ರಾಂಚಿ: ರೋಹ್ತಕ್ನ ಹದಿಹರೆಯದ ಅಥ್ಲೀಟ್ ಸಂಜನಾ ಸಿಂಗ್ ಅವರು 1,500 ಮೀ. ಓಟ ಗೆಲ್ಲುವ ಮೂಲಕ ಸ್ಯಾಫ್ ಸೀನಿಯರ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಎರಡನೇ ಚಿನ್ನ ಗೆದ್ದರು. ಎರಡನೇ ದಿನವಾದ ಶನಿವಾರ ಪ್ರಾಬಲ್ಯ ಮೆರೆದ ಆತಿಥೇಯ ದೇಶದ ಅಥ್ಲೀಟುಗಳು ಪಣಕ್ಕಿದ್ದ 11 ಸ್ವರ್ಣ ಪದಕಗಳಲ್ಲಿ ಏಳನ್ನು ಬಾಚಿಕೊಂಡರು.

ಮೊದಲ ದಿನ 5000 ಮೀ. ಓಟದಲ್ಲಿ ಚಿನ್ನ ಗೆದ್ದಿದ್ದ, 18 ವರ್ಷ ವಯಸ್ಸಿನ ಸಂಜನಾ ಶನಿವಾರ 4ನಿ.25.36 ಸೆ.ಗಳಲ್ಲಿ ಗುರಿಮುಟ್ಟಿದರು. ಭಾರತದವರೇ ಆದ ಕಾಜಲ್ ಕನವಡೆ (4:26.21) ಕಂಚಿನ ಪದಕ ಗೆದ್ದುಕೊಂಡರು. ಇವರಿಬ್ಬರ ನಡುವೆ ಲಂಕಾದ ಅರಚ್ ನಿಮಲಿ (4:25.22) ಬೆಳ್ಳಿ ಗೆದ್ದರು.

ಮೊದಲ ದಿನದ ರೀತಿಯಲ್ಲೇ ಶನಿವಾರ ಸಹ ಭಾರತ ಮತ್ತು ಶ್ರೀಲಂಕಾ ಸ್ಪರ್ಧಿಗಳ ನಡುವೆಯೇ ಪೈಪೋಟಿ ಕಂಡುಬಂತು. ಭಾರತ ಇದುವರೆಗೆ 12 ಚಿನ್ನ ಗೆದ್ದರೆ, ಶ್ರೀಲಂಕಾ 8 ಚಿನ್ನ ಗಳಿಸಿದೆ.

ಪುರುಷರ 1500 ಮೀ. ಓಟದಲ್ಲಿ ಅರ್ಜುನ್ ವಾಸ್ಕಳೆ (3:54.58ಸೆ.), 110 ಮೀ. ಹರ್ಡಲ್ಸ್ನಲ್ಲಿ ಆರ್.ಮಾನವ್ (13.78ಸೆ.), ಡಿಸ್ಕಸ್ ಥ್ರೊನಲ್ಲಿ ಕೃಪಾಲ್ ಸಿಂಗ್, ಮಹಿಳೆಯರ 100 ಮೀ. ಹರ್ಡಲ್ಸ್ನಲ್ಲಿ ಕೆ.ನಂದಿನಿ (13.56 ಸೆ., ಕೂಟ ದಾಖಲೆ), ಡಿಸ್ಕಸ್ ಥ್ರೊನಲ್ಲಿ ಸೀಮಾ ಕೆ., 400 ಮೀ. ಓಟದಲ್ಲಿ ನೀರೂ ಪಾಠಕ್ (53.15 ಸೆ.) ಚಿನ್ನದ ಪದಕಗಳನ್ನು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.