ಗುರುವಾರ, 17 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಔಷಧ ಖರೀದಿಗೆ ಯೋಚಿಸಬೇಡಿ, ಹಣಕ್ಕಿಂತ ಆರೋಗ್ಯವೇ ಮುಖ್ಯ.
Published 14 ಏಪ್ರಿಲ್ 2025, 23:42 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಹಚರರಲ್ಲಿ, ಸಹೋದ್ಯೋಗಿಗಳಲ್ಲಿ ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಸಂತೋಷವೆನಿಸುವುದು. ಹೊಸ ವ್ಯವಹಾರದಲ್ಲಿ ಸ್ನೇಹಿತರ ಸಹಕಾರ ದೊರೆಯಲಿದೆ.
ವೃಷಭ
ನಿಗೂಢ ಸಂಗತಿಗಳನ್ನು ಬಯಲಿಗೆ ತರುವ ಪ್ರಯತ್ನ ನಡೆಯಲಿದೆ. ಕೆಲಸಗಳಿಗೆ ಆತ್ಮಸ್ಥೈರ್ಯ ಅಗತ್ಯ. ಕಾನೂನಿಗೆ ವಿರುದ್ಧವಾದ ಕೆಲಸ ಸಂಭವಿಸಬಹುದು.
ಮಿಥುನ
ಕಠಿಣಶ್ರಮದ ಜತೆಯಲ್ಲಿ ಎಷ್ಟೇ ಪ್ರಯತ್ನವಿದ್ದರೂ ಮೊದಲನೇ ಬಾರಿ ವಿಘ್ನವೇ ಸಂಭವಿಸಲಿದೆ. ನಂತರ ಗುರಿ ಸಾಧಿಸಬೇಕಿದ್ದಲ್ಲಿ ಅನುಭವಸ್ಥರ ಅಥವಾ ಅಕ್ಕಪಕ್ಕದವರೊಂದಿಗೆ ಸಂಪರ್ಕ ಬೆಳೆಸಿಕೊಳ್ಳುವುದು ಉತ್ತಮ.
ಕರ್ಕಾಟಕ
ಹೊಸ ಮನೆಯ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಓಡಾಟ ನಡೆಸಬೇಕಾಗುವುದು. ನೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧೆಗಳನ್ನು ಎದುರಿಸುವ ಕಾಲ ಈ ದಿನ. ಆದಾಯ ವೆಚ್ಚಗಳು ಎರಡೂ ಸರಿ ಸಮವಾಗಿರುವುದು.
ಸಿಂಹ
ಕೆಲಸ ಕಾರ್ಯದಲ್ಲಿ ತೋರಿ ಬರುತ್ತಿದ್ದ ಅಡ್ಡಿ ಆತಂಕಗಳು ದೂರಾಗಲಿವೆ. ಸಂಸ್ಥೆಯ ಆಂತರಿಕ ವಿಷಯಗಳಿಗೆ ಗಮನ ಕೊಡದಿರುವುದು ಒಳ್ಳೆಯದು. ಮಗನ ವಿದ್ಯಾಭ್ಯಾಸದ ವಿಚಾರಕ್ಕಾಗಿ ತಾಯಿ ಶಾರದಾಂಬೆಯನ್ನು ಪ್ರಾರ್ಥಿಸಿ.
ಕನ್ಯಾ
ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭದಿಂದ ವ್ಯವಹಾರಗಳು ವೃದ್ಧಿಗೊಳ್ಳಲಿವೆ. ಕುಲದೇವರ ದರ್ಶನದಿಂದ ವ್ಯವಹಾರಗಳಲ್ಲಿ ಅಭಿವೃದ್ಧಿ ಸಾಧಿಸಬಲ್ಲಿರಿ. ಶಸ್ತ್ರವೈದ್ಯ ವೃತ್ತಿಯವರಿಗೆ ಸೌಲಭ್ಯಗಳು ಹೆಚ್ಚಲಿವೆ.
ತುಲಾ
ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮವೇ ಹೊರತು ಕೈಗೆ ಸಿಗದ ಅಂಶಗಳ ಬಗ್ಗೆ ಯೋಚಿಸುವುದು ಸಮಯವ್ಯರ್ಥಕ್ಕೆ ಕಾರಣವಾಗಲಿದೆ. ನಿಶ್ಚಿತ ಕಾರ್ಯಗಳಿಗೆ ಹಣದ ಹರಿವು ಸರಾಗವಾಗಿರುವುದು
ವೃಶ್ಚಿಕ
ದೈನಂದಿನ ಬದುಕಿನಲ್ಲಿ ಮತ್ತೊಬ್ಬರನ್ನು ಗೌರವಿಸುವುದರಿಂದ ಗೌರವವು ಕೂಡ ಹೆಚ್ಚುವುದು. ಕಾರ್ಯಗಳ ಒತ್ತಡದ ನಡುವೆಯೂ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ.
ಧನು
ವೃತ್ತಿ ತರಬೇತಿ ಹೊಂದಿರುವವರಿಗೆ ಕೆಲಸ ಸಿಗುವ ಸೂಚನೆ ದೊರೆಯಲಿದೆ. ಕ್ರೀಡಾಸಕ್ತರಿಗೆ ಅಥವಾ ಕ್ರೀಡಾಪಟುಗಳಿಗೆ ಶುಭದಾಯಕ ದಿನ. ಧಾರ್ಮಿಕ ವ್ಯಕ್ತಿಗಳನ್ನು ಭೇಟಿ ಮಾಡುವಿರಿ, ಸಂತಸ ಉಂಟಾಗಲಿದೆ.
ಮಕರ
ಪತ್ರಕರ್ತರಿಗೆ ಗಣ್ಯ ವ್ಯಕ್ತಿಗಳ ಭೇಟಿ ಹಾಗೂ ಅವರ ಸಂದರ್ಶನ ನಡೆಸುವ ಅವಕಾಶ ದೊರೆಯಲಿದೆ. ದಿನಕ್ಕಿಂತ ಕಾರ್ಯಭಾರದ ಒತ್ತಡ ಕಡಿಮೆಯಾಗುವುದು. ಚಿತ್ರ ವಿತರಕರಿಗೆ ವರಮಾನದ ಸಾಧ್ಯತೆ ಇದೆ.
ಕುಂಭ
ಶೀತಬಾಧೆಯನ್ನು ಹೋಗಲಾಡಿಸಿಕೊಳ್ಳಲು ಆಯುರ್ವೇದದ ಮೊರೆಹೋಗುವುದು ಉತ್ತಮ. ಮಾನಸಿಕ ಸಮತೋಲನದಿಂದ ಶುಭ ಮತ್ತು ಉತ್ತಮ ಅಭಿವೃದ್ಧಿದಾಯಕವಾಗಲಿದೆ. ಜವಳಿ ವ್ಯಾಪಾರಿಗಳಿಗೆ ಲಾಭ.
ಮೀನ
ಅಪೇಕ್ಷಿಸಿದ ಪ್ರಗತಿ ಸಾಧಿಸುವಿರಿ. ಯಶಸ್ಸಿನ ಹೊಸ ಮಾರ್ಗಗಳು ಅರಿವಾಗುವುದು. ಔಷಧ ಖರೀದಿಗೆ ಯೋಚಿಸಬೇಡಿ, ಹಣಕ್ಕಿಂತ ಆರೋಗ್ಯವೇ ಮುಖ್ಯ ಎಂಬುದನ್ನು ಅರಿತುಕೊಳ್ಳಿ.
ADVERTISEMENT
ADVERTISEMENT