ದಿನ ಭವಿಷ್ಯ: ಮಕ್ಕಳ ಯೋಗಕ್ಷೇಮ ನೋಡುವುದನ್ನು ಮರೆಯಬೇಡಿ
Published 11 ಜೂನ್ 2025, 19:16 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೂಪಮಂಡೂಕದ ಭಾವನೆಯನ್ನು ಕಳಚಿಕೊಂಡು ಮುನ್ನುಗ್ಗಿದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆಯುವಿರಿ ಎಂಬುವುದರಲ್ಲಿ ಎರಡನೆ ಮಾತಿಲ್ಲ. ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ವೃಷಭ
ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಬಹುಭಾಷಾ ಕಲಿಕೆಯಂಥ ಅವಕಾಶ ಸಿಗಲಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ವಿಷ ಅನಿಲ, ದೂಳಿನಿಂದ ಉಸಿರಾಟ ಸಮಸ್ಯೆಗಳು ಎದುರಾಗಬಹುದು.
ಮಿಥುನ
ಸಾಂಸಾರಿಕ ವಿಚಾರಕ್ಕೆ ಸಂಬಂಧಿಸಿದಂತೆ ಆತುರದಿಂದ ಯಾವುದೇ ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ನಂಬದಿರುವ ಪರಿಸ್ಥಿತಿ ಬರಬಹುದು. ವೃತ್ತಿರಂಗದಲ್ಲಿ ಮೋಸ ಹೋಗಬಹುದು.
ಕರ್ಕಾಟಕ
ನಿಮ್ಮದಲ್ಲದ ಕ್ಷೇತ್ರದವರಿಗೆ ಸೂಚನೆಗಳನ್ನು ನೀಡಲು ಹೋಗಿ ಮುಖಭಂಗ ಮಾಡಿಕೊಳ್ಳದಿರಿ. ವಾಹನ ಚಾಲನೆಯಲ್ಲಿ ರಕ್ಷಣೆಯ ಜತೆಯಲ್ಲಿ ಸಹಪ್ರಯಾಣಿಕರ ಬಗೆಗೆ ಗಮನ ವಹಿಸಿ.
ಸಿಂಹ
ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರವುದು. ಕಾನೂನು ವಿದ್ಯಾರ್ಥಿಗಳು ಮುಂಬರುವ ಪರೀಕ್ಷೆಗಾಗಿ ಹೆಚ್ಚು ಮಾಹಿತಿಯನ್ನು ಸಂಗ್ರಹಿಸಲು ಉತ್ತಮ ದಿನ. ಹಳದಿ ವರ್ಣ ಶುಭದಾಯಕ.
ಕನ್ಯಾ
ವಾಸ್ತವವಾಗಿ ಕಚೇರಿಯಲ್ಲಿರುವ ವಿಷಯಗಳು ಹಾಗೂ ನಿಮ್ಮನ್ನು ತಲುಪುತ್ತಿರುವ ವಿಚಾರಗಳ ನಡುವೆ ಇರುವ ವ್ಯತ್ಯಾಸ ತಿಳಿಯುತ್ತದೆ. ಪರಸ್ಥಳದಲ್ಲಿ ಚಿನ್ನಾಭರಣ ಕಳವಾಗುವ ಸಾಧ್ಯತೆ ಇದೆ.
ತುಲಾ
ಗಣ್ಯರ ಭೇಟಿಯಲ್ಲಿ ಉಡುಗೆ ತೊಡುಗೆಗಳು ಪ್ರಾಮುಖ್ಯತೆ ಹೊಂದುತ್ತವೆ. ಮನೋಬಲವು ಹೆಚ್ಚಿರುವುದರಿಂದ ದೈಹಿಕ ವೈಕಲ್ಯ ಅಡ್ಡಿ ಪಡಿಸುವುದಿಲ್ಲ.
ವೃಶ್ಚಿಕ
ಮಾತೃ ಸಂಬಂಧಿ ಬಂಧುಗಳ ಆಗಮನದಿಂದ ಸಂತೋಷ ಹೊಂದು ವಿರಿ. ಸುಖಮಯವಾಗಿರುವ ಜೀವನವನ್ನು ಮೂರನೇ ವ್ಯಕ್ತಿಗಳ ಮಾತನ್ನು ಕೇಳಿ ಹಾಳುಮಾಡಿಕೊಳ್ಳದಿರಿ. ಕಚೇರಿಯಲ್ಲಿ ಸಂತೋಷವಾಗಿರುವಿರಿ.
ಧನು
ಮಾಡಿದ ತಪ್ಪಿಗೆ ತುಂಬಾ ವ್ಯಥೆ ಪಡುತ್ತೀರಿ. ಕ್ಷಮೆಗಾಗಿ ಬಹಳ ಪ್ರಯತ್ನ ಪಡುತ್ತೀರಿ. ಉದ್ಯೋಗ ಬದಲಾವಣೆ ವಿಚಾರದಲ್ಲಿದ್ದ ಗೊಂದಲದ ವಾತಾವರಣವು ದಿನದಿಂದ ದಿನಕ್ಕೆ ಜಾಸ್ತಿಯಾಗುವುದು.
ಮಕರ
ಮೊನ್ನೆಯಷ್ಟೆ ಇತ್ಯರ್ಥವಾಯಿತು ಎಂದುಕೊಂಡ ಕುಟುಂಬ ಕಲಹವು ಮತ್ತೆ ಹೊಗೆಯಾಡುವ ಸಾಧ್ಯತೆ ಇದೆ. ಸಾಧು ಸಂತರ ಮಾತುಗಳು ಆಕರ್ಷಿಸುವುದು. ಮಕ್ಕಳ ಯೋಗಕ್ಷೇಮ ನೋಡುವುದನ್ನು ಮರೆಯಬೇಡಿ.
ಕುಂಭ
ತಲೆನೋವಿನಂಥ ಕಾಯಿಲೆಗಳು ಬರಬಹುದಾದ ಸಾಧ್ಯತೆ ಇರುವುದರಿಂದ ಕಂಪ್ಯೂಟರ್, ಟಿ.ವಿ ಮತ್ತು ಮೊಬೈಲ್ ಪರದೆಯಿಂದ ದೂರ ಇರಿ. ವೃತ್ತಿ ಜೀವನದಲ್ಲಿ ಅತ್ಯಂತ ಕ್ಲಿಷ್ಟಕರ ಸವಾಲುಗಳು ಎದುರಾಗಲಿವೆ.
ಮೀನ
ಅಂದುಕೊಂಡ ಕೆಲಸಗಳು ನಿರ್ವಿಘ್ನವಾಗಿ ನಡೆಯಲು ಗಣಪತಿ ದೇವಾಲಯಕ್ಕೆ ಭೇಟಿ ಕೊಡಿ. ಸ್ನೇಹಿತರ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿಕೆಯು ಮನಸ್ಸಿಗೆ ಖುಷಿಯನ್ನು ತರಲಿದೆ.