ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಅ.12: ಈ ರಾಶಿಯವರು ಸಮಸ್ಯೆಗಳನ್ನು ಜಾಣ್ಮೆಯಿಂದ ಪರಿಹರಿಸಿಕೊಳ್ಳಿ
Published 11 ಅಕ್ಟೋಬರ್ 2024, 22:45 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಹು ಕೆಲಸಗಳ ಹೊಣೆ ಇರುವ ನಿಮಗೆ ಇಂದಿನ ವಿನಾಕಾರಣದ ಅಲೆದಾಟದಿಂದ ಬೇಸರ ಮೂಡುತ್ತದೆ. ನಿಮ್ಮ ಸಹಭಾಗಿಗೆ ಅಥವಾ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಹೆಚ್ಚಿನ ಆನಂದ ಸಿಗುವುದು.
ವೃಷಭ
ತೆರಿಗೆ ಪಾವತಿಯ ವಿಚಾರದಲ್ಲಿ ಹಿರಿಯರ ಸಲಹೆ ಸಹಕಾರವನ್ನು ಕೇಳುವುದು ಸರಿ ಎನಿಸಲಿದೆ. ಜೀವಶಾಸ್ತ್ರದ ಶೈಕ್ಷಣಕ ರಂಗದಲ್ಲಿರುವ ವಿದ್ಯಾರ್ಥಿಗಳಿಗೆ ಹಾಗು ಅಧ್ಯಾಪಕರಿಗೆ ಇಂದಿನ ದಿನವು ಯಶೋದಾಯಕವಾಗಿರುತ್ತದೆ.
ಮಿಥುನ
ಅನೇಕ ದಿನಗಳಿಂದ ನೀವು ಸೇವಿಸುತ್ತಿರುವ ಅಪಥ್ಯದ ಆಹಾರದ ಪರಿಣಾಮವಾಗಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವ ಸಾಧ್ಯತೆಗಳಿದೆ. ತಂದೆಯವರಿಗೆ ಇದ್ದಂತಹಾ ಹೃದಯ ಸಂಬಂಧಿ ವ್ಯಾಧಿಯು ಉತ್ತಮ ರೀತಿಯಲ್ಲಿ ಸುಧಾರಿಸಲಿದೆ.
ಕರ್ಕಾಟಕ
ನೀವು ಮಾಡಿದ ತಪ್ಪುಗಳನ್ನು ಸಮರ್ಥಿಸಿಕೊಳ್ಳುವಂತಹ ಕೆಲಸದ ಬದಲು ತಪ್ಪನ್ನು ಸರಿಪಡಿಸಿಕೊಳ್ಳುವ ಬಗ್ಗೆ ನಿಮ್ಮ ಆಲೋಚನೆಗಳು, ನಿಮ್ಮ ದೈಹಿಕ ಶ್ರಮವಿರಲಿ. ವಿವಿಧ ರೀತಿಯಲ್ಲಿ ಧನಾದಾಯದ ಮಾರ್ಗವು ಗೋಚರಿಸಲಿದೆ.
ಸಿಂಹ
ಇಂದು ನಿಮ್ಮ ಉದಾರ ಮನೋಭಾವವು ವ್ಯವಹಾರದಲ್ಲಿ ನಷ್ಟ ಅಥವಾ ಸೋಲೆನಿಸಿದರೂ, ಮುಂದಿನ ದಿನಗಳಲ್ಲಿ ನಿಮಗೆ ಅನುಕೂಲವನ್ನು ಒದಗಿಸಲಿದೆ. ಕುಟುಂಬದ ಸದಸ್ಯರಲ್ಲಿ ಆದಷ್ಟು ತಾಳ್ಮೆ-ಸಮಾಧಾನದಿಂದ ವರ್ತಿಸಬೇಕಾದೀತು.
ಕನ್ಯಾ
ಈ ದಿನದ ಕೆಲಸಕ್ಕೆ ಇನ್ನೊಂದು ಕೆಲಸ ಜೊತೆ ಜೊತೆಗೂಡಿ ಮುಕ್ತಾಯದ ಹಂತ ತಲುಪಲು ಸಾಧ್ಯವಾಗುವುದಿಲ್ಲ. ರಾಜಕೀಯ ವಿದ್ಯಮಾನಗಳಿಂದಾಗಿ, ಸಾಮಾಜಿಕ ಕೆಲಸಗಳಿಗಾಗಿ ಓಡಾಟ ಆಧಿಕಗೊಳ್ಳುವುದು.
ತುಲಾ
ಈವರೆಗೂ ಕೂಡಿಟ್ಟ ಶ್ರಮದ ಠೇವಣ ಹಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಬೇಕಾಗುವುದು. ಇಂದು ನ್ಯಾಯಮೂರ್ತಿಗಳಿಗೆ, ಆಡಳಿತ ಅಧಿಕಾರಿಗಳಿಗೆ ಸತ್ಫಲಗಳು ಸಿಗಲಿವೆ. ಯೋಗಾಸನ ಶಿಕ್ಷಕರಿಗೆ ಬೇಡಿಕೆ ಹೆಚ್ಚಾಗುವುದು.
ವೃಶ್ಚಿಕ
ನಿಮ್ಮ ಹೆಜ್ಜೆ ಬಿರುಸಾಗಿ ಮತ್ತು ಕೇವಲ ನಿಮಗಲ್ಲದೇ ಸಂಸ್ಥೆಗೂ ಲಾಭದಾಯಕವಾಗಿ ಸಾಗಲಿದೆ. ಕಾರ್ಯಕ್ಷೇತ್ರದಲ್ಲಿ ಶತ್ರುಗಳು ಹಿನ್ನಡೆ ಅನುಭವಿಸಿ ಮನಸ್ಸಿಗೆ ಸಮಾಧಾನ ದೊರಕಲಿದೆ. ಸಮಾಜ ಸೇವೆಯಲ್ಲಿ ನಿಮ್ಮ ಶ್ರಮವಿರಲಿ.
ಧನು
ನಿಮ್ಮಿಂದ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ಭದ್ರ ನೆಲೆ ಸಿಕ್ಕಿ ಮನಸ್ಸಿಗೆ ಹೆಚ್ಚಿನ ನೆಮ್ಮದಿಯಾಗಲಿದೆ. ಚೋರ ಕೃತ್ಯಗಳಿಗೆ ಪರಿಹಾರವಾಗಿ ನಿಮ್ಮ ವ್ಯವಹಾರ ಕ್ಷೇತ್ರದ ರಕ್ಷಣಾ ದೇವತೆಯನ್ನು ಆರಾಧಿಸಿ.
ಮಕರ
ಪ್ರಭಾವಶಾಲಿ ವ್ಯಕ್ತಿಯೊಂದಿಗಿನ ಭೇಟಿಯನ್ನು ತಳ್ಳಿಹಾಕದೆ ಅವರಿಂದ ನಿಮ್ಮ ವೃತ್ತಿ ಕ್ಷೇತ್ರಕ್ಕೆ ಲಾಭ ಉಂಟಾಗುವಂತೆ ನೋಡಿಕೊಳ್ಳುವ ಪ್ರಯತ್ನಮಾಡಿ. ಸಮಸ್ಯೆಗಳು ಹೆಚ್ಚುವುದಕ್ಕೆ ಮುಂಚಿತವಾಗಿಯೇ ಜಾಣ್ಮೆಯಿಂದ ಪರಿಹರಿಸಿಕೊಳ್ಳಿ.
ಕುಂಭ
ಕಾರ್ಯಗಳ ಒತ್ತಡದ ನಡುವೆ ಕುಟುಂಬದ ಸಮಸ್ಯೆಯತ್ತ ಗಮನ ನೀಡುವುದನ್ನು ಮರೆಯದಿರಿ. ಯಾರೋ ಮಾಡಿದ ತಪ್ಪುಗಳಿಗೆ ನೇರೆ ಹೊಣೆಗಾರಿಕೆ ನೀವಾಗುವಿರಿ. ಆಹಾರವನ್ನು ಹಾಳು ಮಾಡುವುದು ಸರಿಯಲ್ಲ.
ಮೀನ
ವೃತ್ತಿ ಬದುಕಿನಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ವಿರೋಧ ಬರಲಿದೆ ಆದ್ದರಿಂದ ವಿಶ್ವಾಸದಲ್ಲಿ ಯಾವುದೇ ರೀತಿಯ ಸಲಹೆ ಸೂಚನೆಯನ್ನು ನೀಡಬೇಡಿ. ಪಾಲುದಾರಿಕೆ ವ್ಯವಹಾರದಲ್ಲಿ ಚರ್ಚೆಗೆ ಆಸ್ಪದ ನೀಡದಿರಿ.
ADVERTISEMENT
ADVERTISEMENT