುತ್ತದೆ.
ತುಲಾ
ವೃತ್ತಿಯಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರಲು ನಾಯಕನನ್ನು ಜಾಗೃತ ಗೊಳಿಸುವಿರಿ. ಅಧಿಕಾರದ ಇತಿ ಮಿತಿ ತಿಳಿದಿದೆ. ಹಳೆಯ ಗೆಳೆಯರ ಜೊತೆ ಮಾತುಕತೆ ನಡೆಯುವುದು. ಉತ್ಸಾಹ ಅಧಿಕಗೊಂಡಿದೆ.
ವೃಶ್ಚಿಕ
ವೃತ್ತಿಯಲ್ಲಿ ಅಧಿಕಾರಿಗಳು ಕಾರ್ಯಸಾಧನೆ ಗುರುತಿಸಿ ಸೌಲಭ್ಯ ಒದಗಿಸಿ ಕೊಡುವರು. ನಿವೇಶನ ಕೊಳ್ಳಲು ಸೂಕ್ತಸ್ಥಳದ ಹುಡುಕಾಟ ನಡೆಸುವಿರಿ. ಮಕ್ಕಳ ವಿದ್ಯಾಭ್ಯಾಸ ಸಮಾಧಾನ ತರಲಿದೆ.
ಧನು
ವರಮಾನ ತೆರಿಗೆ ಸಿಬ್ಬಂದಿಗೆ ಕೆಲಸದಲ್ಲಿ ಸ್ವಲ್ಪ ಬಿಡುವು ಸಿಗುವುದು. ಕೋರ್ಟು ವ್ಯವಹಾರದಲ್ಲಿ ನಿರೀಕ್ಷಿತವಾದ ಜಯದ ಸಿಹಿಯನ್ನು ಅನಿರೀಕ್ಷಿತ ಸೋಲಿನ ಕಹಿ ಕಸಿಯುವ ಸಾಧ್ಯತೆಗಳಿವೆ. ವರ್ಗಾವಣೆಯ ಸಾಧ್ಯತೆಯಿದೆ.
ಮಕರ
ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಪ್ರಗತಿ. ಮಗನಿಗೆ ಸಂಸ್ಥೆಯಿಂದ ವಿದೇಶದಲ್ಲಿ ವಿದ್ಯಾಭ್ಯಾಸಕ್ಕೆ ನೆರವು ಸಿಗುವುದು. ಆಕಸ್ಮಿಕ ಧನಾಗಮನದಿಂದ ಬಾಕಿ ಇರಿಸಿದ ವ್ಯವಹಾರವು ಪೂರ್ಣಗೊಳ್ಳುವುದು.
ಕುಂಭ
ಬಡ್ತಿ ಅವಕಾಶವನ್ನು ಕೈತಪ್ಪದಂತೆ ನೋಡಿಕೊಳ್ಳಿ. ಭಕ್ತಿಯಿಂದ ಈಶ್ವರನನ್ನು ಆರಾಧಿಸಿ ಶುಭವಾಗುವುದು. ಹೆಂಡತಿಯ ಆರೋಗ್ಯದ ಬಗ್ಗೆ ಅನಗತ್ಯ ಭೀತಿ ಬೇಡ. ಆಹಾರ ಪದ್ಧತಿ ಬದಲಿಸಿಕೊಳ್ಳಿ.
ಮೀನ
ಇಂದಿನ ಸಂಧಾನ ಅಥವಾ ಕರಾರು ಒಪ್ಪಂದಗಳು ಅನುಕೂಲಕರ ಎನಿಸಲಿವೆ. ವಾಣಿಜ್ಯ ಇಲಾಖೆಯ ಅಧಿಕಾರಿಗಳಿಗೆ ಅನುಕೂಲ ಉಂಟಾ ಗುವುದು. ಪತಿ ಪತ್ನಿಯ ಅನ್ಯೋನ್ಯತೆಯ ಕನಸು ನನಸಾಗಲಿದೆ.