ಬುಧವಾರ, 10 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸಹೋದ್ಯೋಗಿಗಳಲ್ಲಿ ವೈಮನಸ್ಸು ಬರುವ ಲಕ್ಷಣವಿದೆ
Published 10 ಸೆಪ್ಟೆಂಬರ್ 2025, 0:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನೇರ ನುಡಿಯ ಸ್ವಭಾವದಿಂದ ಸಹೋದ್ಯೋಗಿಗಳಲ್ಲಿ ವೈಮನಸ್ಸು ಬರುವ ಲಕ್ಷಣವಿದೆ. ಸ್ವಭಾವತಃ ಖುಷಿಯಾಗಿ ಇರುವುದನ್ನು ಬಯಸುವ ನೀವು ಪರಜನರ ಮಾತುಗಳಿಗೆ ಕಿವಿ ಕೊಟ್ಟು ಬೇಸರಿಸಿಕೊಳ್ಳಬೇಡಿ.
ವೃಷಭ
ಹೊಸ ಕ್ಲಿನಿಕ್ ಆರಂಭದ ಶುಭ ಕಾರ್ಯಗಳ ಬಗ್ಗೆ ಹಿರಿಯರೊಡನೆ ಸಮಾಲೋಚನೆ ನಡೆದು ತೀರ್ಮಾನ ಸಿಗಲಿದೆ. ಕರ-ಕುಶಲ ವಸ್ತುಗಳ ತಯಾರಿಕೆಯಲ್ಲಿ ಆಸಕ್ತಿ ಹೆಚ್ಚುವುದು. ಮಾರಾಟದಲ್ಲಿ ಲಾಭವೂ ಇದೆ.
ಮಿಥುನ
ಜೀವನದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ತಾಳುವಿರಿ. ಸಂಗೀತಗಾರರಿಗೆ ಹಾಗೂ ನೃತ್ಯ ಕಲೆಗಳಿಗೆ ಪ್ರಾಮುಖ್ಯ ದೊರಕುವುದು. ಸ್ವಸಾಮರ್ಥ್ಯದಿಂದ ಆಗುವ ಕೆಲಸಗಳಿಗೆ ಇತರರ ಸಹಾಯವನ್ನು ಅಪೇಕ್ಷಿಸದೆ ಮಾಡಿ.
ಕರ್ಕಾಟಕ
ಎರಡನೇ ದರ್ಜೆಯ ನೌಕರರಿಗೆ ವರ್ಗಾವಣೆಯಿಂದ ಆರ್ಥಿಕವಾಗಿ ಅನುಕೂಲವಾಗುವುದು. ದಿನಸಿ ವ್ಯಾಪಾರಿಗಳು ಮಾರಾಟದ ಕ್ಷೇತ್ರವನ್ನು ಹೆಚ್ಚಿಸಿಕೊಳ್ಳಬಹುದು. ತೈಲ ಲೇಪನದಿಂದ ನೋವುಗಳು ಮರೆಯಾಗುವುದು.
ಸಿಂಹ
ಜವಾಬ್ದಾರಿಯುತ ಯೋಜನೆಯ ಸ್ಪಷ್ಟ ವಿಷಯ ಆಳವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಮನಸ್ಸಿಗೆ ಬಂದ ಮಾತುಗಳನ್ನು ಆಡದೆ ಯೋಚನೆ ಮಾಡಿ ತೂಕದ ಮಾತುಗಳನ್ನು ಆಡಿದಲ್ಲಿ ಗೌರವಗಳು ಹೆಚ್ಚಾಗುವುದು.
ಕನ್ಯಾ
ಮಾಡುತ್ತಿರುವ ಕೆಲಸದಲ್ಲಿ ಹಣದ ಕೊರತೆ ಕಂಡುಬಂದರೆ ತುಂಬಾ ಸಂಕೋಚ ಮಾಡಿಕೊಳ್ಳದೆ ಆತ್ಮೀಯರಲ್ಲಿ ಕೇಳಿ, ತೀರಿಸುವ ಸಾಮರ್ಥ್ಯ ಇದೆ. ಉತ್ತಮ ಬುದ್ಧಿಶಕ್ತಿಯಿಂದ ಜನ ಮನ್ನಣೆ ಗಳಿಸಬಹುದು.
ತುಲಾ
ಕಾರ್ಯಗಳಲ್ಲಿ ಜಯಭೇರಿಯು ಎದುರಾಳಿಗಳ ಅಸೂಯೆಗೆ ಕಾರಣವಾಗುವುದು. ತೊಂದರೆಯ ಸಾಧ್ಯತೆ ಇರುವುದಿಲ್ಲ. ದೀರ್ಘಕಾಲದ ಕಾಯುವಿಕೆಯ ಬಳಿಕ ಜೀವನ ಸಂಗಾತಿಯು ಜೊತೆಯಾಗುವರು.
ವೃಶ್ಚಿಕ
ಜಾಗತಿಕವಾಗಿ ವ್ಯವಹಾರವನ್ನು ಹೊಂದಿರುವವರು ಸಣ್ಣ ಮಟ್ಟದ ವ್ಯಾಪಾರಿಗಳ ಚಾಕಚಕ್ಯತೆಯನ್ನು ನೋಡಿ ಕಲಿಯುವಂತಾಗಲಿದೆ. ನೆರೆಹೊರೆಯವರ ಜತೆಗಿನ ಅನಗತ್ಯ ಮಾತುಕತೆ ಸಮಸ್ಯೆ ತರಬಹುದು.
ಧನು
ವಾಹನ ಖರೀದಿಗಾರರಿಗೆ ಸೂಕ್ತ ಸಮಯವಲ್ಲದಿದ್ದರೂ ಮಾರಾಟಗಾರಿಗೆ ಲಾಭದ ದಿನ ಪರಿಣಮಿಸಬಹುದು. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು. ನೀಲಿ ಬಣ್ಣವು ಶುಭ ಉಂಟುಮಾಡುತ್ತದೆ.
ಮಕರ
ಆಪ್ತರ ಕಷ್ಟಗಳ ಕಡೆಗೆ ನೆರವಾಗುವ ತೀರ್ಮಾನಕ್ಕೆ ಬನ್ನಿ. ಸ್ನೇಹಕ್ಕೆ ಅರ್ಥ ಇರುವುದು ಹಾಗೂ ಪುಣ್ಯ ಸಂಪಾದನೆಯಾಗುವುದು. ಹಟವು ಹೆತ್ತವರನ್ನು ಕಂಗಾಲು ಪಡಿಸುತ್ತದೆ.
ಕುಂಭ
ಉರಿಯುವಂಥ ಬೆಂಕಿಗೆ ತುಪ್ಪ ಸುರಿಯುವಂಥ ಮಾತುಗಳನ್ನಾಡಿ ಸಂಗಾತಿಯೊಂದಿಗಿನ ಸಂಬಂಧವನ್ನು ಕೆಡಿಸಿಕೊಳ್ಳಬೇಡಿ. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಉದಾಸೀನತೆ ತೋರಿಸಿಕೊಳ್ಳಬೇಡಿ.
ಮೀನ
ಸ್ನೇಹಿತರಿಗೆ ನೀಡಿದ ವಾಗ್ದಾನವನ್ನು ಮರೆಯದಿರಿ. ಕಾಮ್ಯಗಳು ಆದಷ್ಟು ಶೀಘ್ರ ಸಿದ್ಧಿಸಲು ಅಶ್ವತ್ಥ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ. ವ್ಯವಹಾರಿಕ ವಿಚಾರಕ್ಕಿಂತ ವೈಯಕ್ತಿಕ ವಿಚಾರಗಳನ್ನು ಒಳ್ಳೆಯದು.
ADVERTISEMENT
ADVERTISEMENT